ನಿಮ್ಮ ಬದುಕಿನ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುವಂತಹ ಸಾಮರ್ಥ್ಯ ಮತ್ತು ಧೈರ್ಯ ಹೊಂದಬೇಕು
You must have the ability and courage to make your own decisions in life
ವಿಜಯಪುರ 08: ನಿಮ್ಮ ಬದುಕಿನ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುವಂತಹ ಸಾಮರ್ಥ್ಯ ಮತ್ತು ಧೈರ್ಯ ಹೊಂದಬೇಕು ಎಂದು ಬೆಂಗಳೂರಿನ ಮಹಿಳಾ ಸಶಕ್ತೀಕರಣದ ಸಲಹೆಗಾರ ಅಮೃತವಳ್ಳಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸಿಕ್ಯಾಬ್ ಎಆರ್‌ಎಸ್‌ಐ ಮಹಿಳಾ ಕಾಲೇಜು, ವಿಜಯಪುರ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಉನ್ನತ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಕರ್ನಾಟಕ ಸರ್ಕಾರ, ಬೆಂಗಳೂರು ಇವರ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ‘ಲಿಂಗ ಸಂವೇದನಶೀಲತೆ’ ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಲಿಂಗತ್ವ ಮತ್ತು ಲಿಂಗದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾ, ಸಮಾಜದಲ್ಲಿ ಪುರುಷ ಪ್ರಧಾನ ಮೌಲ್ಯಗಳು ಹೇಗೆ ಮಹಿಳೆಯರ ಜೀವನದಲ್ಲಿ ಅಸಮಾನತೆಯ ಅಲೆಗಳನ್ನು ಸೃಷ್ಟಿಸಿ, ಅವರ ಸಬಲೀಕರಣಕ್ಕೆ ಅಡ್ಡಿಯಾಗುತ್ತಿವೆ ಎಂಬುದನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಮಖ್ಯದ ನಿವೃತ್ತ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಗೌರಿ ಆರ್. ಮಾತನಾಡಿ, ಲಿಂಗ ತಾರತಮ್ಯದ ವಿವಿಧ ಸ್ವರೂಪಗಳನ್ನು ಮಕ್ಕಳಿಗೆ ಸ್ಪಷ್ಟವಾಗಿ ವಿವರಿಸಿದರು. ಕುಟುಂಬದಲ್ಲಿಯೇ ಸಮಾನತೆಯ ಸಾಮಾಜೀಕರಣದ ಅಗತ್ಯತೆಯನ್ನು ಹಾಡು ಹಾಗೂ ಕೆಲ ಪ್ರಕರಣಗಳ ಮೂಲಕ ಬೋಧಿಸಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಎಆರ್‌ಎಸ್‌ಐ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಕೆ.ಯಡಹಳ್ಳಿ ಮಾತನಾಡಿ, ಲಿಂಗ ಸೂಕ್ಷ್ಮತೆಯ ಅರಿವು ಎಲ್ಲರಲ್ಲೂ ಬೆಳೆದರೆ ಮಾತ್ರ ಸಮಾನತೆಯನ್ನು ಸಾಧಿಸಲು ಸಾಧ್ಯ. ಮಹಿಳೆಯರ ಏಳಿಗೆಯಿಂದ ದೇಶದ ಏಳಿಗೆ ಸಾಧ್ಯವಾಗುತ್ತದೆ. ಇದಕ್ಕಾಗಿ ಮಹಿಳೆಯರೂ ಪುರುಷರೂ ಇಬ್ಬರೂ ಕಾರ್ಯಪ್ರವೃತ್ತರಾಗುವುದು ಅತ್ಯಂತ ಮುಖ್ಯ ಎಂದರು.
ಕಾರ್ಯಾಗಾರದಲ್ಲಿ ಉಪ ಪ್ರಾಶುಂಪಾಲ ಡಾ. ಹಾಜ್ರಾ ಪರ್ವಿನ್ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಎಮ್. ಎಸ್. ಮೈತ್ರಿ, ಪ್ರೊ.ಎಮ್.ಎಮ್.ಬಾಗಲಕೋಟ, ಪ್ರೊ. ಎಲ್. ಐ. ನದಾಫ್, ಡಾ. ಸಮೀವುದ್ದೀನ್, ಡಾ. ಮುಷ್ತಾಕ್ ಅಹಮದ್ ಇನಾಮದಾರ್ ಮತ್ತು ಡಾ. ವಿದ್ಯಾವತಿ ಧನ್ನೂರ, ಡಾ. ಆಸ್ಮಾ ಇನಾಮದಾರ್, ಡಾ. ಜ್ಯೋತಿ ಹೂಗಾರ ಹಾಗೂ ದೇವರ ಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಅಧ್ಯಯನ ವಿಭಾಗದ ಪ್ರೊ. ಲಕ್ಷೀಶ ಮತ್ತು ಪ್ರೊ. ಬಗಲಿ ಹಾಗೂ ಅವಿನಾಶ ಹೊಸಮನಿ ಉಪಸ್ಥಿತರಿದ್ದರು.
ಕಾರ್ಯಾಗಾರದ ಸಂಯೋಜಕಿ ಪ್ರೊ.ಲಕ್ಷಿದೇವಿ ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶಬೀನಾ ಪಟೇಲ್, ಶ್ರೀದೇವಿ ಅರಕೇರಿ ಅತಿಥಿ ಪರಿಚಯಿಸಿದರು. ಡಾ.ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಪ್ರೊ. ಮೇಘಾ ವಜ್ರಮಟ್ಟಿ ವಂದಿಸಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 