ಅಥಣಿ 01: ಪ್ರಧಾನಿ ನರೇಂದರ ಮೋದಿ ಬಿಟ್ಟ್ರೆ ದೇಶಕ್ಕೆ ಪಯರ್ಾಯ ನಾಯಕರಿಲ್ಲ, ದೇಶದ ಜನ ಸುರಕ್ಷಿತವಾಗಿರಲು ಹಾಗೂ ಸುಭದ್ರ ಭಾರತ ನಿಮರ್ಾಣಕ್ಕೆ ದೇಶಕ್ಕೆ ಮತ್ತೆ ಮೋದಿ ಅವಶ್ಯವೆಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕಾ ಅವಿನಾಶ್ ಹೇಳಿದರು. ಅವರು ಪಟ್ಟಣದ ಶಿವಣಗಿ ಭವನದಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡ ಪ್ರಬುದ್ಧರ ಸಭೆಯಲಿ ಅವರು ಮಾತನಾಡುತ್ತಿದ್ದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶ ಆಥರ್ಿಕ ಪ್ರಗತಿ ಹೊಂದುತ್ತಿದೆ, ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ನೀಡಿದ್ದಾರೆ. ದೇಶಕ್ಕೆ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಮೂಲಕ ದೇಶವನ್ನು ಮತ್ತೆ ವಿಶ್ವ ಗುರುವನ್ನಾಗಿಸೋಣ ಎಂದರು.
ಐಟಿ ಇಲಾಖೆಯವರು ಗುತ್ತಿಗೆದಾರರ ಮತ್ತು ಎಂಜನಿಯರ್ ಗಳ ಮನೆಗಳ ಮೇಲೆದಾಳಿ ಮಾಡಿದರೆ ಸಿಎಂ ಕುಮಾರ ಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಐಟಿ ದಾಳಿ ವಿರುದ್ಧ ಹೋರಾಡುವ ಅಗತ್ಯವೇನಿತ್ತು ಎಂದ ಅವರು ಜನಪ್ರತಿನಿಧಿಗಳ ಮನೆಯ ಮೇಲೆ ದಾಳಿಯಾಗಿದ್ದಲ್ಲಿ ಪ್ರತಿಕ್ರಿಯೆ ತೋರಿಸಬಹುದಾಗಿತ್ತು, ಆದರೆ ಈ ದಾಳಿ ಐಟಿ ಇಲಾಖೆಗೆ ಸಂಬಂಧಿಸಿದ್ದು ಅದಕ್ಕಾಗಿ ಏಕೆ ಇಷ್ಟು ದೊಡ್ಡ ಪ್ರತಿಭಟನೆ ತಿಳಿದಿಲ್ಲ ಎಂದರು.
ಮಾಜಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಅಥಣಿ ವಿಧಾನ ಸಭಾ ಕ್ಷೇತ್ರದಿಂದ 11 ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಸಭೆ ಹಾಗೂ ಅಥಣಿಯಲ್ಲಿ ಪಾದಯಾತ್ರೆ ನಡೆಸಲಾಗುವುದು. ಎ.3 ರಂದು ಅಣ್ಣಾಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಅಥಣಿಯಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ವಾಹನಗಳ ಮೂಲಕ ಆಗಮಿಸಿ ಪ್ರಚಾರ ನಡೆಸಬೇಕು ಎಂದು ಕೋರಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಅಣಾಣಸಾಹೇಬ ಜೊಲ್ಲೆ ಮಾತನಾಡಿ, ಹಿರಿಯರ ಮಾರ್ಗದರ್ಶನ, ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದಿಂದ ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆದು ಬಿಜೆಪಿ ಗೆಲುವನ್ನು ಮೋದಿಯವರಿಗೆ ಅಪರ್ಿಸೋಣ ಎಂದರು.
ಉಮೇಶರಾವ ಬಂಟೋಡಕರ, ಕೆ.ಎಲ್.ಕುಂದರಗಿ, ಮಲ್ಲಿಕಾಜರ್ಿನ ಹಂಜಿ, ಪ್ರಭಾಕರ ಚವ್ಹಾಣ, ಪ್ರಕಾಶ ಮಹಾಜನ, ಜಿಪಂ ಸದಸ್ಯರು, ವಿವಿಧ ಘಟಕಗಳ ಕಾರ್ಯಕರ್ತರು, ಯುವಮೋಚರ್ಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.