‘ಒಕ್ಕಲುತನ ಸುಧಾರಣೆ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ’

‘ಒಕ್ಕಲುತನ ಸುಧಾರಣೆ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ’ ‘Dharamsthala organization is doing the work of improving the environment’

ಜಮಖಂಡಿ 26: ಡಾ. ವಿರೇಂದ್ರ ಹೆಗಡೆ ಅವರು ಸಾಮಾಜಿಕ ಕಳಕಳಿ ಹೊಂದಿದವರು. ಎಲ್ಲ ಕ್ಷೇತ್ರದ ಅಭಿವೃದ್ಧಿ ಪರ ಹಾಗೂ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತಿದೆ. ಒಕ್ಕಲುತನ ಸುಧಾರಣೆ ಕೆಲಸವನ್ನು ಮಾಡುತ್ತಿರುವ ಸಂಸ್ಥೆ ಅದು ಧರ್ಮಸ್ಥಳ ಸಂಸ್ಥೆಯಾಗಿದೆ ಎಂದು ಮಾಜಿ ವಿಪ ಸದಸ್ಯ ಜಿ.ಎಸ್‌.ನ್ಯಾಮಗೌಡ ಹೇಳಿದರು.  ನಗರದ ಕಲ್ಯಾಣ ಮಠದ ಸಮುದಾಯ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ತಾಲೂಕ ಘಟಕ ಸಹಯೋಗದಲ್ಲಿ ಮಾಹಾ ಶಿವನಿಗೆ ಸಹಸ್ರ ಬಿಲ್ವಾರ್ಚನೆ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಸರ್ವಧರ್ಮ ಹಾದಿಯಲ್ಲಿ ನಡೆಯಬೇಕು ಹಿಂದು ಎಂದರೆ ಜಾತಿಗೆ ಸಿಮೀತವಲ್ಲ ಅದು ಎಲ್ಲರೂ ಒಂದು ಎಂದು ನಡೆದುಕೊಳ್ಳುವ ಧರ್ಮ ಹಿಂದು ಧರ್ಮವಾಗಿ. ಲಿಂಗವನ್ನು ಅಂಗೈಯಲ್ಲಿ ಪೂಜಿಸುವದಿಂದ ಲಿಂಗಾಯತ ಧರ್ಮವಾಗಿದೆ. ಅದು ರಾಜಕೀಯವಾಗಬಾರದು. ಇಂದಿನ ದಿಮಾನದಲ್ಲಿ ಎಲ್ಲ ಧರ್ಮವು ರಾಜಕೀಯವಾಗುತ್ತಿವೆ. ಅದು ಆಗಬಾರದು. ಸಂತರ, ಮಹಾತ್ಮರು ಹುಟ್ಟಿದ ನಾಡು ನಮ್ಮ ನಾಡುವಾಗಿದೆ ಎಂದರು. 

ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಾಮಾಜಿಕ ಒಳಿತ್ತಕ್ಕಾಗಿ ಸಮಾಜ ಸೇವೆ ಮಾಡುತ್ತಿರುವದು ಯಾವುದಾದರೂ ಇದ್ದರೆ ಅದು ಧರ್ಮಸ್ಥಳ ಸಂಘವಾಗಿದೆ. ನಗರ ಪ್ರದೇಶಕ್ಕೆ ಅಷ್ಟೇ ಸಿಮೀತವಾಗದೆ. ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಸೇವೆಯನ್ನು ಮಾಡುವ ಧರ್ಮಸ್ಥಳ ಧರ್ಮಾಧಿಕಾರಿಗಳು ಮಾಡುತ್ತಿದ್ದಾರೆ. ಧಯ್ಯವೇ ಧರ್ಮದ ಮೂಲಯ್ಯ ಎಂದು ಕಾರ್ಯನಿರ್ವಹಿಸುತ್ಯಿದ್ದಾರೆ. ಮಹಿಳೆಯರು ಪರಂಪರೆ, ಧಾರ್ಮಿಕ, ಚಿಂತನೆ ಮಾಡುವ ಉದ್ದೇಶದಿಂದ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ  ಉದ್ದೇಶದಿಂದ ಸಾಕಷ್ಟು ಧಾರ್ಮಿಕ ಸೇವೆಗಳನ್ನು ಧರ್ಮಾಧಿಮಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆಶೀರ್ವಚನ ನೀಡಿದರು. 

ಚನಕೇಶವ ಜಿಲ್ಲಾ ನಿರ್ದೇಶಕ ಮಾತನಾಡಿ, ಎಲ್ಲ ಕ್ಷೇತ್ರದಲ್ಲಿ ಭಾಗಹಿಸುವ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆ ಸಾಮಾಜಿ, ಧಾರ್ಮಿಕ ಸೇವೆಯನ್ನು ಮಾಡುತ್ತಾ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವುದು ಧರ್ಮಸ್ಥಳ ಸಂಸ್ಥೆಯಾಗಿದೆ. ದಾನ ಧರ್ಮದಿಂದ ಮಾಡುವ ಮೂಲಕ ಅದಕ್ಕೆ ಧರ್ಮಸ್ಥಳ ಎಂದು ಹೆಸರು ಪಡೆಯಿತು. ಅನ್ನ ದಾನ, ಅಭಯ ದಾನ, ಶಿಕ್ಷಣ ದಾನ, ಆರೋಗ್ಯ ದಾನವನ್ನು ಶ್ರೀಗಳು ಮಾಡುತ್ತಾ ಬಂದಿರುವ ಜೊತೆಗೆ ತರಬೇತಿ ಸಂಸ್ಥೆಗಳನ್ನು ಹುಟ್ಟು ಹಾಕಿದಾರೆ ಎಂದರು. 

ಮೃತುಂಜ್ಯ ಹಿರೇಮಠ, ಮಾಜಿ ನಗರಸಭೆ ಸದಸ್ಯ ಕುಶಾಲ ವಾಗಮೊರೆ, ಗೀತಾ ಸೂರ್ಯವಂಶಿ, ರಾಚಯ್ಯ ಹಿರೇಮಠ, ಅಶೋಕ ಮಗದುಮ್ಮ, ಶ್ರೀಧರ ಕನ್ನೂರ, ವಲಯ ಮೇಲ್ವಿಚಾರಕಿಯರಾದ ಕವಿತಾ ಬಳೋಲಗಿಡದ, ವೈಶಾಲಿ ಉಪಾರ, ಸರೋಜನಿ ಕರಣಿ, ಅಕ್ಷತಾ ತೊಡಕರ, ನಂದಾ ಪನಾಳಕರ, ಜಯಶ್ರೀ ಪೂಜಾರಿ, ಸೈನಾಜಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಇದ್ದರು. ಅನುಷ್ಯಾ ಚಕ್ರಸಾಲಿ ತಂಡದಿಂದ ಭರತನ್ಯಾಟ ಹಾಗೂ ವಿದ್ಯಾ ನಿಕೇತನ ಶಾಲೆಯ ಮಕ್ಕಳಿಂದ ಶಿವನ ನೃತ್ಯವನ್ನು ಮಾಡಿದರು. ಲಕ್ಷ್ಮೀ ಸಬಕಾಳೆ ಪ್ರಾರ್ಥನಿಸಿದರು. ನಿಂಗಪ್ಪ ಜಿ, ಸ್ವಾಗತಿಸಿದರು. ಮಾಹಾನಂದ ಪಾಯಗೊಂಡ, ಪದ್ಮಾ ಕುಳ್ಳೊಳ್ಳಿ ನಿರೂಪಿಸಿದರು.