ಜಿಲ್ಲಾ ಪಂಚಾಯತ ವತಿಯಿಂದ "ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಒಂದು ದಿನದ ಕಾರ್ಯಾಗಾರ

“One Day Workshop for Bank Managers” by Zilla Panchayat

ಜಿಲ್ಲಾ ಪಂಚಾಯತ ವತಿಯಿಂದ "ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಒಂದು ದಿನದ ಕಾರ್ಯಾಗಾರ 

ವಿಜಯಪುರ 21:  ನಗರದ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ಸೋಮವಾರ  ದಂದು  ಕೌಶಲ್ಯಾಭಿವೃದ್ದಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಒಂದು ದಿನದ ಬ್ಯಾಂಕ್ ವ್ಯವಸ್ಥಾಪಕರಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. 

ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ . ಬಿ ಎಸ್ ರಾಠೋಡ ರವರು ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿ, ಸ್ವಸಹಾಯ ಸಂಘಗಳಿಗೆ  ಬ್ಯಾಂಕ ಸಾಲ ಒದಗಿಸುವದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ, ಮತ್ತು ಓಖಐಒ ಯೋಜನೆಯಡಿ 6080 ಸಂಘ ರಚನೆ ಮಾಡಿದ್ದು, ಸುಮಾರು 65, ಸಾವಿರ ಕ್ಕೂ ಹೆಚ್ಚು ಮಹಿಳೆಯರು  ಈ ಯೋಜನೆಯ ಅನುಕೂಲ ಪಡೆಯುತ್ತಿದ್ದಾರೆ, ಅಋ ಸಾಲ ಪಡೆದು ಸ್ವಂತ ಕಿರು ಉದ್ಯಮ ಚಟುವಟಿಕೆ ಪ್ರಾರಂಬಿಸಿ, ಉದ್ಯಮಶೀಲತೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಗ್ರಾಮೀಣ ಭಾಗದ ಮಹಿಳೆಯರಿಗೆ ಬ್ಯಾಂಕ್ ವತಿಯಿಂದ ಮತಷ್ಟು ಸಹಕಾರ ನೀಡಿ, ಬ್ಯಾಂಕ್ ಸಾಲ ಮತ್ತು ಇಂಟರ್ ಸಬಮಿಷನ್ ಮಾಡಿಸಿಕೊಡಬೇಕು, ಹಣಕಾಸು ಸಾಕ್ಷರತೆ ಅರಿವು ಮೂಡುಸುವಂತೆ ಅವರು  ತಿಳಿಸಿದರು 

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ . ನೇತಾಜಿ ಗೌಡರ ಅವರು ಮಾತನಾಡಿ, ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು ಸ್ವ-ಸಹಾಯ ಸಂಘದ ಮಹಿಳೆಯರಿಗೆ ಅಕೌಂಟ್ ಓಪನಿಂಗ ಸಂದರ್ಭದಲ್ಲಿ ಹೆಚ್ಚಾಗಿ ಓಡಾಡಿಸದೆ, ಮತ್ತು ಯಾವುದೇ ಡಾಕ್ಯುಮೆಂಟ್ ಸಮಸ್ಯೆ ಒಡ್ಡಿ ಸಮಸ್ಯೆ ನೀಡದೆ, ತುರ್ತಾಗಿ ಸಂಘದ ಅಕೌಂಟ್ ಓಪನ ಮಾಡುವಲ್ಲಿ ಸಹಕಾರ ನೀಡಬೇಕು, ಮತ್ತು ಖಃಋ ಗೈಡಲೈನ್ಸ ಪಾಲೋ ಮಾಡಿಬೇಕು, ಪ್ಯಾನ ಕಾರ್ಡ, ರೆಜಿಸ್ಟೇಷನ್,ಠರಾವು ಕಾಪಿ ಬಗ್ಗೆ ಅರಿವು ಮೂಡಿಸಿ ಗ್ರಾಮೀಣ ಮಹಿಳೆಯರಿಗೆ ಬ್ಯಾಂಕ್ ಖಾತೆ ತೆಗೆಯುವಲ್ಲಿ ಸಹಕಾರ ನೀಡಬೇಕು, ಹಚ್ಚಿನ ಸಾಲ ಸೌಲಭ್ಯ  ದೋರಕಿಸಿ, ಸ್ವತಃ ಉದ್ಯಮ ಚಟುವಟಿಕೆ ಪ್ರಾರಂಬಿಸುವವರಿಗೆ ಮಾರ್ಗದರ್ಶನ ನಿಡುವಂತೆ ತಿಳಿಸಿದರು. 

ರಾಜ್ಯ ಏಖಖಐಕಖ ಸಂಜೀವಿನಿ ಕಛೇರಿಯ ರಾಜ್ಯ ಸಂಪನ್ಮೂಲ ವ್ಯಕ್ತಿ, . ಸುಂದರೇಶ ಅವರು ಸಂಪೂರ್ಣ ದಿನದ ಅಧಿವೇಶನ ತೆಗೆದುಕೊಂಡು, ಬ್ಯಾಂಕ ವ್ಯವಸ್ಥಾಪಕರಿಗೆ ಓಖಐಒ ಯೋಜನೆಯ ಬಗ್ಗೆ, ಮತ್ತು ಬ್ಯಾಂಕ್ ಲಿಂಕೇಜ್, ಸಾಮಾಜಿಕ ಭದ್ರತಾ  ಯೋಜನೆಗಳ ಬಗ್ಗೆ ಹಾಗೂ ಆರ್ಥಿಕ ಸಾಕ್ಷರತೆ ಕುರಿತು, ಆನ್ಲೈನ್ ಲೋನ ಅಪ್ಲಿಕೇಶನ್ ಡಿಸಬಸಮೇಂಟ್, ಇಂಟರ್ ಸಬ್ಮಿಷನ್, ಸಮುದಾಯ ಆಧಾರಿತ  ರಿಕವರಿ ಮೆಕ್ಯಾನಿಜಂ, ಬಿಸಿ ಸಖಿ ಅವಶ್ಯಕತೆ, ಇನ್ನಿತರ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದರು. 

ಜಿಲ್ಲಾ ಮಟ್ಟದ ಒಂದು ದಿನದ ಬ್ಯಾಂಕರ್ಸ ಕಾರ್ಯಾಗಾರದ ಕೊನೆಯಲ್ಲಿ ವಿಜಯಪುರ ಜಿಲ್ಲೆಯ ಜಿಲ್ಲಾ ಪೋಲಿಸ್ ಅಧಿಕ್ಷಕರಾದ ಲಕ್ಷಣ ನಿಂಬರಗಿ  ಹಾಗೂ ಅಡಿಷನಲ್ ಎಸ್ಪಿ ಶ್ರೀ. ರಾಮನಗೌಡ ಹಟ್ಟಿ ಅವರು ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿಗೆ ನಗರದಲ್ಲಿ ಆಗುತ್ತಿರುವ ಬ್ಯಾಂಕ್ ಮತ್ತು ಸಾರ್ವಜನಿಕರ ದರೋಡೆ, ಕೊಲೆ-ಸುಲಿಗೆ ಮತ್ತು ಬ್ಯಾಂಕ್ ಸೆಕ್ಯುರಿಟಿ, ಸೈರನ್ ವ್ಯವಸ್ಥೆ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಚರ್ಚಿಸಿದರು,