ಭೀಕರ ಬರಗಾಲ: ರೈತರ ಬೆಳೆಹಾನಿ ವೀಕ್ಷಿಸಿದ ಎನ್. ರವಿಕುಮಾರ್, ವಿರೂಪಾಕ್ಷ ಮಾಮನಿ
Severe Drought: N. Ravikumar and Virupaksha Mamani Inspect Crop Loss Suffered by Farmers
ಸವದತ್ತಿ : ತಾಲೂಕಿನ ಹರಳಕಟ್ಟಿ, ಕಗದಾಳ ಮತ್ತು ಅಚಮಟ್ಟಿ ಗ್ರಾಮಗಳಲ್ಲಿ ಭೀಕರ ಬರಗಾಲದಿಂದ ಹಾನಿಗೊಳಗಾದ ಬೆಳೆಗಳನ್ನು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರ ತಂಡವು ನೇರ ಕ್ಷೇತ್ರ ಭೇಟಿ ನೀಡಿ ಪರೀಶೀಲಿಸಿತು. ಮಳೆಯ ಕೊರತೆಯಿಂದ ಒಣಗಿ ನಿಂತಿರುವ ಬೆಳೆಗಳು, ಬಿತ್ತನೆಗಾಗಿ ರೈತರು ಮಾಡಿದ ಅಪಾರ ಖರ್ಚು ಹಾಗೂ ಕೈಕೊಟ್ಟಿರುವ ನೀರೀಕ್ಷೆಗಳು ಅನ್ನದಾತ ಎದುರಿಸುತ್ತಿರುವ ಗಂಭೀರ ಸಂಕಷ್ಟವನ್ನು ಎತ್ತಿ ತೋರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರ ಹಾಗೂ ಬೆಳೆ ವಿಮೆ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕಗದಾಳ ಗ್ರಾಮದ ಹೊಲಗಳಿಗೆ ನೇರವಾಗಿ ತೆರಳಿದ ತಂಡವು, ರೈತರೊಂದಿಗೆ ಮಾತನಾಡಿ ಮಳೆಯ ಕೊರತೆ, ಬೆಳೆ ಹಾನಿ ಮತ್ತು ಬೆಳೆ ವಿಮೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿತು.
ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ ರೈತರ ಸಮಸ್ಯೆಗಳನ್ನು ಕೇವಲ ಸಭೆಗಳಲ್ಲಿ ಚರ್ಚಿಸುವುದಲ್ಲ; ಅವರ ಹೊಲಗಳಿಗೆ ತೆರಳಿ, ಅವರ ನೋವನ್ನು ಆಲಿಸಿ ಪರಿಹಾರಕ್ಕಾಗಿ ಒತ್ತಡ ತರುವುದು ನಮ್ಮ ಜವಾಬ್ದಾರಿ. ಇದು ರಾಜಕೀಯ ಪ್ರವಾಸವಲ್ಲ, ಅನ್ನದಾತನ ಬದುಕಿನ ಹೋರಾಟ, ಎಂದು ತಿಳಿಸಿದರು.
ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳನ್ನು ಗುರುತಿಸಿ, ವೈಜ್ಞಾನಿಕ ಬೆಳೆ ಹಾನಿ ಸಮೀಕ್ಷೆ ನಡೆಸಿ, ಅರ್ಹ ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರವನ್ನು ತ್ವರಿತವಾಗಿ ತಲುಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುವವರೆಗೆ ಅವರ ಪರವಾಗಿ ಹೋರಾಡುವುದಾಗಿ ಭರವಸೆ ನೀಡಿದರು.
ನಿರಾಣಿ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಅರವಿಂದ ಪಾಟೀಲ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ), ಬಸವರಾಜ ಯಂಕಂಚಿ, ಸುಭಾಸ ಪಾಟೀಲ, ಜಗದೀಶ್ ಬೂದಿಹಾಳ, ಕೆ.ವಿ. ಪಾಟೀಲ, ಜಗದೀಶ ಕೌಜಗೇರಿ, ಶೇಖರ ಗೋಕಾಂವಿ, ಸುಭಾಸ ಸಣ್ಣವೀರ್ಪಣವರ, ಉಮೇಶ ಅಂಗಡಿ, ರಮೇಶ ಮೇಟಿ, ರಾಮಕೃಷ್ಣ ಬಸವರಾಜ ಇಂಚಲ ಸೇರಿದಂತೆ ನೂರಾರು ರೈತರು, ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 