‘ದಾಸ ಸಾಹಿತ್ಯದಲ್ಲಿ ಸಂಗೀತದ ಸೊಗಡು ಇದೆ’
‘There is a musical beauty in slave literature’
ತಾಂಬಾ 06: ದಾಸ ಸಾಹಿತ್ಯವೆಂದರೆ ಮನಸ್ಸಿಗೆ ಒಂದು ರೀತಿ ರೊಮಾಂಚನ. ದಾಸ ಸಾಹಿತ್ಯದಲ್ಲಿ ಸಂಗೀತದ ಸೊಗಡು ಇದೆ. ಲಯ ತಾಳಗಳ ಲಹರಿ ಇದೆ. ದಾಸ ಸಾಹಿತ್ಯವು ಹಾಡಿನ ರೂಪ ತಾಳಿ ಆಡು ಮಾತಿಗೆ ಹತ್ತಿರಗೊಂಡು ಹೇರಳವಾಗಿ ಬೆಳೆಯಿತು. ಈ ಸಾಹಿತ್ಯಕ್ಕೆ ವ್ಯಾಸರಾಯರ ಮತ್ತು ಅವರ ಶಿಷ್ಯಂದಿರಾದ ಕನಕದಾಸರ ಹಾಗೂ ಪುರಂದರ ದಾಸರ ಸೇವೆ ಅನುಪಮ. ಇವರಿರ್ವರು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದೆ ಪ್ರಸಿದ್ದರು. ಕನಕದಾಸರು 1488-1578 ಕಾಲಾವಧಿಯಲ್ಲಿ ಬಾಳಿ ಬದುಕಿದ ಕವಿ.
ಕನಕನ ನಿಜನಾಮ ತಿಮ್ಮಪ್ಪ ನಾಯಕ. ತಿಮ್ಮಪ್ಪ 1488 ರಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಕುರುಬ ದಂಪತಿಗಳಾದ ಬೀರ್ಪ ಹಾಗೂ ಬಚ್ಚಮ್ಮಳ ಪುನ್ಯ ಉದರದಲ್ಲಿ ಪ್ರತಿಭಾವಂತ ಮಗನಾಗಿ ಜನಿಸಿದರು. ವಿಜಯನಗರದ ಪಾಳೆಗಾರರಾಗಿದ್ದು ಯುದ್ಧದಲ್ಲಿನ ಹಿಂಸೆಯನ್ನು ಕಂಡು ಯುದ್ಧದಿಂದ ಮಾನವ ಕುಲವೆ ನಾಶವಾಗುವುದು, ಪ್ರೀತಿ ಪ್ರೇಮದಿಂದ ಬಾಳೀದರೆ ಲೋಕ ಕಲ್ಯಾಣ ಸಾದ್ಯವೆಂದರಿತು ಯುದ್ಧ ವೈರಾಗ್ಯವನ್ನು ತಾಳಿ ಅಧೀಕಾರವನ್ನು ತ್ಯಜಿಸಿದರು. ಮುಂದೆ ಕಾಗಿನೆಲೆಗೆ ಬಂದು "ಕಾಗಿನೆಲೆ ಅಧಿಕೇಶವ" ಎಂಬ ಅಂಕಿತ ನಾಮದಿಂದ ಕೀರ್ತನೆ, ಉಗಾಭೋಗ, ಸುಳ್ಳಾದಿಗಳನ್ನು ರಚಿಸಿದರು. ಮೋಹನ ತರಂಗಿಣಿ (ಸಾಂಗತ್ಯ), ರಾಮಧಾನ್ಯ ಚರಿತೆ, ನಳ ಚರಿತೆ, ಹರಿಭಕ್ತಿ ಸಾರ, ಭಾಮಿಣಿ ಪಟ್ಟದಗಳಲ್ಲಿ ಕಾವ್ಯ ಕೃತಿಗಳನ್ನು ರಚಿಸಿದ ಹಿರಿಮೆ ಗರಿಮೆ ಇವರದು. ಕನಕ ಒಬ್ಬ ಕೀರ್ತನಕಾರರಾಗಿ ಅಷ್ಟೇ ಅಲ್ಲ ಶ್ರೇಷ್ಠ ಕವಿಯಾಗಿಯು ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆ.
