ಹಾವೇರಿ29: ಕುವೆಂಪುರವರು ಕನ್ನಡ ಸಾಹಿತ್ಯವನ್ನು ಮೇರು ಶಿಖಕರಕ್ಕೇರಿಸಿದ ಮಹಾನ್ ಚೇತನ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ಶನಿವಾರ ನಗರದ ಬಸವೇಶ್ವರ ಬಿ.ಎಡ್.ಕಾಲೇಜಿನಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಾನವ ದಿನಾಚರಣೆ (ರಾಷ್ಟ್ರ ಕವಿ ಕುವೆಂಪು ಜನ್ಮದಿನ) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕುವೆಂಪು ಅವರು ಸಣ್ಣ ಗ್ರಾಮದಲ್ಲಿ ಜನಿಸಿದರೂ ಸಹ ತಮ್ಮ ಪ್ರಯತ್ನ ಹಾಗೂ ಸಾಧನೆಯಿಂದ ವಿಶ್ವಮಾನವರಾದರು. ಡಾ.ಬಿ.ಆರ್.ಅಂಬೇಡ್ಕರ, ಶಾಸ್ತ್ರೀಜಿ ಹೀಗೆ ಹಲವು ನಾಯಕರೂ ಸಹ ತಮ್ಮ ಪರಿಶ್ರಮದಿಂದ ನಾಡಿಗೆ ಹಾಗೂ ರಾಷ್ಟ್ರಕ್ಕೆ ಕೀತರ್ಿ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಸಾಧನೆ ಮಾಡಬೇಕು. ಸಾಧನೆಗೆ ಚಲಬೇಕು, ಚಲ ಇಲ್ಲದಿದ್ದರೆ ನಿಶಕ್ತಿ ಬರುತ್ತದೆ. ಜೀವನದಲ್ಲಿ ಬದಲಾವಣೆ ಬೇಕು, ಬಡತನದಲ್ಲಿ ಹುಟ್ಟಿದರೂ ಸಾಧನೆ ಮೂಲಕ ಶ್ರೀಮಂತನಾಗಿ ಸಾಯಬೇಕು. ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಬೇಕು, ಕುವೆಂಪು ಅವರು ರಚಿಸಿದ ಕೃತಿಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಸತೀಶ ಕುಲಕಣರ್ಿ ಅವರು ಮಾತನಾಡಿ, ವಿಶ್ವಮಾನವ ಹೇಗೆ ಆಗಬೇಕು ಎಂಬುದನ್ನು ಕುವೆಂಪು ಅವರು ತೋರಿಸಿದ್ದಾರೆ. ಅವರು ನಾಟಕ, ಕವನ ಸಂಕಲನ, ಕಾದಂಬರಿ, ಮಹಾಕಾವ್ಯ, ಲೇಖನಗಳನ್ನು ಸಹ ರಚಿಸಿದ್ದಾರೆ.
ಶ್ರೇಷ್ಠ ಕವಿ ಹಾಗೂ ಕನ್ನಡಕ್ಕೆ ಎಷ್ಟು ಆದ್ಯತೆ ನೀಡಬೇಕು ಹಾಗೂ ಬೇರೆ ಭಾಷೆ ಹೇಗೆ ಕಲಿಯಬೇಕು ಎಂಬುದನ್ನು ತಿಳಿಸಿದ ಕುವೆಂಪು ಅವರು ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಸನಗೌಡ ಹಾಗೂ ಕುಲಕಣಿ, ಕವಿ ಲಿಂಗರಾಜ ಶೆಟ್ಟೆಪ್ಪನವರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಡೆಪ್ಪನವರ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕ ಆರ್.ವಿ.ಚಿನ್ನಿಕಟ್ಟಿ ಅವರು ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.