ಯೋಗ ದೇಹದ ನಮ್ಯತೆ,ಮಾನಸಿಕ ಶಾಂತಿ ಕಾಪಾಡುತ್ತದೆ: ಡಾ. ಜ್ಯೋತಿ ಖೋದಾನಪುರ
Yoga maintains body flexibility and mental peace: Dr. Jyothi Khodanapura
ಲೋಕದರ್ಶನ ವರದಿ
ವಿಜಯಪುರ 10: ಹಿರಿಯ ನಾಗರಿಕರಿಗೆ ಯೋಗಾಭ್ಯಾಸವು ಆರೋಗ್ಯ, ದೇಹದ ನಮ್ಯತೆ ಮತ್ತು ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಅತ್ಯಂತ ಉಪಯುಕ್ತವಾಗಿದೆ ಎಂದು ಬಿಎಲ್‌ಡಿಇ ಡೀಮ್ಡ್ ಯುನಿವರ್ಸಿಟಿಯ ಫಿಸಿಯಾಲಜಿ ಪ್ರಾಧ್ಯಾಪಕಿ ಹಾಗೂ ಯೋಗ ತಜ್ಞೆ ಡಾ. ಜ್ಯೋತಿ ಖೋದಾನಪುರ ಅವರು ಹೇಳಿದರು.
ಅವರು ಭಾನುವಾರ 9ರಂದು ನಗರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರದ 2ನೇ ಮಾಸಿಕ ಸಭೆಯ ಅಂಗವಾಗಿ ಹಿರಿಯ ನಾಗಕರಿಕ ಆರೋಗ್ಯಕ್ಕಾಗಿ ಯೋಗಸೂತ್ರಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಮಾನವನ ಸಹಜ ಗುಣಧರ್ಮವಾದ ಸತತ ಆಲೋಚನೆ, ಆತಂಕಗಳಿಂದ ಹೊರಬಂದು, ಪರಮಾತ್ಮನ ಸಹಜ ಗುಣಧರ್ಮವಾದ ಆನಂದದೊಡನೆ, ಮಿಳಿತವಾಗುವುದರಲ್ಲಿ ಯೋಗದ ವಿವಿಧ ಅಂಗಗಳಾದ ಪ್ರಾಣಾಯಾಮ, ಜಪ, ತ್ರಾಟಕ, ಧಾರಣ, ಧ್ಯಾನ, ಸಮಾಧಿ ಇವುಗಳ ಪಾತ್ರವನ್ನು ವಿವರಿಸಿದರು.
ಇದರೊಂದಿಗೆ ಉಪವಾಸ ಸದಾ ಚಟುವಟಿಕೆ ಹಾಗೂ ವ್ಯಸನ ಮುಕ್ತ ಜೀವನವು ವಯಸ್ಸಾಗುವುದು ತೊಂದರೆಗಳನ್ನು ಯಾವ ರೀತಿ ನಿವಾರಿಸುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.
ವಿವಿಧ ದೇಶಗಳ ವಿಶ್ವವಿದ್ಯಾಲಯಗಳಲ್ಲಿ 11 ವೈಧ್ಯಕೀಯ ತಜ್ಞರು 72 ರೋಗಿಗಳ ಮೇಲೆ ಪ್ರಯೋಗ ನಡೆಸುವ ಮೂಲಕ ಯೋಗ, ಪ್ರಾಣಾಯಾಮಗಳಿಂದ ಶಸ್ತ್ರಚಿಕಿತ್ಸೆ ಮಾನಸಿಕ ಸಮಸ್ಯೆ, ಮುಪ್ಪಾಗುವಿಕೆ ಹಾಗೂ ಋತುಬಂಧಗಳಿಂದ ಪೀಡಿತರ 220 ಜೀನ್‌ಗಳ ಅಧ್ಯಯನದಿಂದ ಸಂಪೂರ್ಣ ಗುಣವಾಗಿ ಆರೋಗ್ಯ ಪಡೆದಿರುವುದನ್ನು ವಿವರಿಸಿದರು.
ವಿಶೇಷವಾಗಿ ಭ್ರಾಮರೀ ಪ್ರಾಣಾಯಾಮದಿಂದ ನೈಟ್ರಿಕ್ ಆಕ್ಸೈಡ್ ದೇಹದಲ್ಲಿ 16 ಪಟ್ಟು ಬಿಡುಗಡೆಯಾಗುವುದರಿಂದ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗಿರುವ ಸಂಗತಿಯನ್ನು ಸಭಿಕರ ಗಮನಕ್ಕೆ ತಂದರು.
