ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದು: ಜಿಲ್ಲಾಧಿಕಾರಿ

ಧಾರವಾಡ 19: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ  ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಪಯರ್ಾಯವಾಗಿ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ. 

      ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಏ.23ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆಯವರೆಗೆ ನಡೆಯಲಿರುವ ಮತದಾನದಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದ ಪಕ್ಷದಲ್ಲಿ, ಈ ಕೆಳಕಂಡಂತೆ ಪಯರ್ಾಯ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್  ತಿಳಿಸಿದ್ದಾರೆ. 

    ಪಾಸ್ಪೋಟರ್್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಮತ್ತು ರಾಜ್ಯ ಸಕರ್ಾರದ ಪಬ್ಲಿಕ್ ಕಂಪನಿಗಳು ನೀಡಿರುವ ನೌಕರರ ಫೋಟೋ ಇರುವ ಗುರುತಿನ ಸೇವಾ ಕಾಡರ್್, ಸಕರ್ಾರಿ ವಲಯದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಿಂದ ನೀಡಲಾದ ಫೋಟೋ ಇರುವ ಪಾಸ್ಬುಕ್, ಆದಾಯ ತೆರಿಗೆ ಗುರುತಿನ ಚೀಟಿ(ಪ್ಯಾನ್ ಕಾಡರ್್), ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಇಲಾಖೆ (ಆರ್.ಜಿ.ಐ).ಯಿಂದ ನೀಡಲಾದ ಸ್ಮಾಟರ್್ ಕಾಡರ್್, ನರೇಗಾ ಜಾಬ್ಕಾಡರ್್, ಕಾಮರ್ಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಜೀವವಿಮೆ ಸ್ಮಾಟರ್್ ಕಾಡರ್್, ಪೆನ್ಷನ್ ದಾಖಲಾತಿ (ಫೋಟೋ ಇರುವ) ಮಾಜಿ ಸೈನಿಕ ಪಿಂಚಣಿ ಪುಸ್ತಕ ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ, ವಿಧವೆ,ಅವಲಂಬಿತರ ದೃಢೀಕರಣ ಪತ್ರ, ವೃದ್ಧಾಪ್ಯ ವಿರಾಮ ವೇತನ ಆದೇಶ, ವಿಧವಾ ವೇತನ ಆದೇಶ, ಸ್ವಾತಂತ್ರ್ಯ ಯೋಧರ ಭಾವಚಿತ್ರವಿರುವ ಗುರುತಿನ ಚೀಟಿ, ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ. ಗಳಿಗೆ ಸಕರ್ಾರದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿ ಮತ್ತು ಆಧಾರ್ಕಾಡರ್್ ಇದರಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮತದಾರರು ತಪ್ಪದೇ ಏಪ್ರಿಲ್ 23 ರಂದು ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. 

     ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ)ಗಳು ಸಂಬಂಧಿಸಿದ ಮತಗಟ್ಟೆಯ ಮತದಾರರ ಭಾವಚಿತ್ರವಿರುವ ಮತದಾರ ಚೀಟಿಗಳನ್ನು (ಓಟರ್ ಸ್ಲಿಪ್) ಮತದಾರರ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.  ಈ ಓಟರ್ ಸ್ಲಿಪ್ಗಳನ್ನು ಬಿ.ಎಲ್.ಓ. ಗಳಿಂದ ಪಡೆದು ಏಪ್ರಿಲ್ 23 ರಂದು ಮತದಾನ ಮಾಡಬಹುದಾಗಿದೆ.  ಆದರೆ ಮತದಾರರ ಗುರುತಿನ ಚೀಟಿ ಅಥವಾ ಪಯರ್ಾಯ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಮತಗಟ್ಟೆಯೊಳಗೆ ಮತದಾರರು ಮೊಬೈಲ್, ಕ್ಯಾಮರಾ, ಲೇಸರ್ ಉಪಕರಣ ಇತ್ಯಾದಿ ಯಾವುದೇ ತರಹದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

  ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ದೂರುಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ.1950 ನ್ನು ಸಂಪಕರ್ಿಸಬಹುದಾಗಿದೆ. ಮತ್ತು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಸಿ.ವಿಜಲ್ ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