ವಿಶ್ವ ಕ್ಷಯ ರೋಗ ದಿನಾಚರಣೆ ಸಸಿಗೆ ನೀರುಣಿಸುವ ಮೂಲಕಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ

World Tuberculosis Day celebrations kick off with watering of saplings

ವಿಶ್ವ ಕ್ಷಯ ರೋಗ ದಿನಾಚರಣೆ ಸಸಿಗೆ ನೀರುಣಿಸುವ ಮೂಲಕಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ 

ಬೆಳಗಾವಿ, 26; ದಿ ಮಾ  24ರಂದು ಎಪ್‌. ಪಿ. ಎ. ಐ. ಬೆಳಗಾವಿ ಶಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲಣ ಕೇಂದ್ರ, ವಡಗಾಂವ, ಬೆಳಗಾವಿ, ಕೆ.ಎಲ್‌.ಇ. ಸಂಸ್ಥೆಯ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ "ವಿಶ್ವ ಕ್ಷಯ ರೋಗ ದಿನಾಚರಣೆ"ಯನ್ನು ಕೆ.ಎಲ್‌.ಇ. ಸಂಸ್ಥೆಯ ಶಿಕ್ಷಕರ ತರಬೇತಿ ಮಹಾವಿದ್ಯಾಲಯದಲ್ಲಿ ಅವಲೋಕಿಸಲಾಯಿತು.  ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಲಾಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ವಿ.ಸಿ. ಬಾವ್ಡೆಕರ, ಅಧ್ಯಕ್ಷರು, ಎಪ್‌. ಪಿ. ಎ. ಐ. ಬೆಳಗಾವಿ ಶಾಖೆ ಮಾತನಾಡುತ್ತಾ ಕ್ಷಯ ರೋಗದ ಇತಿಹಾಸದ ಕುರಿತು ವಿವರಿಸುತ್ತಾ ಈ ರೋಗವು ಸಂರ​‍್ೂಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು ಈ ರೊಗವು ರೋಗಿಯು ಕೆಮ್ಮಿದಾಗ, ಸೀನಿದಾಗ, ಉಗಳಿದಾಗ ಬೆರೋಬ್ಬ ವ್ಯಕ್ತಿಗೆ ಹರಡುತ್ತದೆ. ಈ ರೋಗವು ಪ್ರಮುಖವಾಗಿ ಪುಫಸಗಳಿಗೆ ಹಾನಿ ಮಾಡುತ್ತದೆ.  ಈ ರೋಗಕ್ಕೆ ಚಿಕಿತ್ಸೆ ಇದ್ದು ಇದು ಸಂರ​‍್ೂಣ ಉಚಿತವಾಗಿದ್ದು, ಸರಿಯಾದ ಚಿಕಿತ್ಸೆ ಪಡೆದುಕೊಂಡಲ್ಲಿ ರೋಗಿಯು ಸಂರ​‍್ೂಣ ಗುಣ ಮುಖನಾಗುತ್ತಾನೆ. ಹೆಚ್ಚು ಹೆಚ್ಚು ಜಾಗೃತಿ ಮೂಡಿಸಿವುದರೊಂದಿಗೆ ಕ್ಷಯ ರೋಗ ಮುಕ್ತ ಭಾರತವನ್ನಾಗಿಸೋಣ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಚಾಂದಿನಿ ದೇವಡಿ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳು, ಬೆಳಗಾವಿ ಇವರು ಮಾತನಾಡುತ್ತಾ ಕ್ಷಯ ರೋಗವು ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಇದು ಅನೇಕ ಮಹಾನ ವ್ಯಕ್ತಿಗಳಲ್ಲಿಯು ಕಂಡುಬಂದ ಉದಾಹರಣೆಗಳನ್ನು ವಿವರಿಸಿದರು. ಈ ರೋಗವು ಮನುಷ್ಯನ ಉಗುರು ಮತ್ತು ಕೂದಲನ್ನು ಬಿಟ್ಟು ಉಳಿದ ದೇಹದ ಎಲ್ಲಾ ಅಂಗಾಗಳಲ್ಲಿಯು ಹರಡ ಬಹುದು. ಮತ್ತು ಈ ರೋಗ ಬಾರದಂತೆ ಇರುವ ಮುನ್ನೆಚಾರಿಕಾ ಕ್ರಮಗಳನ್ನು ಹಾಗೂ ಲಸಿಕೆಗಳ ಬಗ್ಗೆ ವಿವರಿಸಿದರು. ಇದರ ನಿರ್ಮೂಲನೆಗೆ ಯುವಜನತೆಯ ಪಾತ್ರ ಪ್ರಮುಖವಾದುದು ಎಂದು ಅಭಿಪ್ರಾಯ ಪಟ್ಟರು.  ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ. ಪರಶುರಾಮ ಪಾಟಿಲ ಇವರು ಈ ರೋಗದ ಕುರಿತು  ಸವಿಸ್ತಾರವಾದ ಮಾಹಿತಿ ನೀಡಿದರು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ ಕಾಲೇಜಿನ ಸಹಾಯಕ ಪ್ರೋಫೆಸರ ಶ್ರೀಮತಿ ಎ. ಎಪ್‌. ದೋಡ್ಡಮನಿ ಇವರು ಮಾತನಾಡುತ್ತಾ ಪ್ರಶಿಕ್ಷಣಾರ್ಥಿಗಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಕ್ಷಯರೋಗದ ಕುರಿತು ಅತ್ಯಂತ ಉಪಯುಕ್ತವಾದ ಮಾಹಿತಿ ನೀಡಿರುವುದು. ಯುವ ಜನರಲ್ಲಿ ಆರೋಗ್ಯಯುತ ಜೀವನ ಶೈಲಿ ಮತ್ತು ಪೌಷ್ಟಿಕ ಆಹಾರದ ಕೊರತೆ ಹೆಚ್ಚುತಿದ್ದು  ಇಂತಹ ಜಾಗೃತಿ ಕಾರ್ಯಕ್ರಮಗಳು ಯುವ ಜನರಲ್ಲಿ ಜಾಗೃತಿ ಮೂಡಿಸಲು ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವಾಗಿದ್ದು ಕಾಲೇಜಿನ ಪ್ರಶಿಕ್ಷಾಣಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೋಳ್ಳಬೇಕೆಂದು ಕರೆ ನೀಡಿದರು. ಶ್ರೀಯುತ ಕುಲಕರ್ಣಿ, ಸಹಾಯಕ ಪ್ರೋಫೆಸರ ಇವರು ಸ್ವಾಗಿತಿಸಿದ ಈ ಕಾರ್ಯಕ್ರಮದಲ್ಲಿ, ಎಫ್‌.ಪಿ.ಎ.ಐ. ಬೆಳಗಾವಿ ಶಾಖೆಯ ಸಿಬ್ಬಂದಿ, ಡ್ಯಾಪ್ಕೊ ಸಿಬ್ಬಂದಿ, ಟಿ.ಬಿ.ಸೆಂಟರ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಧಿಗಳು ಉಪಸ್ತೀತರಿದ್ದರು.