ನಾಡು ಕಂಡ ಶ್ರೇಷ್ಠ ಕಾಯಕ ಯೋಗಿ ನೂಲಿಯ ಚಂದಯ್ಯ
Yogi Noolia Chandaya, the greatest kayaker the country has ever seen
ನಾಡು ಕಂಡ ಶ್ರೇಷ್ಠ ಕಾಯಕ ಯೋಗಿ ನೂಲಿಯ ಚಂದಯ್ಯ
ಶಿಗ್ಗಾವಿ 10: ಶರಣ ನೂಲಿಯ ಚಂದಯ್ಯ ಅವರು ಕನ್ನಡ ನಾಡು ಕಂಡ ಶ್ರೇಷ್ಠ ಕಾಯಕ ಯೋಗಿಯಾಗಿದ್ದರು ಎಂದು ಸಾಹಿತಿ ಹಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ನೂಲಿಯ ಚಂದಯ್ಯನವರ 918ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ಸಾಮಾಜಿಕ ನ್ಯಾಯಕ್ಕಾಗಿ ಅನೇಕ ಮಹಾತ್ಮರು, ಶರಣರು, ದಾಸರು ಕೆಲಸ ಮಾಡಿದ್ದು, ಚಂದಯ್ಯನವರು ಇದೇ ಸಾಲಿಗೆ ಸೇರುತ್ತಾರೆ, ಕಾಯಕ ದಾಸೋಹ ಮೈಗೂಡಿಸಿಕೊಂಡ ಶರಣ ನೂಲಿ ಚಂದಯ್ಯನವರ 48 ವಚನಗಳು ಲಭ್ಯವಿದ್ದು, ಪ್ರತಿಯೊಂದು ಮನುಕುಲಕ್ಕೆ ಅವಶ್ಯಕ ಸಂದೇಶಗಳು ಸಾರುತ್ತವೆ” ಎಂದರು.
ಕೋರಮ ಸಮಾಜದ ತಾಲೂಕಾಧ್ಯಕ್ಷ ತಿರುಪತಿ ಬಜಂತ್ರಿ ಮಾತನಾಡಿ, ಪಟ್ಟಣದಲ್ಲಿ ಕಾಯಕಯೋಗಿ ಶರಣ ನೂಲಿಯ ಚಂದಯ್ಯನವರ ಕಾರ್ಯಕ್ರಮವನ್ನ ಕೋರಮ ಸಮಾಜದ ವತಿಯಿಂದ ಇದೇ ಆಗಷ್ಟ 16 ರ ಶನಿವಾರದಂದು ಬೆಳಿಗ್ಗೆ 9 ಗಂಟೆಗೆ ಸಂತೆ ಮೈದಾನದ ಶರೀಫ್ ಭವನ ವೇದಿಕೆ ಕಾರ್ಯಕ್ರಮ ಮಾಡಿ, ನಂತರ ಮಧ್ಯಾಹ್ನ 12ಕ್ಕೆ ಭಾವಚಿತ್ರದ ಭವ್ಯ ಮೆರವಣಿಗೆಯನ್ನ ಕುಂಭಮೇಳದೊಂದಿಗೆ ವಿಜೃಂಭಣೆ ನಡೆಸಲಾಗುವುದು ಎಂದರು.
ಉಪ ತಹಶೀಲ್ದಾರ್ ತಿತ್ತಿಯವರು. ನ್ಯಾಯವಾದಿ ಡಾ. ಮಲ್ಲೇಶಪ್ಪ ಹರಿಜನ, ಕುರುಬ ಸಮಾಜದ ತಾಲೂಕಾ ಅದ್ಯಕ್ಷ ಪಕೀರ್ಪ ಕುಂದೂರ, ದಲಿತ ಮುಖಂಡ ಅಶೋಕ ಕಾಳೆ, ರಾಜು ಭಜಂತ್ರಿ, ವಿಠ್ಠಲ್ ಭಜಂತ್ರಿ, ನಾಗರಾಜ್ ಭಜಂತ್ರಿ, ಹನುಮಂತಪ್ಪ ಭಜಂತ್ರಿ, ಮಾರುತಪ್ಪ ಭಜಂತ್ರಿ, ರಾಮಣ್ಣ ಭಜಂತ್ರಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 