ವಾಷರ್ಿಕೋತ್ಸವ: ಜಾನಪದ ಹಬ್ಬ ಕಾರ್ಯಕ್ರಮ
ಲೋಕದರ್ಶನ ವರದಿ
ಹೊಸಪೇಟೆ06.: ಪಂಡಿತ ಪುಟ್ಟರಾಜ ಗ್ರಾಮೀಣಾಭಿವೃದ್ಧಿ ವಿದ್ಯಾವರ್ಧಕ ಹಾಗೂ ವಿವಿದೋದ್ದೇಶಗಳ ಚಾರಿಟಬಲ್ ಟ್ರಸ್ಟ್, ಅಡಿಯಲ್ಲಿ ಆಕ್ಸ್ಪಡರ್್ ಕಿರಿಯ ಪ್ರಾಥಮಿಕ ಶಾಲೆ ಕೊಂಡನಾಯಕನಹಳ್ಳಿಯಲ್ಲಿ 5ನೇ ವಾಷರ್ಿಕೋತ್ಸವದ ಪ್ರಯುಕ್ತ ಜಾನಪದ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಪಿ.ಬಸವರಾಜ್, ನಗರಸಭೆ ಸದಸ್ಯರು ವಹಿಸಿಕೊಂಡಿದ್ದರು, ಉದ್ಘಾಟನೆಯನ್ನು ಎ.ಎನ್.ಸುಧಾಕರ್ ಆರ್.ಟಿ.ಇ. ನೂಡಲ್ ಅಧಿಕಾರಿಗಳು ಹೊಸಪೇಟೆ ಉದ್ಘಾಟನೆಯನ್ನು ನೆರವೇರಿಸಿದರು.
ಉದ್ಘಾಟಕರಾದ ಎ.ಎನ್.ಸುಧಾಕರ್ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು. ಹಾಗೂ ಅಧ್ಯಕ್ಷತೆಯನ್ನು ವಹಿಸಿದ ಎಸ್.ಪಿ.ಬಸವರಾಜ್ ರವರು ನಮ್ಮ ಕೊಂಡನಾಯಕನಹಳ್ಳಿ ಭಾಗದಲ್ಲಿ ಮಕ್ಕಳಿಗೆ ಜಾನಪದ ಕಲೆಯನ್ನು ಕಲಿಸುತ್ತಿರುವುದು ಸಮತೋಷಕರ ವಿಷಯ ಎಂದು ಹೇಳಿದರು. ಮಹೇಂದ್ರ ಬೆಸ್ಟ್ ಸ್ಪೋಕನ್ ಇಂಗ್ಲೀಷ್ ಹೊಸಪೇಟೆ ಇವರು ಶಾಲಾ ಮಕ್ಕಳಿಗೆ ಶುದ್ದ ಕೈಬರಹ ಹಾಗೂ ಗ್ರಾಮರ್ನ್ನು ಬೋಧಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 300ಕ್ಕೂ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮುಖ್ಯ ಅತಿಥಿಗಳಾಗಿ ವಿರುಪಾಕ್ಷಪ್ಪ ಸಿ.ಆರ್.ಪಿ ಮಲಪನಗುಡಿ ಕ್ಲಷ್ಟರ್, ಮಹೇಂದ್ರ, ಡಾ.ಮಲ್ಲಪ್ಪ, ಮುಖ್ಯತಿಥಿಗಳಾಗಿ ಆಗಮಿಸಿದರು. ಇದೇ ಕಾರ್ಯಕ್ರಮದಲ್ಲಿ ಯಲ್ಲಪ್ಪ ಚನ್ನದಾಸರು ಹಳೇ ಮಲಪನಗುಡಿ ಇವರಿಗೆ ನಾಡಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 