ನುಡಿದಂತೆ ನಡೆದ ಜನನಾಯಕ ಕೃಷ್ಣಗೌಡ್ರು ಪಾಟೀಲ ಸವಿತಾ ಸಮಾಜದ ಅಭಿವೃದ್ಧಿಗೆ 10 ಲಕ್ಷ ಅನುದಾನ ಮಂಜೂರು

ನುಡಿದಂತೆ ನಡೆದ ಜನನಾಯಕ ಕೃಷ್ಣಗೌಡ್ರು ಪಾಟೀಲ ಸವಿತಾ ಸಮಾಜದ ಅಭಿವೃದ್ಧಿಗೆ 10 ಲಕ್ಷ ಅನುದಾನ ಮಂಜೂರು  10 lakh grant sanctioned for development of Jannayak Krishnagoudru Patil Savita Samaj, who walked th

ಗದಗ 01: "ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಗೆ ಸ್ಪಂದಿಸುವುದೇ ನಿಜವಾದ ಜನಸೇವೆ" ಎಂಬುದನ್ನು ಸಚಿವರ ಸುಪುತ್ರರಾದ ಶ್ರೀ ಕೃಷ್ಣಗೌಡ್ರು ಪಾಟೀಲರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗದಗ ನಗರದ ಗಂಗಿಮಡಿ ಬಡಾವಣೆಯಲ್ಲಿ ಸವಿತಾ ಸಮಾಜ ಸುಧಾರಣಾ ಸಂಘದ ಸಮುದಾಯ ಭವನ ಹಾಗೂ ನಾಗದೇವರ ದೇವಸ್ಥಾನದ ನಿರ್ಮಾಣಕ್ಕಾಗಿ ಅವರು ?10 ಲಕ್ಷ ವಿಶೇಷ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಸಮಾಜದ ದಶಕಗಳ ಕನಸಿಗೆ ಜೀವ ತುಂಬಿದ್ದಾರೆ. *ತ್ವರಿತ ಸ್ಪಂದನೆ - ಧೀಮಂತ ನಾಯಕತ್ವ* ಸವಿತಾ ಸಮಾಜದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಕೋರಿ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ  ನಿಯೋಗವು ಇತ್ತೀಚೆಗಷ್ಟೇ ಮನವಿ ಸಲ್ಲಿಸಿತ್ತು.

ಮನವಿಯ ತೀವ್ರತೆಯನ್ನು ಅರಿತ ಕೃಷ್ಣಗೌಡ್ರು ಪಾಟೀಲರು, ಕೇವಲ ಭರವಸೆ ನೀಡದೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅನುದಾನ ಮಂಜೂರು ಮಾಡಿಸಿದ್ದಲ್ಲದೆ, ಇಂದು ಅಧಿಕೃತ ಆದೇಶ ಪತ್ರವನ್ನೂ ಬಿಡುಗಡೆ ಮಾಡಿ ದ. 10 ರಂದು ಗುದ್ದಲಿ ಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.      ಅವರ ಈ ಕ್ಷಿಪ್ರ ನಿರ್ಧಾರ ಮತ್ತು ಕೊಟ್ಟ ಮಾತು ಉಳಿಸಿಕೊಳ್ಳುವ ಗುಣವು ಅವರೊಬ್ಬ ಜನಪರ ಹಾಗೂ ಧೀಮಂತ ನಾಯಕ ಎಂಬುದಕ್ಕೆ ಸಾಕ್ಷಿಯಾಗಿದೆ.  

ಕೃಷ್ಣಾ ಎಚ್‌. ಹಡಪದ ಅವರ ನಾಯಕತ್ವಕ್ಕೆ ಸಂದ ಜಯ* ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್‌. ಹಡಪದ ಅವರ ದೂರದೃಷ್ಟಿ ಮತ್ತು ಅಭೂತಪೂರ್ವ ಸತತ ಪ್ರಯತ್ನಕ್ಕೆ ಇಂದು ದೊಡ್ಡ ಮಟ್ಟದ ಯಶಸ್ಸು ಲಭಿಸಿದೆ. ರಾಜ್ಯ ನಾಯಕರಾದ ಹನುಮಂತಪ್ಪ ರಾಂಪೂರ ಅವರ ಮಾರ್ಗದರ್ಶನದಲ್ಲಿ ಹಗಲಿರುಳು ಶ್ರಮಿಸಿದ ಈ ನಿಯೋಗವು, ಸಮಾಜದ ಏಳಿಗೆಗಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ ಯಶಸ್ವಿಯಾಗಿದೆ. ಇದು ಜಿಲ್ಲೆಯ ಸಮಸ್ತ ಸವಿತಾ ಸಮಾಜದ ಬಾಂಧವರ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ.  

*ಸಿಹಿ ಹಂಚಿ ಸಂಭ್ರಮ* ಅನುದಾನ ಮಂಜೂರಾದ ಖುಷಿಯಲ್ಲಿ ಇಂದು ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್‌. ಹಡಪದ ಅವರ ನೇತೃತ್ವದ ನಿಯೋಗವು  ಕೃಷ್ಣಗೌಡ್ರು ಪಾಟೀಲರನ್ನು ಭೇಟಿಯಾಗಿ, ಅವರಿಗೆ ಸಿಹಿ ತಿನ್ನಿಸುವ ಮೂಲಕ ಹಾರ್ದಿಕವಾಗಿ ಅಭಿನಂದಿಸಿದರು.  ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳಾದ ಹನುಮಂತಪ್ಪ ರಾಂಪೂರ ಅವರು ಮಾತನಾಡಿ "ಕೃಷ್ಣಗೌಡ್ರು ಪಾಟೀಲರ ವ್ಯಕ್ತಿತ್ವವು ಸರಳತೆ ಮತ್ತು ಅಭಿವೃದ್ಧಿ ಪರ ಚಿಂತನೆಯ ಸಂಗಮವಾಗಿದೆ. ಅವರ ಈ ಸಹಕಾರ ಸಮಾಜದ ಇತಿಹಾಸದಲ್ಲಿ ಸದಾ ಸ್ಮರಣೀಯ," ಎಂದು ಶ್ಲಾಘಿಸಿದರು.      ಈ ಐತಿಹಾಸಿಕ ಕ್ಷಣದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಪ್ರಮುಖರು, ಹಿರಿಯರು ಹಾಗೂ ಸಮಾಜದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.