ಕನಕದಾಸರ ಸಾಹಿತ್ಯ ಸೇವೆ ಕೇವಲ ಸಾಹಿತ್ಯವಲ್ಲ ಅದು ಅಜ್ಞಾನಿಗಳಿಗೆ ಜ್ಞಾನದ ಪರಿಪಕ್ವತೆ ತೋರುವ ದಿಕ್ಸೂಚಿ. ಹರಿನಾಮ ಸ್ಮರಣೆಯಿಂದ ಪ್ರಾರಂಭವಾದ ಕನಕದಾಸರ ಭಕ್ತಿ ಸಾಧನೆ ಅವನನ್ನ ಸಾಕ್ಷತ ಕರಿಸಿಕೊಳ್ಳುವ ಎಲ್ಲೆಡೆಯಲ್ಲಿಯು ಕಾಣುವ ಹಂಬಲವಿದೆ. ಅವನ ಸಂಘ ಸುಖವನ್ನು ಅನುಭವಿಸುವ ಕಾತುರತೆ ತುಡಿತಗಳು ಕ್ಷಣಕ್ಷಣಕ್ಕು ಅವರ ಹಾಡಿನ ಪದಗಳಲ್ಲಿ ಎದ್ದು ಕಾಣುತ್ತವೆ. ತಲ್ಲಣಿಸದಿರು ಕಂಡ್ಯ, ತಾಳು ಮನವೆ ಎಲ್ಲರನ್ನು ಸಲಹುವನು ಇದಕ್ಕೆ ಸಂಶಯವಿಲ್ಲ. ವೃಕ್ಷಕ್ಕೆ ನೀರೆರೆದವರು ಪಕ್ಷಿಗಳಿಗೆ ಅನ್ನವಿತ್ತವರು ಕಪ್ಪೆಗಳಿಗೆ ಆಹಾರ ತಂದಿತ್ತವರು ಯಾರು? ಎಂದ ವಿಸ್ಮಯ ಮೂಲದ ಪ್ರಶ್ನೆಗೆ "ಹುಟ್ಟಿಸಿದ ಜೀವ ತಾ ಹೊಣೆಗಾರ" ಎಂದು ಸಾಮಾನ್ಯ ಜನರಿಗೆ ಕನಕ ಉತ್ತರಿಸಿದ್ದಾನೆ.
"ನೀಮಾಯೆಯೋಳಗೋ, ನಿನೊಳುಮಾಯವೋ" ಎಂದು ಮೂರ್ತ ಅಮೂರ್ತ ವಿಚಾರಗಳನ್ನು ಮುಖಾ ಮುಖಿ ಮಾಡಿ ಹೆಜ್ಜೆ ಹೆಜ್ಜೆಗು ವಿಸ್ತರಿಸುವ ಆಸೆಯಗಳು ಬೆರಗು ಗೊಳಿಸುವಂತದ್ದು. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜನರ ನಡವಳಿಕೆ ಸಮಾಜದಲ್ಲಿ ಬೀರು ಬಿಟ್ಟ ರೂಡಿಗತವಾದ ಸಂಪ್ರದಾಯಗಳು ಜಾತಿ ಮತ ವ್ಯವಸ್ತೆಗಳು ಬಡವ ಬಲ್ಲಿದ ಮೇಲು ಕೀಳೆಂಬ ತಾರತಮ್ಯ ಮೊದಲಾದ ವಿಚಾರಗಳನ್ನು ವಿಡಂಬಿಸಿರುವ ರೀತಿ ಅನನ್ಯವಾದದ್ದು. ಕುಲ ಕುಲ ವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ಕುಲ ಕುಲವೆಂದು ಹೊಡದಾಡದಿರಿ ನಿಮ್ಮ ಕುಲದ ನೆಲಯೆನೇನಾದರು ಬಲ್ಲಿರಾ. ಯಾತರದವನೆಂದು ಸಿರಲಿ ಎನ್ನುವ ಈ ಕೀರ್ತನೆಗಳಲ್ಲಿ ಜ್ಯಾತಿಯೆಂದರೆನು? ಎಂಬುದರ ಬಗ್ಗೆ ವ್ಯಾಖ್ಯಾನ ನೀಡಿ ಜನರಿಗೆ ಜ್ಯಾತಿ ವಿಷಯ ತಿಳಸಿದ್ದಾರೆ. ಇದೇ ರೀತಿ ಸರ್ವಜ್ಞನು ಕೂಡಾ "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ?" ಎಂದು ಪ್ರಶ್ನಿಸುವ ಮೂಲಕ ಜ್ಯಾತಿ ವ್ಯವಸ್ಥೆಯ ಮಾನವ ನಿರ್ಮಿತವಾದುದ್ದು ಎಂಬುವುದನ್ನು ಜನ ಸಂಕುಲಕ್ಕೆ ತಿಳಸಿದ್ದಾರೆ.
