“ಶಿಕ್ಷಕ-ಪಾಲಕ ಮಕ್ಕಳ ಭವಿಷ್ಯ ನಿರ್ಮಾಣದ ಎರಡು ಚಕ್ರಗಳು” ಶ್ರೀ ಎಚ್ ಎಚ್ ಕೊಪ್ಪಳ
“Teacher-Guardian: Two Wheels of Building the Future of Children” Shri H.H. Koppal
“ಶಿಕ್ಷಕ-ಪಾಲಕ ಮಕ್ಕಳ ಭವಿಷ್ಯ ನಿರ್ಮಾಣದ ಎರಡು ಚಕ್ರಗಳು” ಶ್ರೀ ಎಚ್ ಎಚ್ ಕೊಪ್ಪಳ
ಗದಗ 12: ವಿದ್ಯಾರ್ಥಿ ತನ್ನ ಜೀವನವನ್ನು ನಿರ್ಮಿಸಿಕೊಳ್ಳಲು ಇಬ್ಬರ ಪಾತ್ರ ಅತ್ಯಮೂಲ್ಯವಾದದ್ದು, ಒಬ್ಬ ವಿದ್ಯಾರ್ಥಿಯ ಯಶಸ್ಸಿಗೆ ಬೆನ್ನೆಲುಬಾಗಿ ನಿಲ್ಲುವವನು ಒಬ್ಬ ಪಾಲಕನು ಅಷ್ಟೆ ಮಹತ್ವ ಬೀರುವವನು ಇನ್ನೊಬ್ಬನು ಶಿಕ್ಷಕ ಆದ್ದರಿಂದ ಸಧೃಡ ಸಮಾಜ ನಿರ್ಮಾಣವಾಗಬೇಕಾದರೆ ಪಾಲಕರು ಮತ್ತು ಶಿಕ್ಷಕರು ಒಂದು ರಥದ ಎರಡು ಚಕ್ರಗಳಿದಂತೆ ಆದ್ದರಿಂದ ಇಬ್ಬರೂ ಜವಾಬ್ದಾರಿಯನ್ನು ವಹಿಸಬೇಕಾಗಿದೆ ಎಂದು ಪಾಲಕರ ಸಭೆಯಲ್ಲಿ ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿದ ಎಚ್ ಎಚ್ ಕೊಪ್ಪಳ ಮಾತನಾಡುತ್ತಿದ್ದರು.
ಅವರು ಸ್ಥಳಿಯ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂಘಟಿಸಿದ್ದ ಕಲಾ ವಿಭಾಗದ ವಿದ್ಯಾರ್ಥಿಗಳ ಪಾಲಕರನ್ನು ಉದ್ದೇಶಿಸಿ ಮಾತನಾಡುತ್ತಾ, ದುರಾದೃಷ್ಟವೆಂಬತೆ ಇಂದಿನ ವಿದ್ಯಾರ್ಥಿಗಳು ಶಿಕ್ಷಕ ಹಾಗೂ ಪಾಲಕರ ಮಾರ್ಗದರ್ಶನವನ್ನು ಕಡೆಗಾಣಿಸಿ ಇಂದಿನ ಋಣಾತ್ಮಕ ವಿಷಯಗಳನ್ನು ಬೆನ್ನತ್ತಿ ಚಿನ್ನದಂತ ತಮ್ಮ ಜೀವನವನ್ನು ಹಾಳುಮಾಡಿಕೊಳುತ್ತಿದ್ದಾರೆ ಎಂದು ತಮ್ಮ ಕಳವಳ ವ್ಯಕ್ತಪಡಿಸಿದರು.
