ಜಮೀನು ಪರಿಹಾರದ ಚೆಕ್ ನೀಡಲು 1ಲಕ್ಷ ಲಂಚ: ಅಧಿಕಾರಿ ಬಂಧನ
1 lakh bribe to issue land compensation cheque: Officer arrested
ಬೆಳಗಾವಿ 28: ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರದ ಚೆಕ್ ನೀಡಲು 1ಲಕ್ಷ ಲಂಚ ಕೇಳಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರನ್ನು ಬಂಧಿಸಲಾಗಿದೆ.
ರಾಯಬಾಗ ತಾಲೂಕಾ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿ ಯವರ 14 ಗುಂಟೆ ಜಮೀನನು ಮುಗಲಖೊಡ್ ಮತ್ತು ಹಾರೂಗೇರಿ ಪಟ್ಟಣ ಗಳಿಗೆ ಅಮೃತ ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾದಿನ ಪಡಿಕೊಳ್ಳವ ಸಲುವಾಗಿ ಸರಕಾರ ದಿಂದ ಮಂಜೂರಾದ ರೂ 18 ಲಕ್ಷ್ಮ ಅನುದಾನದ ಚೆಕ್ ನ್ನು ಮಂಜೂರಿಸಿ ಕೊಡಲು ರೂ 1ಲಕ್ಷ ಲಂಚ ಕ್ಕೆ ಬೇಡಿಕೆ ಇಟ್ಟ ಆಪಾದಿತ್ ಅಧಿಕಾರಿ ಅಶೋಕ್ ಶಿರೂರ ಇಇ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಳಗಾವಿ ವಿಭಾಗ ಬೆಳಗಾವಿ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಠಾಣೆ ಬೆಳಗಾವಿ ಯಲ್ಲಿ ದಿನಾಂಕ 17-10-2025 ರಂದು ಪ್ರಕರಣ ಸಂಖ್ಯೆ 16/2025 ಕಲಂ 7(ಚಿ) ಭ್ರಷ್ಟಾಚಾರ ಕಾಯ್ದೆ ಅಡಿ ಕಋ ನಿರಂಜನ ಪಾಟೀಲ್ ರವರು ದೂರು ದಾಖಲಿಸಿ ಕೊಂಡು ತನಿಖೆ ಕೈಕೊಂಡಿದ್ದರು
ಈ ಬಗ್ಗೆ ಹಣಮಂತರಾಯ ಠಿ ಕ ಲೋ ಬೆಳಗಾವಿ ರವರ ಮಾರ್ಗದರ್ಶನ ದಲ್ಲಿ ಅಪಾದಿತ್ ಅಧಿಕಾರಿ ಅಶೋಕ್ ಶಿರೂರು ಇಇ ರವರನ್ನು ದಿ. 27ರಂದು ಅವರ ಕಚೇರಿಯಲ್ಲಿ ತನಿಖಾಧಿಕಾರಿ ನಿರಂಜನ್ ಪಾಟೀಲ್ ಮತ್ತು ಸಿಬ್ಬಂದಿಗಳು ಬಂಧಿಸಿ ತನಿಖೆ ಕೈಕೊಂಡಿರುತ್ತಾರೆ.
ತನಿಖೆ ಕಾಲಕ್ಕೆ ಸಹಾಯಕರಾಗಿ ಗೋವಿಂದಗೌಡ ಪಾಟೀಲ್ ಕಋ ಮತ್ತು ಸಿಬ್ಬಂದಿಗಳಾದ ರವಿ ಮಾವರ್ಕರ್, ಗೀರೀಶ್, ಶಶಿಧರ್, ಸುರೇಶ ಮತ್ತು ಮಲ್ಲಿಕಾರ್ಜುನ ಥೈಕಾರ್ ಅವರೂ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 