ಸಾದು ಸನ್ಯಾಸಿ ಜ್ಯೋತಿ ಜಂಗಮ ಮುಂತಾದ ವೇಷಗಳ ಮೂಲಕ ಜಗತ್ತಿನಲ್ಲಿ ನಡೆಯುತ್ತಿರುವ ಕಪಟ ವಂಚನೆ ದುರ್ವ್ಯವಹಾರಗಳುಗೆ ಲೆಕ್ಕವೆ ಇಲ್ಲ. ಇಡೀ ಲೋಕವನ್ನು ಇವು ತಲ್ಲಣಗೊಳಿಸಿವೆ ಎಂದು ಕನಕದಾಸರು ಕೆಲವಮ್ಮೆ ಮರುಗಿದ್ದು ಉಂಟು. ಜಪ ಮಾಡಿದರೇನು ತಪವ ಮಾಡಿದರೇನು ಕಪಟಗುಣ ವಿಪರೀತ ಕಲುಷ ವಿದ್ದವರು "ನೇಮ ವಿಲ್ಲದ ಹೋಮವೇತಕಯ್ಯ, ಎಂಬ ಡಾಂಬಿಕತೆಯನ್ನು ಖಂಡಿಸಿರುವರು. ತೀರ್ಥವ ಪಡೆದವರಿಲ್ಲ ತಿರುನಾರಾಯಣನ ನಾಮದಾರಿಗಳೆ ಎಲ್ಲ ಮತದಾರರ ಡಂಬುತನವನ್ನು ಅಂದಿನ ಸಮಾಜದಲ್ಲಿ ಕಲುಷಿತಗೊಂಡಿದ್ದವೆಂದು ನಾವು ತಿಳಿಯಬಹುದಾದರು ಇಂದಿನ ಸಮಾಜಕ್ಕು ಈ ಮಾತು ಜೀವಂತ ಸಾಕ್ಷಿ. ಆದ್ದರಿಂದಲೆ ಕನಕದಾಸರಲ್ಲಿ ನಾವು ಕವಿ ಹೃದಯ ಮತ್ತು ಸಂತರ ಸನ್ನತಿ ಸಂಗಮಗಳನ್ನು ಕಾಣುತ್ತೇವೆ. ತಮ್ಮ ಸಾಹಿತ್ಯದಲ್ಲಿ ಅವರು ನೀತಿ ಮೌಲ್ಯಗಳನ್ನು ಜೀವನ ಮೌಲ್ಯಗಳ ಸಂದೇಶವನ್ನು ದಾರಾಳವಾಗಿ ಏರಕ ಹೋಯ್ದಿದ್ದಾರೆ. ಅವರ ಬೋಧನೆ ಓದುಗರಿಗೆ ಕಾವ್ಯ ರಸದೌತಣ ನೀಡುತ್ತದೆ.
ಕನ್ನಡ ಸಾಹಿತ್ಯ ಲೋಕದ ಭೂಮಿಯಲ್ಲಿ ಕೀರ್ತನೆ ಎಂಬ ಬೀಜವನ್ನು ಬಿತ್ತಿ ಓದುಗರಿಗೆ ಪರಿಮಳದ ಪುಶ್ಪವನ್ನು ವಿಫಲವಾಗಿ ನೀಡಿದ್ಧಾರೆ. ಕನಕನ ಹಾಡಿನ ಪದಗಳು ನಾಡಿನಲ್ಲಿ ಖನೀಜವಾಗಿ, ಕಾವ್ಯದಲ್ಲಿ ಭದ್ರತೆಯಾಗಿ, ಕನ್ನಡದ ಸಾಹಿತ್ಯ ಗಣಿಯಲ್ಲಿ ಸಿರಿತನದ ಹೊನ್ನಾಗಿ ದಿನನಿತ್ಯ ಮೆರೆಯುತ್ತಿದೆ. ಹೀಗೆ ಕನ್ನಡಿಗರ ಜನ ಮಾನಸದಲ್ಲಿ ಕನಕನ ಸಾಹಿತ್ಯ ಹಚ್ಚು ಹಸೀರಾಗಿದೆ, ಉಸಿರಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 