ಭಗತ್ ಸಿಂಗ್ ವಿಚಾರಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶರಣು ಪಾಟೀಲ್
ಯಲಬುರ್ಗಾ 22: ಎಸ್. ಎ. ನಿಂಗೋಜಿ ಬಿಎಡ್ ಕಾಲೇಜು ಮತ್ತು ಎ ಐ ಡಿ ವೈ ಓ ಸಂಘಟನೆಯ ಸಂಯೋಜನೆಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರವರ 94ನೇ ಹುತಾತ್ಮ ದಿನದ ಅಂಗವಾಗಿ ಸ್ಮರಿಸಲಾಯುತು. ಮುಖ್ಯ ಭಾಷಣಕಾರರಾಗಿದ್ದ, ಎ ಐ ಡಿ ವೈ ಓ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಭವಾನಿ ಶಂಕರ್ ರವರು ಮಾತನಾಡುತ್ತಾ. 1947 ರಲ್ಲಿ ನಮ್ಮ ದೇಶಕ್ಕೆ ಬ್ರಿಟಿಷರು ಸ್ವತಂತ್ರ ಕೊಟ್ಟರು. ಅಹಿಂಸೆ ಮೂಲಕನೇ ಸ್ವತಂತ್ರ ಬಂದಿದೆ ಎಂದು ಇಂದಿಗೂ ಕೂಡ ಪ್ರಚಾರ ನಡೆದಿದೆ. ಭಗತ್ ಸಿಂಗ್, ನೇತಾಜಿ, ಖುದಿರಾಮ್ ಬೋಸ್, ಲಾಲಾ ಲಜಪತ್ ರಾಯ್, ಮುಂತಾದ ಕ್ರಾಂತಿಕಾರಿಗಳು ಈ ದೇಶಕ್ಕಾಗಿ ರಕ್ತ ಹರಿಸಿದ್ದಾರೆ. ಮೊಟ್ಟ ಮೊದಲಿಗೆ ಬ್ರಿಟಿಷರ ವಿರುದ್ಧ ಬಂಡೆದ್ದ ಚಾಪೆ ಕರ್ ಸೋದರರನ್ನು ಬ್ರಿಟಿಷರು ಗಲ್ಲುಗಂಬಕ್ಕೆ ಏರಿಸುವುದರ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಪಟ್ಟರು ಅದನ್ನೇ ಪ್ರೇರಣೆಯಾಗಿ ತೆಗೆದುಕೊಂಡ ಕ್ರಾಂತಿಕಾರಿಗಳು ಈ ದೇಶದ ಸ್ವತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಲು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಭಗತ್ ಸಿಂಗ್ ರವರನ್ನು ಬರೀ ತ್ಯಾಗ, ಸಾಹಸದಿಂದ ಮಾತ್ರ ಜನಗಳು ಗುರುತಿಸಿಲ್ಲ ಬದಲಾಗಿ ಅವರು ನಂಬಿರುವ ಕ್ರಾಂತಿಕಾರಿ ವಿಚಾರಗಳು ಮಾನವನಿಂದ ಮಾನವನ ಶೋಷಣೆ ನಿಲ್ಲಬೇಕೆಂಬ ಅಂದು ನಡೆದ ರಷ್ಯಾ ಕ್ರಾಂತಿಯ ಪ್ರಭಾವ ಅವರ ಮನದಾಳದಲ್ಲಿ ಮೊಳಕೆ ಒಡೆದಿತ್ತು. ಅದರ ಪ್ರತಿಫಲವಾಗಿಯೇ ಅವರು ತಮ್ಮ ಸಂಘಟನೆಯ ಹೆಸರನ್ನು ಬದಲಾಯಿಸಿ ಹಿಂದುಸ್ತಾನ್ ಸೋಸಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್ ಊಖಖಂ ಎಂದು ಮರುನಾಮಕರಣ ಮಾಡಿದರು. ಜಾತಿವಾದ ಕೋಮುವಾದ ಹೋಗಿ ಸೌಹಾರ್ದ ಯುತ, ಪ್ರಜಾತಂತ್ರ ಮೌಲ್ಯಗಳು ಇಲ್ಲದೆ ಇದ್ದರೆ ನಮಗೆ ಇಂದು ಸ್ವತಂತ್ರ ಸಿಕ್ಕರೂ ವ್ಯರ್ಥ ಎಂದು ಭಗತ್ ಸಿಂಗ್ ಅಂದೆ ಹೇಳಿದ್ದರು. ಆಶಯ ನುಡಿಗಳನ್ನಾಡಿದ ಶರಣು ಪಾಟೀಲ್ ಭಗತ್ ಸಿಂಗ್ ಅವರ ಸ್ಮರಣ ದಿನವನ್ನು ಆಚರಿಸುವುದು ಒಂದು ಸಂಪ್ರದಾಯ ಅಲ್ಲ. ಇಂದು ಅವರು ತೋರಿಸಿಕೊಟ್ಟ ವಿಚಾರಗಳು ಭಾರತದ ದಿಕ್ಕನ್ನು ಬದಲಿಸಲಿವೆ . ಅವರ ವಿಚಾರಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನುಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ್ ರವರು ಮಾತನಾಡಿ ಇಂದಿನ ದಿನಗಳಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ಅಂದಿನ ಯುವಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು.ಇಂದಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಸಾಮಾಜಿಕ ಜಾಲತಾಣಕ್ಕೆ ಆಕರ್ಷಿತರಾಗಿ ಬಲಿಯಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಯುವಕರಲ್ಲಿ ಉತ್ಸಾಹ, ಚೈತನ್ಯ ಇಲ್ಲದೆ ಇರುವುದು ಬೇಸರದ ಸಂಗತಿ. ಯುವಕರಿಗೆ ಗುರಿ ಉದ್ದೇಶ ಹೋರಾಟದ ಕಿಚ್ಚು ಇರಲೇಬೇಕು. ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡರೆ ಸಾಕಾಗುವುದಿಲ್ಲ ಅವರು ನಡೆಸಿಕೊಟ್ಟ ದಾರಿಯಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಪ್ರಾಸ್ತಾವಿಕವಾಗಿ ಉಪನ್ಯಾಸಕರಾದ ವಿ. ವಿ. ಪತ್ತಾರ್ ಮಾತನಾಡಿದರು..ಕಾರ್ಯಕ್ರಮದಲ್ಲಿ ಎ ಐ ಡಿ ವೈ ಓ ಜಿಲ್ಲಾಧ್ಯಕ್ಷರಾದ ಆರ್ ವಿ ಕಾಮನೂರು, ಸುಭಾನ್ ನೀರಲಗಿ, ಉಪಸ್ಥಿತರಿದ್ದರು, ಪ್ರಶಿಕ್ಷಣಾರ್ಥಿಗಳಾದ ಉದಯ್ ನಿರೂಪಣೆ, ಭೀಮಪ್ಪ ಸ್ವಾಗತ, ವಂದನಾರೆ್ಣ ಮೈಬೂಬ, ನಡೆಸಿಕೊಟ್ಟರು.