ಜಗತ್ತಿನಾದ್ಯಂತ 1.2 ಮಿಲಿಯನ್ ಕೋವಿಡ್‌-19 ಪ್ರಕರಣ: ಜಾನ್ಸ್‌ ಹಾಪ್‌ಕಿನ್ಸ್‌

ವಾಷಿಂಗ್ಟನ್, ಏಪ್ರಿಲ್ 4, ವಿಶ್ವಾದ್ಯಂತ ಕೋವಿಡ್‌-19 ಪ್ರಕರಣಗಳ ಸಂಖ್ಯೆ 1.2 ದಶಲಕ್ಷಕ್ಕೆ  ತಲುಪಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಶನಿವಾರ ಸಂಜೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.ವಿಶ್ವಾದ್ಯಂತ  ಒಟ್ಟು 1,201,591 ಜನರಿಗೆ ಕೊರೋನವೈರಸ್ ಸೋಂಕು ತಗುಲಿದ್ದು, 64,703 ಮಂದಿ  ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್  ಎಂಜಿನಿಯರಿಂಗ್ ಲೆಕ್ಕಹಾಕಿದೆ.ಅಮೆರಿಕದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ 3,11,301 ಪ್ರಕರಣ, ನಂತರ ಸ್ಪೇನ್‌ನಲ್ಲಿ 1,26,168 ಪ್ರಕರಣಗಳು, 11,947 ಸಾವುಗಳು ಸಂಭವಿಸಿವೆ.ಇಟಲಿಯಲ್ಲಿ 124,632 ಪ್ರಕರಣಗಳು ವರದಿಯಾಗಿದ್ದು, ವಿಶ್ವದ ಅತಿ ಹೆಚ್ಚು ಸಾವಿನ ಸಂಖ್ಯೆ 15,362 ಇಲ್ಲಿ ಸಂಭವಿಸಿದೆ.