‘ಅತ್ಯುತ್ತಮ ನಟ’ ಪ್ರಶಸ್ತಿಗೆ ಯುವ ನಟ ಮನೀತ್ ಭಾಜನ
Young actor Maneeth wins ‘Best Actor’ award
ಲೋಕದರ್ಶನ ವರದಿ
ಧಾರವಾಡ 27: ಕನ್ನಡ ಚಿತ್ರರಂಗದ ನಾಯಕ ನಟನಾಗಿ ಭರವಸೆ ಮೂಡಿಸುತ್ತಿರುವ ಯುವ ನಟ ಮನೀತ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಲಭಿಸಿದೆ. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಧಾರವಾಡದ ಆಲೂರು ವೆಂಕಟರಾಯರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಾಂತೇಶ ಹಳೂರ ಅವರ ಕಥೆ ಆಧಾರಿತ, ಗುರುದತ್ ಮುಸುರಿ ನಿರ್ದೇಶನದ ‘ಡೆತ್ ಸರ್ಟಿಫಿಕೇಟ್’ ಚಿತ್ರದಲ್ಲಿನ ನಾಯಕ ಪಾತ್ರದ ಅಭಿನಯಕ್ಕಾಗಿ ಮನೀತ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಯಿತು.
ಹಿರಿಯ ನಟ, ಪರಿಸರವಾದಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ ಸುರೇಶ ಹೆಬ್ಬೀಕರ್, ನಿರ್ದೇಶಕ ನಟ ಅನಿರುದ್ಧ ಜತ್ಕರ್, ಗ್ಯಾರಂಟಿ ನ್ಯೂಸ್ನ ರಾಧಾ ಹಿರೇಗೌಡ, ನ್ಯೂಸ್ಜೋ ನ್ಯೂಸ್ನ ಹರೀಶ ನಾಗರಾಜು ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಹಿರಿಯ ಚಲನಚಿತ್ರ ನಟಿ ಭವ್ಯ ಹಾಗೂ ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಘಡಿ ಅವರು ಪ್ರಶಸ್ತಿ ಪತ್ರ ನೀಡಿ ಮನೀತ್ ಅವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮಂಜುನಾಥ ಹಗೇದಾರ, ಕಾರ್ಯಾಧ್ಯಕ್ಷ ಡಾ. ಕಲ್ಮೇಶ ಹಾವೇರಿಪೇಟ, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ, ಉಪಾಧ್ಯಕ್ಷ ಪ್ರಭು ಹಂಚಿನಾಳ, ಸಲಹಾ ಸಮಿತಿ ಸದಸ್ಯ ಹಾಗೂ ಚಲನಚಿತ್ರ ಪತ್ರಕರ್ತ ಡಾ. ಪ್ರಭು ಗಂಜಿಹಾಳ ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಡೆತ್ ಸರ್ಟಿಫಿಕೇಟ್’ ಚಿತ್ರದ ಕಥೆಗಾರ ಮಹಾಂತೇಶ ಹಳೂರ, ನಿರ್ದೇಶಕ ಗುರುದತ್ ಮುಸುರಿ, ಹಿರಿಯ ಹೋರಾಟಗಾರ ಹಾಗೂ ನ್ಯಾಯವಾದಿ ಬಿ.ಡಿ. ಹಿರೇಮಠ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿರುವ ‘ಡೆತ್ ಸರ್ಟಿಫಿಕೇಟ್’ ಚಿತ್ರಕ್ಕೆ ‘ಅತ್ಯುತ್ತಮ ನಟ’ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದು ನಟ ಮನೀತ್ ತಿಳಿಸಿದ್ದಾರೆ. ಸದ್ಯ ‘ಧ್ರುವನಕ್ಷತ್ರ’ ಕನ್ನಡ ಚಿತ್ರ ಹಾಗೂ ‘ಕೊಪ್ಪಂ’ ತಮಿಳು ಚಿತ್ರದಲ್ಲಿಯೂ ನಾಯಕ ನಟನಾಗಿ ಅಭಿನಯಿಸಿದ್ದು, ಎರಡೂ ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. ಪ್ರಶಸ್ತಿ ದೊರೆತಿರುವುದು ತಮ್ಮ ಅಭಿನಯದ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 