ಲೋಕದರ್ಶನ ವರದಿ
ರಾಯಬಾಗ: ಕೃಷ್ಣಾ ನದಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರಕಾರ ಮನೆಗಳನ್ನು ಪುನಃ ನಿಮರ್ಿಸಿಕೊಳ್ಳಲು ಸಂತ್ರಸ್ತ ಕುಟುಂಬದವರ ಖಾತೆಗಳಿಗೆ ಮೊದಲ ಕಂತವಾಗಿ ಒಂದು ಲಕ್ಷರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ತಾಲೂಕಿನ ನಸಲಾಪೂರ, ಬಾವನಸೌಂದತ್ತಿ, ಹಳೆದಿಗ್ಗೇವಾಡಿ ಮತ್ತು ಭಿರಡಿ ಗ್ರಾಮಗಳ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಗಾಂಧಿ ಜಯಂತಿ ದಿನದಂದು ಸಾಂಕೇತಿಕವಾಗಿ ಮನೆ ಕಟ್ಟಡ ನಿಮರ್ಾಣಆದೇಶ ಪತ್ರಗಳನ್ನು (ವಕರ್್ಆರ್ಡರ್) ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಡಿಯೂರಪ್ಪನವರು ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿ, ಈಗಾಗಲೇ ತಾತ್ಕಾಲಿಕ ಪರಿಹಾರಧನ ಚೆಕ್ಗಳನ್ನು ನೀಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಈಗ ಪ್ರವಾಹದಿಂದ ಪೂರ್ಣವಾಗಿ ಹಾನಿಗೊಂಡಿರುವ ಮನೆಗಳಿಗೆ 5 ಲಕ್ಷ, ಭಾಗಶಃ ಹಾನಿಗೊಂಡ ಮನೆಗಳಿಗೆ 1 ಲಕ್ಷ ಮತ್ತುಅಲ್ಪಸ್ವಲ್ಪ ಹಾನಿಗೊಂಡ ಮನೆಗಳಿಗೆ 25 ಸಾವರಿರೂ. ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಂತ್ರಸ್ತರು ಸರಕಾರದ ಹಣವನ್ನು ಸರಿಯಾಗಿ ಸದ್ಬಳಕೆ ಮಾಡುವಂತೆ ಸೂಚಿಸಿದರು.
ತಹಶೀಲ್ದಾರ ಡಿ.ಎಚ್.ಕೋಮರ, ತಾ.ಪಂ.ಇಒ ಸುದೀಪ ಚೌಗಲಾ, ಡಿಕೆಎಸ್ಎಸ್ಕೆ ನಿದರ್ೇಶಕ ಭರತೇಶ ಬನವಣೆ, ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ, ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ತಾಂಬಟ, ಮಹಾದೇವ ಚೌಗಲಾ, ತಾತ್ಯಾಸಾಹೇಬ ಕಾಟೆ, ಕೆ.ಕೆ.ಮೈಶಾಳೆ, ಬಸವರಾಜಡೋಣವಾಡೆ, ಅನೀಲ ಹಂಜೆ, ಮಹಾದೇವ ಬೋರಗಾಂವೆ, ಮಲ್ಲಪ್ಪ ಮೈಶಾಳೆ, ಗಂಗಾಧರ ಮೈಶಾಳೆ, ಅಣ್ಣಾಸಾಬ ಖೆಮಲಾಪೂರೆ, ಸದಾಶಿವ ಘೋರ್ಪಡೆ ಸೇರಿದಂತೆ ಫಲಾನುಭವಿಗಳು ಮತ್ತುಗ್ರಾಮಸ್ಥರು ಉಪಸ್ಥಿತರಿದ್ದರು.