ಡಿ. 8ರಿಂದ ಯಶವಂತಪುರ-ಹೊಸಪೇಟೆ-ವಿಜಯಪುರ ರೈಲು ಸಂಚಾರ
Yeshwantpur-Hospet-Vijayapura train service from December 8
ಡಿ. 8ರಿಂದ ಯಶವಂತಪುರ-ಹೊಸಪೇಟೆ-ವಿಜಯಪುರ ರೈಲು ಸಂಚಾರ
ಹೊಸಪೇಟೆ 17: ಕೇಂದ್ರ ಸರ್ಕಾರದ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದ, ದಿ. ಸುರೇಶ್‌ಅಂಗಡಿ ಅವರ ಅವಧಿಯಲ್ಲಿ 2019ರಲ್ಲಿ ಚಾಲನೆ ನೀಡಲಾಗಿರುವ ಯಶವಂತಪುರ-ಹೊಸಪೇಟೆ-ವಿಜಯಪುರ ವಿಶೇಷ ರೈಲು ಬರುವ ಡಿಸೆಂಬರ್ 8 ರಿಂದ ಸಾಮಾನ್ಯಎಕ್ಸ್‌ಪ್ರೇಸ್ ಹಾಗೂ ಖಾಯಂರೈಲ್‌ಆಗಿ ಸಂಚರಿಸಲಿದೆ. ರೈಲು ನಿಯಮಿತವಾಗಿ ಪರಿವರ್ತನೆಯಾಗಿ ಸಂಚರಿಸುವುದರಿಂದ ಪ್ರಯಾಣ ಧರದಲ್ಲಿ ಶೇಕಡ 25ಅ ರಿಂದ 30ಅ ರಷ್ಟು ಇಳಿಕೆಯಾಗುತ್ತದೆ. ಅಲ್ಲದೇ ಖಾಯಂ ರೈಲುಗಳಲ್ಲಿ ಸಾಕಷ್ಟು ಮುಂಚಿತವಾಗಿಅಂದರೆ 60ದಿನ ಮೊದಲೇ ಸೀಟು ಕಾಯ್ದಿರಿಸಲು ಅವಕಾಶ ವಿದ್ದರೆ, ವಿಶೇಷ ರೈಲುಗಳಲ್ಲಿ ಈ ಸೌಲಭ್ಯಇರುವುದಿಲ್ಲ. ರೈಲ್ವೇಇಲಾಖೆಯುಯಾವುದೇ ಮುನ್ಸೂಚನೆ ನೀಡದೇ ವಿಶೇಷ ರೈಲುಗಳ ಸಂಚಾರವನ್ನುರದ್ದುಪಡಿಸಲುಅವಕಾಶವಿದ್ದರೆ, ಖಾಯಂ ರೈಲುಗಳ ಸಂಚಾರವನ್ನುರದ್ದುಪಡಿಸುವಂತಿಲ್ಲಹಾಗೂ ಸಾಮಾನ್ಯಎಕ್ಸ್‌ಪ್ರೇಸ್ ರೈಲುಗಳಲ್ಲಿ ಪ್ರಯಾಣೀಕರಿಗೆ ಹೆಚ್ಚುವರಿ ಸೌಲಭ್ಯಗಳೂ ದೊರೆಯುತ್ತವೆ. ವಿಶೇಷ ರೈಲುಖಾಯಂರೈಲು ಆಗಿ ಸಂಚಾರದ ನಂತರಯಶವಂತಪುರ-ಹೊಸಪೇಟೆ-ವಿಜಯಪುರರೈಲಿನ ಸಂಖ್ಯೆ : 16547/16548 ಆಗುತ್ತದೆ. ಈ ವಿಶೇಷ ರೈಲನ್ನು ಖಾಯಂ ರೈಲು ಆಗಿ ಪರಿವರ್ತಿಸುವಂತೆ ಕಳೆದ 2-3 ವರ್ಷಗಳಿಂದ ವಿಜಯನಗರ ರೈಲ್ವೇ ಬಳಕೆದಾರರ ಸಂಘ ಹಾಗೂನೈರುತ್ಯರೈಲ್ವೇ ಬಳಕೆದಾರರ ಸಲಹಾ ಸಮಿತಿ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್‌ಅವರಿಂದ ನೈರುತ್ಯರೈಲ್ವೇ ವಲಯದ ಪ್ರದಾನ ವ್ಯವಸ್ಥಾಪಕರು ಹಾಗೂ ರೈಲ್ವೇ ಮಂಡಳಿಗೆ ಮನವಿ ಸಲ್ಲಿಸಿದ್ದು, ಬೇಡಿಕೆಗೆ ಸ್ಪಂದಿಸಿರುವ ನೈರುತ್ಯರೈಲ್ವೇ ವಲಯದ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 