ಇ-ಸ್ವತ್ತು ಅಭಿಯಾನ; ಕಂಪ್ಲಿ ಪುರಸಭೆಯಲ್ಲಿ ಜನಹಿತ ಕೇಂದ್ರಕ್ಕೆ ಚಾಲನೆ

e-asset campaign; Drive to Janahita Kendra in Kampli Municipality

ಇ-ಸ್ವತ್ತು ಅಭಿಯಾನ; ಕಂಪ್ಲಿ ಪುರಸಭೆಯಲ್ಲಿ ಜನಹಿತ ಕೇಂದ್ರಕ್ಕೆ ಚಾಲನೆ 

ಕಂಪ್ಲಿ 24: ಇ-ಸ್ವತ್ತು ಅಭಿಯಾನ ಯೋಜನೆಯಡಿಯಲ್ಲಿ ಕಂಪ್ಲಿ ಪುರಸಭೆಯಲ್ಲಿ ಜನಹಿತ ಕೇಂದ್ರಕ್ಕೆ ಚಾಲನೆ ನೀಡಲಾಗಿದ್ದು, ಸ್ಥಳೀಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದರು.  ಅವರು ಪುರಸಭೆ ಕಚೇರಿಯಲ್ಲಿ ಜನಹಿತ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕರು ತಮ್ಮ ಕಟ್ಟಡ, ನಿವೇಶನ, ಆಸ್ತಿ ನೋಂದಣಿ ಮಾಡಿಸಿರದಿದ್ದಲ್ಲಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸುವಂತೆ ಮನವಿ ಮಾಡಿದರು. ಇ-ಆಸ್ತಿ ಪಡೆಯಲು ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಗಿನ ಗುರುತಿನ ಈಟಿ, ಆಸ್ತಿ ಮಾಲೀಕರ ಫೋಟೋ, ಮಾಳೀಕತ್ವ ದೃಢೀಕರಿಸುವ ನೋಂದಾಯಿತ ದಾಖಲೆಗಳು, ಸ್ವತ್ತಿನ ಋಣುಬಾರ ಪ್ರಮಾಣಪತ್ರ, ಸ್ವತ್ತಿನ ಆಯಚಿತ್ರ, ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳೊಂದಿಗೆ ಪುರಸಭೆಯಲ್ಲಿ ಆರಂಭಿಸಲಾಗಿರುವ ಜನಹಿತ ಕೇಂದ್ರಕ್ಕೆ ಭೇಟಿ ನೀಡಿ ಇ-ಖಾತೆ ದಾಖಲೆ ಪಡೆಯಬಹುದು ಎಂದರು.  ಕೈಬರಹ ಇರುವ ಖಾತೆಗೂ ಇ-ಆಸ್ತಿ ಖಾತೆ ದೊರೆಯುತ್ತದೆ. 2025ರ ಮೇ.10ರೊಳಗೆ ಇದರ ಪ್ರಯೋಜನ ಪಡೆಯಬಹುದು.ಹೆಚಿನ ಮಾಹಿತಿಗೆ ಮೊ.ಸಂ. 99169 07008, 78995 74276 ನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಭಾರ ಕಂದಾಯಾಧಿಕಾರಿ ಪ್ರಶಾಂ ಚಿತ್ರಗಾರ್, ಸಹಾಯಕರಾದ ಟಿ.ಸುಧಾಕರ್, ಜ್ಯೋತಿ, ರೇಣುಕಮ್ಮ, ಚನ್ನಬಸವ ಸೇರಿದಂತೆ ಸಾರ್ವಜನಿಕರು ಇದ್ದರು.