ಪಾಲಕರಾದ ನಿಂಗಪ್ಪ ತಳವಾರ ಮಾತನಾಡುತ್ತಾ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರು ನಮ್ಮ ಮಕ್ಕಳ ಪ್ರಗತಿಗಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಸ್ವಾಗತಿಸಿ ಮಕ್ಕಳ ಸರ್ವೋತ್ಮುಕ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಪಾಲಕರ ಪರವಾಗಿ ಮಾತನಾಡಿದ ಶ್ರೀ ಎ.ಬಿ. ದಾವಣಗೇರಿ ಮಾತನಾಡಿ ಗುರು-ಶಿಷ್ಯರೊಂದಿಗೆ ಇಂದು ಪಾಲಕನು ತನ್ನ ಜವಾಬ್ದಾರಿಯನ್ನು ಸಮರ್ಕವಾಗಿ ನಿರ್ವಹಿಸಿದಾಗ ಮಾತ್ರ ಮಕ್ಕಳು ವಿದ್ಯಾವಂತರಾಗಿ ಸಾಮಾಜದಲ್ಲಿ ಮೌಲ್ಯಯುಕ್ತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ರಾದ ಡಾ ಎ.ಕೆ.ಮಠ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಕೆ.ಎಲ್ ಇ ಸಂಸ್ಥೆಯ ಸ್ಥಾಪನೆಯ ಉದ್ದೇಶ ಮತ್ತು ಈ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಲಭ್ಯವಿರುವ ಸೌಲಭ್ಯಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಅನುಪಾತವು ತೃಪ್ತಿದಾಯಕವಾಗದೇ ಇರುವುದು ದುರಾದೃಷ್ಟವೆಂದರು. ಕಳೆದ ಸಮಯ ಹಾಗೂ ಅವಕಾಶ ಭವಿಷ್ಯದಲ್ಲಿ ಸಿಗಲಾರವು ಆದ್ದರಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಋಣಾತ್ಮಕ ಚಿಂತನೆಗಳಿಂದ ಹೊರತಂದು ಧನಾತ್ಮಕವಾಗಿ ಚಿಂತಿಸುವಂತೆ ಪರಿವತಿ?ಸುವ ನಮ್ಮ ಪ್ರಯತ್ನಕ್ಕೆ ಪಾಲಕರು ನಮಗೆ ಕೈ ಜೋಡಿಸಬೇಕೆಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಪಾಲಕರಿಗೆ ಮಹಾವಿದ್ಯಾಲಯದ ಗ್ರಂಥಾಲಯ ಸೌಲಭ್ಯಗಳನ್ನು ಕುರಿತು ಗ್ರಂಥಪಾಲಕರಾದ ಡಾ.ಗುಂಡಪ್ಪ ನಾಯಕ ವಿವರಣೆ ನೀಡಿದರು.ವಿದ್ಯಾರ್ಥಿಗಳಿಗಾಗಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದಲ್ಲಿರುವ ಸೌಕರ್ಯಗಳನ್ನು ಕುರಿತು ದೈಹಿಕ ಶಿಕ್ಷಣ ನಿರ್ದೇಶಕರಾದ ವೀರಣ್ಣ ಬಡಿಗೇರ ವಿವರಿಸಿದರು.
ಮಹಾವಿದ್ಯಾಲಯದ ಎಲ್ಲ ಸಿಬ್ಬಂದ್ದಿ ವರ್ಗದವರು ಪಾಲಕರ ಸಭೆಯಲ್ಲಿ ತಮ್ಮ ಸ್ವಪರಿಚಯ ಮಾಡಿಕೊಂಡು ಕಾಯ?ಕ್ರಮದುದ್ದಕ್ಕೂ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವಿದ್ಯಾಥಿನಿಯರಾದ ಕುಮಾರಿ ಸೋನಿಯಾ ಹಾಗೂ ಕುಮಾರಿ ಪಲ್ಲವಿ ಪ್ರಾರ್ಥನೆ ಗೀತೆ ಹಾಡಿದರು ಗೃಹ ವಿಭಾಗದ ಮುಖ್ಯಸ್ಥರಾದ ವೀಣಾ ತಿರ್ಲಾಪೂರ(ಅಳಲಗೇರಿ) ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು, ಕನ್ನಡ ವಿಭಾಗದ ಪ್ರಧ್ಯಾಪಕರಾದ ಡಾ.ರಾಮಚಂದ್ರ ಪಡೆಸೂರ ಕಾಯ?ಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗವಹಿಸಿ ಸಹಕರಿಸದ ಎಲ್ಲರನ್ನೂ ಪಾಲಕರ ಸಂಘದ ಸಂಯೋಕರಾದ ಶ್ರೀ ಐ ಬಿ ಪಾಟೀಲ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 