“ಜ್ಞಾನ ಬಂಧು ಸಂಸ್ಥೆಯಲ್ಲಿ ಗಣರಾಜ್ಯೋತ್ಸವ”
ಭಾಗ್ಯನಗರ 26 : ಪಟ್ಟಣದ ಜ್ಞಾನ ಬಂಧು ಸಂಸ್ಥೆಯಲ್ಲಿ ಅಧ್ಯಕ್ಷರಾದ ದಾನಪ್ಪ ಕವಲೂರ ಅವರು ಡಾಽಽ ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಶಿಕ್ಷಕಿಯಾದ ಶ್ವೇತಾ ಓಲಿ ಅವರು ಮಾತನಾಡಿ “ಡಾಽಽ ಬಿ.ಆರ್. ಅಂಬೇಡ್ಕರ್ ಅವರ ಜೀವನ ಹಿನ್ನಲೆ ಹಾಗೂ ಸಂವಿಧಾನದ ಮಹತ್ವನ್ನು ಕುರಿತು” ಮಕ್ಕಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರು ಮಾತನಾಡಿ “ಸಂವಿಧಾನವನ್ನು ಓದಿ ಅಥೈಸಿಕೊಂಡು ಅದರ ಆಶಯದಂತೆ ನಾವೆಲ್ಲರು ಬದುಕಬೇಕು, ಸಂವಿಧಾನ ರಚನಾ ಸಮಿತಿ ದೇಶದ ಹಿರಿಮೆಯ ಸಂಕೇತ, ಪ್ರಜೆಗಳಾದ ನಾವುಗಳು ಇಂದು ವ್ಯವಸ್ಥಿತ ಜೀವನ ನಡೆಸಲು ಸಂವಿಧಾನವೇ ಮೂಲ. ಸಂವಿಧಾನವು ಈ ದೇಶದ ಗ್ರಂಥ” ಎಂಬುದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜೆ. ರವೀಂದ್ರ, ಶಾಲೆಯ ಪ್ರಾಂಶುಪಾಲರಾದ ಲಿಲಿಯನ್ ಅಂಟೋನಿ, ಉಪ ಪ್ರಾಂಶುಪಾಲರಾದ ಜ್ಯೋತಿ ಎಸ್.ಎಸ್, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.
ಶಿಕ್ಷಕಿ ಸಾವಿತ್ರಿ ಬಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕಿ ಪ್ರೇಮಾ ಸ್ವಾಗತಿಸಿದರು ಶಿಕ್ಷಕಿ ಹೇಮಾ ಆರ್ ವಂದಿಸಿದರು.