ಯುವಜನೋತ್ಸವಕ್ಕೆ ಚಾಲನೆ : ಉದ್ಘಾಟನಾ ಕಾರ್ಯಕ್ರಮ
Youth Festival kicks off: Inaugural program
ಧಾರವಾಡ 22: ಕೃಷಿ ವಿಶ್ವವಿದ್ಯಾಲಯ, ಧಾರವಾಡದ 34ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ದಿನಾಂಕ 21.11.2025ರಂದು ಸಾಯಂಕಾಲ 04.00 ಘಂಟೆಗೆ ಚಾಲನೆ ನೀಡಲಾಯಿತು. ನಾಲ್ಕು ದಿನಗಳ ಈ ಯುವಜನೋತ್ಸವವು ದಿನಾಂಕ 21 ರಿಂದ 24ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಕೆ. ರಘೋತ್ತಮ ರಾವ್, ಚೇರಮನ್, ಸೀಕ್ ಫೌಂಡೇಶನ್, ಬೆಂಗಳೂರು ಇವರು ದೀಪ ಬೆಳಗುವುದರ ಮೂಲಕ ನೆರವೇರಿಸಿದರು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು ಯುವಜನತೆಯು ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಗುರುವನ್ನು ಹೊಂದಿರಬೇಕು ಮತ್ತು ಜಾನಪದ ಕಲೆಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ತಿಳಿಸಿ, ಜೀವನದಲ್ಲಿ ನಗುವಿನ ಮಹತ್ವ ಹಾಗೂ ಶಿಕ್ಷಣದ ಉದ್ದೇಶದ ಬಗ್ಗೆ ಅರಿವು ಮೂಡಿಸಿದರು. ನಗುವಿನಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ವೃದ್ಧಿಸುವುದೆಂದು ಹೇಳುತ್ತ, ಜೀವನದಲ್ಲಿ ಪ್ರತಿಯೊಬ್ಬರು ಯಶಸ್ಸು ಹೊಂದಲು ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಪ್ರಸ್ತುತ ಯುವಜನ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿವಿಧ ಮಹಾವಿದ್ಯಾಲಯಗಳಿಂದ 08 ವಿದ್ಯಾರ್ಥಿ ತಂಡಗಳು 20 ಸ್ಪರ್ಧೆಗಳಲ್ಲಿ ಭಾಗವಹಿಸಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ.ಎಲ್.ಪಾಟೀಲ, ಸನ್ಮಾನ್ಯ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮಾತನಾಡಿ 8 ತಂಡಗಳು ಪ್ರಕೃತಿಯ ಕಾಳಜಿಯ ಬಗ್ಗೆ ಒಂದೊಂದು ತತ್ವಗಳನ್ನು ಅಳವಡಿಸಿಕೊಂಡು ಮನಮಟ್ಟುವಂತೆ ಪ್ರದರ್ಶನ ಮಾಡಿದ್ದಕ್ಕೆ ಪ್ರಶಂಸನೆ ನೀಡಿದರು. ಕಾರ್ಯಕ್ರಮದ ಆರಂಭ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಜರುಗಿದ್ದು ತುಂಬಾ ವೈವಿಧ್ಯಮಯವಾಗಿದ್ದು, ಎಲ್ಲ ತರಹದ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ಯುವಕರ ಉತ್ಸಾಹವನ್ನು ನೋಡಿ ಎಲ್ಲ ಹಿರಿಯ ಶಿಕ್ಷಕರಿಗೂ ಮನೋಲ್ಲಾಸವಾಯಿತು. ಈ ಉತ್ಸಾಹವನ್ನು ಜೀವನ ಪರ್ಯಂತವಾಗಿ ಗುರು ಮತ್ತು ಗುರಿಯನ್ನು ಹೊಂದಿ ತಮ್ಮ ಜೀವನದಲ್ಲಿ ಪರಿಪೂರ್ಣತೆ ಹೊಂದುವಂತೆ ಯುವಜನತೆಗೆ ಕಿವಿಮಾತು ನೀಡಿದರು.
