ಹನುಮ ದೇವರ ತೊಟ್ಟಿಲೋತ್ಸವ

ಲೋಕದರ್ಶನವರದಿ

ರಾಣೇಬೆನ್ನೂರು20: ನಗರದ ಗುರು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾದಲ್ಲಿ ಶ್ರೀ ಹನುಮ ಜಯಂತಿಯ ಅಂಗವಾಗಿ ತೋಟ್ಟಿಲೋತ್ಸವ ಶುಕ್ರವಾರ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

  ಶ್ರೀಆಂಜನೇಯ ಸ್ವಾಮಿಗೆ ವಿವಿಧ ಬಗೆಯ ಅಭಿಷೇಕ ಪೂಜಾ ಕಾರ್ಯಕ್ರಮಗಳನ್ನು ನೇರವೇರಿಸಿದ ನಂತರ ಸುಮಂಗಲೆಯರು ಬಾಲಹನುಮನ ಮೂತರ್ಿಯನ್ನು ತೊಟ್ಟಿಲಲ್ಲಿ ಹಾಕಿ ಜೋಗುಳವ ಹಾಡಿ ನಾಮಕರಣ ಮಾಡಿದರು.

    ಅಜಯ ಹುಲ್ಲತ್ತಿ, ನಾಗರಾಜ ಜಮಾರಾನವರ, ಪರಶುರಾಮ ಅಗಡಿ, ಕರಬಸಣ್ಣ ಕಡ್ಲಿಬಾಳ, ಸಿದ್ದಣ್ಣ ಐರಣಿ, ಗೀತಾ ಹಡಗಲಿ, ಪ್ರೇಮಾ ಶೆಟ್ಟಿ, ಕವಿತಾ ಶೆಟ್ಟಿ, ಮನು ಮುಕ್ತೇನಹಳ್ಳಿ, ನೀತು ಮುಕ್ತೇನಹಳ್ಳಿ ಇದ್ದರು.