“ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟ” ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಅಮೋಘ ಸಾಧನೆ”

 “ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟ” ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಅಮೋಘ ಸಾಧನೆ” “State Level Sports Meet for Pre-Degree Colleges” Excellent performance of Sri Vidyaniketan PU Coll

ಗಂಗಾವತಿ 28: ತಾಲ್ಲೂಕಿನ ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಡಿ. 13 ಮತ್ತು 14 ರಂದು ಹನುಮಸಾಗರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಜಂಪ್‌ರೋಪ್ ಸ್ಪರ್ಧೆಯಲ್ಲಿ ಅಮೋಘ ಸಾಧನೆಯನ್ನು ಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   

ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ಕುಮಾರ ರವಿತೇಜ ತಂದೆ ಸಿದ್ದೇಶ್ವರ ಮತ್ತು ಕುಮಾರ ಸಮರ್ಥ್‌ ತಂದೆ ಬಸವರಾಜ, ಅದೇ ರೀತಿ ಜುಲೈ ನಗರದ ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ  ಶ್ರೇಯಸ್ ತಂದೆ ಕಲ್ಲೋಳೆಪ್ಪ ಮತ್ತು ಮಣಿಶಂಕರ್ ತಂದೆ ಯಮನೂರ​‍್ಪ ಹಾಗೂ ಶ್ರೀ ವಿದ್ಯಾನಿಕೇತನ ವಾಣಿಜ್ಯ ಪಿ.ಯು ಕಾಲೇಜ್‌ನ ಕುಮಾರ ಉಲ್ಲಾಸ್ ರಾಜ್ಯ ಮಟ್ಟದ ಜಂಪ್‌ರೋಪ್ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಅತ್ಯುತ್ತಮ ಪ್ರದರ್ಶನವನ್ನು ನೀಡಿ, ಶ್ರೇಷ್ಠ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರನ್ನು ಸಂಸ್ಥೆಯ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ಅವರು ಅಭಿನಂದಿಸಿ, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅವುಗಳ ಸಮರ​‍್ಕ ಪ್ರಯೋಜನವನ್ನು ಪಡೆಯುವ ಮೂಲಕ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಅತ್ಯುನ್ನತ ಸಾಧನೆಗೈಯುವಂತೆ ಪ್ರೋತ್ಸಾಹಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಸಿಬ್ಬಂಧಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.