ಕೊಡಗು ಸತ್ರಸ್ತರ ನೆರವಿಗೆ ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದಿಂದ 1ಲಕ್ಷ ರೂ. ಚೆಕ್ ವಿತರಣೆ

    ಕೊಪ್ಪಳ 12: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ನೆರವಿಗೆ ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ರೂ. 1ಲಕ್ಷ ಮೌಲ್ಯದ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಂಗಳವಾರದಂದು ನೀಡಲಾಯಿತು. 

ಕೊಡಗು ಜಿಲ್ಲೆಯಲ್ಲಿ ಕಳೆದ ತಿಂಗಳಿನಲ್ಲಿ ಅತೀವೃಷ್ಠಿ ಮಳೆಯಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಘೋರವಾದ ಅನಾಹುತಗಳು ಸಂಭವಿಸಿದ್ದು, ಜೀವ ಹಾನಿ, ಆಸ್ತಿ, ಮನೆ, ಕೃಷಿ, ಭೂಮಿ, ಜಾನುವಾರುಗಳನ್ನು ಕಳೆದುಕೊಂಡು ನಿಲ್ಲಲು ನೆಲ ಹಾಗೂ ಆಹಾರ ವಿಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಕೃಷಿಕ ಸಮಾಜವು ಮಂಗಳವಾರದಂದು ತುತರ್ಾಗಿ ಕಾರ್ಯಕಾರಿ ಸಭೆಯಲ್ಲಿ ಚಚರ್ಿಸಿ ನಿರ್ಣಯಿಸಿದಂತೆ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನೀದಿಗೆ ರೂ. 1,00,000/- ಗಳನ್ನು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ನೀಡಿದ್ದಾರೆ.  

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ಉಪಾಧ್ಯಕ್ಷ ಚಂದಪ್ಪ ತಳವಾರ, ರಾಜ್ಯ ಪ್ರತಿನಿಧಿ ಶಂಕ್ರಪ್ಪ ಚವಡಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.