ಗದಗದಲ್ಲಿ ಎನ್‌ಎಸ್‌ಎಸ್ ಘಟಕದಿಂದ ವಿಶ್ವ ಪರಿಸರ ದಿನಾಚರಣೆ
World Environment Day celebrated by NSS unit in Gadag
ಗದಗದಲ್ಲಿ ಎನ್‌ಎಸ್‌ಎಸ್ ಘಟಕದಿಂದ ವಿಶ್ವ ಪರಿಸರ ದಿನಾಚರಣೆ
ಗದಗ 05 : ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ದಿ. 05 ಗುರುವಾರ ರಂದು ಮಹಾವಿದ್ಯಾಲಯದಲ್ಲಿ ಸಸಿಗಳನ್ನು ನೆಟ್ಟು ನಂತರ ಗದಗ ಬೆಟಗೇರಿ ನಗರದ ರಾಜ್ಯ ಪ್ರಶಸ್ತಿ ವಿಜೇತ ಮಂಜು ಶಿಕ್ಷಣ ಸಂಸ್ಥೆಯ, ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಎನ್. ಎಸ್. ಎಸ್. ತಂಡದ 05,08 ಮತ್ತು 10 ರ ವತಿಯಿಂದ ಆ ಶಾಲೆಯ ಮಕ್ಕಳ ಜೊತೆ ಸೇರಿ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯ ಆಚರಿಸಲಾಯಿತು. ಆ ಶಾಲೆಯ ಅಧ್ಯಕ್ಷರಾದ ಶಂಕರಸಿಂಗ್ ರಜಪುತ್ ಅವರು ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಗದಗ ಜಿಲ್ಲೆ ಶುದ್ಧ ವಾತಾವರಣದಲ್ಲಿ ಪ್ರಥಮ ಸ್ಥಾನದಲ್ಲಿ ಇದೆ, ಸಸಿಗಳನ್ನು ನೆಡುವುದು ಮಾತ್ರವಲ್ಲ, ಅವುಗಳನ್ನು ಪೋಶಿಸಿ ಬೆಳೆಸುವುದು ಸಹ ನಮ್ಮ ಜವಾಬ್ದಾರಿಯಾಗಿದೆ ಎಂದು ಅನೇಕ ವಿಚಾರಗಳನ್ನು ತಿಳಿಸಿದರು. ನಂತರ ಮಕ್ಕಳು ಯಾಕೆ ಬುದ್ಧಿಮಾಂದ್ಯರಾಗುತ್ತಾರೆ, ಆ ರೀತಿ ಆಗದಿರುವ ಹಾಗೆ ತಡೆಯಲು ಏನೆಲ್ಲ ಮಾಡಬಹುದು, ಆ ಮಕ್ಕಳ ಜೀವನ ಶೈಲಿ, ಅವರ ನೆಡವಳಿಕೆ, ಅವರ ಅಭ್ಯಾಸ, ಅವರಿಗಾಗಿ ಇರುವ ಅವಕಾಶಗಳ ಬಗ್ಗೆ ತಿಳಿಸಿದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಉದ್ಯೋಗ ತರಬೇತಿಗಳ ಬಗ್ಗೆ ಕೂಡಾ ಮಾಹಿತಿ ನೀಡಿದರು. ಉದಾಹರಣೆಗೆ ಪೇಪರ್ ಪ್ಲೆಟ್ ತಯ್ಯಾರಿ, ಊದ ಬತ್ತಿ ತಯ್ಯಾರಿ, ಹೆಣಿಕೆಗಳು ಇತ್ಯಾದಿ.
ಈವಿಶೇಷ ಕಾರ್ಯಕ್ರಮದಲ್ಲಿಗದಗ ಬೆಟಗೇರಿ ನಗರದ ರಾಜ್ಯ ಪ್ರಶಸ್ತಿ ವಿಜೇತ ಮಂಜು ಶಿಕ್ಷಣ ಸಂಸ್ಥೆಯ, ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಅಧ್ಯಕ್ಷರಾದ ಶ್ರೀ. ಶಂಕರಸಿಂಗ್ ರಜಪುತ್, ಆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ವೀರೆಂದ್ರ ಎಸ್. ರಜಪುತ್,ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಕೆ. ಮಠ, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಪ್ರೋ. ರಾಜು ಯಲರ್ಬುಗಿ, ಡಾ. ವಿಠ್ಠಲ್ ಕೋಳಿ, ಎನ್. ಎಸ್. ಎಸ್. ತಂಡದ ನಾಯಕರಾದ ಕುಮಾರ. ಪ್ರಶಾಂತ ಕಲರ್ಬುಗಿ, ಕುಮಾರ. ಪಕ್ಕೀರೇಶ ಒಂಟಿ, ಕುಮಾರಿ. ರಂಜಿತಾ ಮೆಲಾನಿ. ಕುಮಾರ. ಪ್ರಜ್ವಲ್ ಬಳ್ಳಾರಿ,ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದಕುಮಾರ. ಪವನಕುಮಾರ ಕುಲಕರ್ಣಿ, ಕುಮಾರಿ. ಸಾಕ್ಷಿ ಹೊಸಮಠ,ಕಾರ್ಯದರ್ಶಿಯಾದ ಕುಮಾರಿ. ನೀಲಮ್ಮ ಸಿತಾರಳ್ಳಿ,ವರದಿಗಾರರಾದ ಕುಮಾರ. ಆಕಾಶ ಕಳಗ್ಗಣ್ಣನವರ,ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯ ಮತ್ತು ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಶಿಕ್ಷಕರು, ಸಿಬಂಧಿಗಳು ಹಾಗೂ ಎನ್. ಎಸ್. ಎಸ್. ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 