ಯುವಕರು ತಂದೆ ತಾಯಿಗಳ ಮನಸ್ಸು ನೋಯಿಸಿ ಸ್ವರ್ಗ ಕಳೆದು ಕೊಳ್ಳಬೇಡಿ- ಆಸಿಫ್ ಅಲಿ
Young people, don't lose heaven by hurting your parents' hearts - Asif Ali
ಯುವಕರು ತಂದೆ ತಾಯಿಗಳ ಮನಸ್ಸು ನೋಯಿಸಿ ಸ್ವರ್ಗ ಕಳೆದು ಕೊಳ್ಳಬೇಡಿ- ಆಸಿಫ್ ಅಲಿ
ಕೊಪ್ಪಳ 5: ಪ್ರತಿಯೊಬ್ಬ ರಿಗೂ ಹೆತ್ತ ತಂದೆ ತಾಯಿ ಗಳೇ ಸ್ವರ್ಗ, ಯುವ ಪೀಳಿಗೆ ತಮ್ಮ ತಂದೆ ತಾಯಿಗಳ ಮನಸ್ಸು ನೋಯಿಸಿ ಸ್ವರ್ಗ ಕಳೆದುಕೊಳ್ಳಬೇಡಿ ಎಂದು ಯುವಕರಿಗೆ ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯವಕ್ಫ್ ಸಲಹಾ ಮಂಡಳಿಯ ಸದಸ್ಯ ಎಸ್ ಆಸಿಫ್ ಅಲಿ ಹೇಳಿದರು, ಅವರು ಶುಕ್ರವಾರ ಬೆಳಿಗ್ಗೆ ನಗರದ ಪ್ರಮುಖ ಯೂಸುಫಿಯ ಮಸೀದಿ ಆವರಣ ದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರಿ್ಡಸಿದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ಮುಂದುವರೆದು ಮಾತನಾಡಿ ಸಮಾಜ ಎಂಬುದು ಕುಟುಂಬಗಳ ಒಂದು ಗುಂಪು, ಕುಟುಂಬಗಳಲ್ಲಿ ಅತಿ ಹೆಚ್ಚು ಗೌರವಕ್ಕೆ ಮತ್ತು ಆಧಾರಕ್ಕೆ ಒಳಗಾಗುವದು ಹೆತ್ತವರು ಅವರಿಗೆ ಗೌರವ ಕೊಡಿ ಇದು ಪ್ರವಾದಿ ಯವರು ಹೇಳಿದ ಮಾತು ಇದು ಎಂದು ಹೇಳಿದ ಅವರು ಜೊತೆಗೆ ಸಮಾಜದಲ್ಲಿ ಸಹೋದರತ್ವ ಮತ್ತು ಬಾತೃತ್ವ ದ ವಾತಾವರಣ ನಿರ್ಮಿಸುವುದರ ಜೊತೆಗೆ ಮಾನವೀಯ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು ಇಂತಹ ಹಬ್ಬಗಳ ಆಚರಣೆಗಳ ಮೂಲಕ ಪ್ರವಾದಿಗಳು ,ಸಾಧು, ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಲ್ಲರೊಂದಿಗೆ ಸೌಹಾರ್ದತೆ ಯೊಂದಿಗೆ ಬದುಕಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕೊಪ್ಪಳದ ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಎಸ್ ,ಆಸಿಫ್ ಅಲಿ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ನಗರದ ಹಿರಿಯ ಗಣ್ಯ ವ್ಯಕ್ತಿಗಳಾದ ಅಂದಾನಪ್ಪ ಅಗಡಿ, ಶಾಂತಣ್ಣ ಮುದಗಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ ಕಣವಿ ,ಹಿರಿಯ ನ್ಯಾಯವಾದಿಗಳಾದ ಮಾಳೆಕೊಪ್ಪ ಆರ್, ಬಿ,ಪಾನಗಂಟಿ ,ವೀ ಎಮ್ ಭೂಸನೂರಮಠ, ಪಿ ,ಆರ್, ಹೊಸಳ್ಳಿ ಎ ,ಎ ,ಚೌತಾಯಿ , ಉದ್ದಿಮೆ ವೆಂಕಟೇಶ್ ಬಾರ್ಕೆರ್, ನಗರಸಭಾ ಸದಸ್ಯ ರಾಜಶೇಖರ್ ಅಡೂರ್ ಮುತ್ತುರಾಜ ಕುಷ್ಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮುಸ್ಲಿಂ ಧರ್ಮ ಗುರು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ಅಲ್ಲದೆ ಮಸೀದಿ ಕಮಿಟಿ ಅಧ್ಯಕ್ಷ ಸೈಯದ್ ಎಜದಾನಿ ಪಾಷಾ ಖಾದ್ರಿ ಅನೇಕರು ಪಾಲ್ಗೊಂಡಿದ್ದು ಸಮಾಜದ ಯುವ ನಾಯಕ ಸಲೀಂ ಅಳವಂಡಿ ರವರು ಕಾರ್ಯಕ್ರಮ ದ ನಿರೂಪಣೆ ಮಾಡಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು,
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 