ಡಾ.ಬಿ.ಡಿ. ಬಿರಾದಾರ, ಶಿಕ್ಷಣ ನಿರ್ದೇಶಕರು, ಧಾರವಾಡ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯಮಾನ್ಯರನ್ನು ಸ್ವಾಗತಿಸಿದರು ಹಾಗೂ ಡಾ. ಶ್ರೀಪಾದ ಕುಲಕರ್ಣಿ, ಡೀನ್ (ವಿದ್ಯಾರ್ಥಿ ಕಲ್ಯಾಣ), ಕೃವಿವಿ, ಧಾರವಾಡ ಇವರು ಮುಖ್ಯ ಅತಿಥಿಗಳ ಕಿರುಪರಿಚಯ ಮಾಡಿದರು. ಗೌರವಾನ್ವಿತ ಆಹ್ವಾನಿತರಾಗಿ ಕೃವಿವಿ, ಧಾರವಾಡದ ಆಡಳಿತ ಮಂಡಳಿ ಸದಸ್ಯರುಗಳಾದ ಪಾರ್ವತಿ ಕುರ್ಲೆ, ವಿ.ಪಿ.ಪೊಲೀಸಗೌಡರ್, ಬಸವರಾಜ ಕುಂದಗೋಳಮಠ, ಡಾ.ವಾಸುದೇವ ಆರ್., ಮತ್ತು ಮಾಲತೇಶ ಸಿ.ಶ್ಯಾಗೋಟಿ ಉಪಸ್ಥಿತರಿದ್ದರು. ಡಾ. ಪಿ.ಯು.ಕೃಷ್ಣರಾಜ, ಸಂಶೋಧನಾ ನಿರ್ದೇಶಕರು, ಡಾ. ಎಂ.ವಿ.ಮಂಜುನಾಥ, ವಿಸ್ತರಣಾ ನಿರ್ದೇಶಕರು, ಡಾ. ವಿ. ಬಿ. ಕುಲಿಗೋಡ, ವಿದ್ಯಾಧಿಕಾರಿಗಳು (ಕೃಷಿ), ಕೃವಿವಿ, ಧಾರವಾಡ, ಡಾ. ಅಶೋಕ ಎಸ್ ಸಜ್ಜನ ಡೀನ್ (ಸ್ನಾತಕೋತ್ತರ), ಕೃವಿವಿ.,ಧಾರವಾಡ, ಡಾ.ಎಸ್.ಎಸ್. ಜಗ್ಗಿನವರ, ವಿದ್ಯಾಧಿಕಾರಿಗಳು (ಕೃಷಿ), ಕೃ.ಮ.,ವಿಜಯಪುರ, ಡಾ. ಕೆ.ವಿ.ಬಸವಕುಮಾರ, ವಿದ್ಯಾಧಿಕಾರಿಗಳು (ಕೃಷಿ), ಕೃ.ಮ., ಹನುಮನಮಟ್ಟಿ ಹಾಗೂ ಡಾ. ಪಿ.ಎಸ್. ಹೂಗಾರ, ಡೀನ್ (ಕೃಷಿ), ಕೆ.ಎಲ್.ಇ. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ತೆನಿಕೊಳ್ಳ, ಬೆಳಗಾವಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ನಂತರ ಲಘು ಸಂಗೀತ, ಕೊಲ್ಯಾಜ್ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ, ಎಲ್ಲಾ ಮಹಾವಿದ್ಯಾಲಯಗಳ ವಿಧ್ಯಾರ್ಥಿಗಳು, ಸಿಬ್ಭಂದಿಯವರು ಭಾಗವಹಿಸಿದ್ದರು. ಡಾ. ಪಿ.ಎಲ್.ಪಾಟೀಲ, ಸನ್ಮಾನ್ಯ ಕುಲಪತಿಗಳು, ಪ್ರೊ. ಕೆ. ರಘೋತ್ತಮ ರಾವ್, ಚೇರಮನ್, ಸೀಕ್ ಫೌಂಡೇಶನ್ ಹಾಗೂ ಸಂಪನ್ಮೂಲ ವ್ಯಕ್ತಿಗಳು, ಬೆಂಗಳೂರು ಹಾಗೂ ಇತರ ಗಣ್ಯರು ದೀಪ ಬೆಳಗುವುದರ ಮೂಲಕ ಕೃಷಿ ವಿಶ್ವವಿದ್ಯಾಲಯ, ಧಾರವಾಡದ 34 ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ಚಾಲನೆ ನೀಡಿದರು. ಪ್ರೊ. ಕೆ. ರಘೋತ್ತಮ ರಾವ್, ಚೇರಮನ್, ಸೀಕ್ ಫೌಂಡೇಶನ್ ಬೆಂಗಳೂರು ಇವರು ಕೃಷಿ ವಿಶ್ವವಿದ್ಯಾಲಯ, ಧಾರವಾಡದ 34ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಉದ್ಘಾಟಿಸಿ, ಉದ್ಘಾಟನಾ ಭಾಷಣ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 