ಕೊನೆಯಲ್ಲಿ ವಯೋವೃದ್ಧರೂ ಸಹ ಕುರ್ಚಿಯ ಮೇಲೆ ಕುಳಿತು ಮಾಡಬಹುದಾದ ಸೂಕ್ಷ್ಮ ವ್ಯಾಯಾಮ, ಯೋಗಾಸನಗಳು ಹಾಗೂ ಪ್ರಾಣಾಯಾಮಗಳನ್ನು ಡಾ. ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಮಾಡಿದ ಸಭಿಕರು ಇನ್ನೂ ಹೆಚ್ಚಿನ ತರಬೇತಿ ಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಬ್ರಹ್ಮಕುಮಾರಿ ಸಂಸ್ಥೆಯಿಂದ ಆಗಮಿಸಿದ ಬಿ.ಕೆ. ಶೋಭಾ ಅಕ್ಕನವರು 10 ಕೋಟಿ ಜನರ ವ್ಯಸನಮುಕ್ತ ಆಂದೋಲನದ ಮಹತ್ವವನ್ನು ಕುರಿತು ವಿವರಿಸಿ, ಸಭಿಕರಿಂದ ಪ್ರತಿಜ್ಞಾ ಸ್ವೀಕಾರ ನೆರವೇರಿಸಿದರು. ಬಿ.ಕೆ. ಗೀರೀಶರವರು ಸಹಾಯ ಸಹಕಾರ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಶಶಿಧರ ಶಿರಹಟ್ಟಿಯವರು ಡಾ. ಜ್ಯೋತಿ ಅವರ ಸಾಧನೆಗಳ ಪರಿಚಯ ಸಭೆಗೆ ಮಾಡಿದಲ್ಲದೇ, ಅಧ್ಯಕ್ಷೀಯ ಭಾಷಣದಲ್ಲಿ ಸಭಿಕರಿಂದಲೇ ಮಾಡಿಸಿದ ಯೋಗ, ಪ್ರಾಣಾಯಾಮ ಹಾಗೂ ಸೂಕ್ಷ್ಮ ವ್ಯಾಯಾಮಗಳು ನಮ್ಮ ಹಿರಿಯ ನಾಗಕರಿಗೆ ಯಾವ ರೀತಿಯಲ್ಲಿ ನೆರವಾಗುವವು ಎಂಬುದನ್ನು ವಿವರಿಸಿದರು.
ಸುಭಾಸ ಬೆಟಗೇರಿಯವರು ಸ್ವಾಗತಿಸಿದರು. ಎಸ್.ಆರ್. ಮಾನಕರ ಪ್ರಾರ್ಥಿಸಿದರು, ಡಾ. ಎಂ.ಬಿ. ಪಟ್ಟಣಶೆಟ್ಟಿ ವಂದಿಸಿದರು, ಕಾರ್ಯದರ್ಶಿಗಳಾದ ಡಾ.ಎಸ್.ಸಿ. ಹಿರೇಮಠ ನಿರೂಪಣೆ ಮಾಡಿದರು ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಹಾಗೂ ಬ್ರಹ್ಮಕುಮಾರಿ ಶೋಭಾ ಅಕ್ಕನವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಮಹಾದೇವ ಹಾಲಳ್ಳಿ, ಸಹದೇವ ನಾಡಗೌಡ, ವ್ಹಿ.ಸಿ. ನಾಗಠಾಣ, ಎಸ್.ಎಮ್. ಹುಂಡೇಕಾರ, ವಿ.ಡಿ. ಐಹೊಳ್ಳಿ, ಸುಭಾಸ ಯಾದವಾಡ, ಶಾರದಾ ಕೊಪ್ಪ, ಬಿ.ಟಿ. ಈಶ್ವರಗೊಂಡ, ಎಸ್.ಪಿ. ಮುಧೋಳ, ಮ.ಗು. ಯಾದವಾಡ, ಸಿ.ಎಮ್. ಪವಾರ, ಐ.ಎಸ್. ಚಿಮ್ಮಲಗಿ, ಅಶೋಕ ಉಪಾಧ್ಯಾಯ ಮುಂತಾದವರು ಭಾಗವಹಿಸಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 