ವಿಶ್ವ ವಿಕಲಚೇತನರ ದಿನಾಚರಣೆ ವಿಕಲಚೇತನರಲ್ಲಿ ಅದಮ್ಯ ಚೇತನವಿರುತ್ತದೆ: ನ್ಯಾ.ರೇಣುಕಾದೇವಿ

ಹಾವೇರಿ03:   ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಸಂಘ ಮತ್ತು ಜಿಲ್ಲಾ ಅಂಗವಿಕಲರ ವಿಶೇಷ ಶಾಲಾ ನೌಕರರ ಸಂಘ ಹಾಗೂ ಎಸ್.ಜೆ.ಎಂ.ದೈಹಿಕ ಅಂಗವಿಕಲರ ವಸತಿಯುತ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ  ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

       ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಸ್.ಎಚ್.ರೇಣುಕಾದೇವಿ ಅವರು ವಿಕಲಚೇನರಲ್ಲಿ ಅದ್ಯಮ್ಯ ಚೇತನವಿರುತ್ತವದೆ. ಅಂಗವೈಕಲ್ಯತೆ ಮಕ್ಕಳು ಹಾಗೂ ತಂದೆ-ತಾಯಿಗಳ ತಪ್ಪಲ್ಲ, ಜೀವನದ ಮರು ಮುದ್ರಣಸಾಧ್ಯವಿಲ್ಲ ಹಾಗಾಗಿ ಅವರ ಅಂಗನ್ಯೂನ್ಯತೆ ಎತ್ತಿಹಿಡಿಯುವ  ಬದಲು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು  ಹೇಳಿದರು.

  ಪಂಜಾಬಿ ಕವಿಗಳಾದ ಅಮೃತಾ ಪ್ರೀಮ ಅವರು ಹೇಳಿರುವ ಹಾಗೆ ಈ ಸುಂದರ ಸೃಷ್ಟಿಯಲ್ಲಿ ಅಂಗವೈಕಲ್ಯತೆ, ಬಡತನ, ದಾರಿದ್ರ್ಯ, ಹಸಿವು ದೇವರು ಸೃಷ್ಟಿಸಿದ ಲೋಪವಾಗಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂಗವೈಕಲ್ಯತೆಗೆ ವೈಜ್ಞಾನಿಕ ಕಾರಣವೇ ಬೇರೆಯಾಗಿದೆ. ಮಕ್ಕಳು ಹೇಗೆ ಹುಟ್ಟಿರಲಿ, ಗಂಡಾಗಲಿ ಹೆಣ್ಣಾಗಲಿ ಕುಟುಂಬಕ್ಕೆ ಒಂದೇ ಮಗು ಸಾಕು. ಮಕ್ಕಳನ್ನು ಪ್ರೀತಿ ಮಮತೆಯಿಂದ ಬೆಳೆಸಬೇಕು. 

      ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು  ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಈ ನಡುವೆ ಬರುವ ಸುಮಧುರ ಕ್ಷಣಗಳು ಅವಿಸ್ಮರಣೀಯವಾಗಿವೆ. ಸಾಮಾನ್ಯರಿಗಿಂತ ವಿಕಲಚೇತನರು ವಿಶ್ವಮಟ್ಟದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಉದಾಹರಣೆಗಳಿವೆ. 

     ವಿಶ್ವದ ಶ್ರೇಷ್ಠ ವಿಜ್ಞಾನಿ ಐನ್ಸ್ಟಿನ್ ಅವರು ಕೂಡ ಒಬ್ಬ ವಿಕಲಚೇತನರು. ವಿಶ್ವ ಸಂಸ್ಥೆಯು 1992ರಿಂದ ಜನ ಸಾಮಾನ್ಯರಲ್ಲಿ  ಜಾಗೃತಿ ಮೂಡಿಸಲು ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುತ್ತಿದೆ ಎಂದು ಹೇಳಿದರು.

ರಾಣೇಬೆನ್ನೂರಿನ ನಾಗರಾಜ ಗರಡಿಮನಿ ಅವರು ಇಂದು ರಾಜ್ಯ ಪ್ರಶಸ್ತಿ ಪಡೆಯುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಮನಸ್ಥಿತಿ ಬದಲಾಯಿಸಬೇಕು. ಪ್ರತಿ ವ್ಯಕ್ತಿ ಸಾಧನೆ ಮಾಡಲು ಸಾಧ್ಯ, ಈ ಕಾರ್ಯಕ್ರಮ ಹೊಸ ಹುರುಪು, ಚುರುಕು, ಉತ್ಸಾಹ, ಹುಮ್ಮಸ್ಸು ತರಲಿ, ಎಲ್ಲರೂ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಿರಿ. ಸಕರ್ಾರ ವಿಕಲಚೇತನರಿಗೆ  ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಶೇ.3ರಷ್ಟು ಅನುದಾನ ವಿಕಲಚೇತನರ ಅಭಿವೃದ್ಧಿಗೆ ಮೀಸಲಿಡುತ್ತದೆ. ಈ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

 ಪ್ರತಿಯೊಬ್ಬರೂ ನಮ್ಮ ಹಕ್ಕುಗಳನ್ನು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು.  ವಿಕಲತೆ ಶರೀರಕ್ಕೆ ಹೊರತು ಮನಸ್ಸಿಗಲ್ಲ, ಎಲ್ಲರಂತೆ ವಿಕಲಚೇತನರು ಸರಿಸಮಾನರು ಎಂದು ಹೇಳಿದರು.

   ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ರಾಜೇಶ್ವರಿ ಚಕ್ಕಲೇರ ಅವರು ಸಮಾನ ಅವಕಾಶಗಳು, ಅವರ ಹಕ್ಕುಗಳ ಸಂರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ ಕಾಯ್ದೆ 1995 ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

 ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾಜರ್ುನ ಮಠದ ಅವರು ಸ್ವಾಗತಿಸಿದರು. ಮುತ್ತುರಾಜ ಮಾದರ ವಂದಿಸಿದರು. 

        ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದಶರ್ಿ ಪಿ.ಎಂ.ಬೆನ್ನೂರ, ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೆಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ,  ಉಪಾಧ್ಯಕ್ಷ ಮೌನೇಶ ಬಡಿಗೇರ, ಹಾವೇರಿ ಜಿಲ್ಲಾ ಅಂಗವಿಕಲ ಮಕ್ಕಳ ವಸತಿ ಶಾಲೆಗಳ ಸ್ವಯಂ ಸೇವಾ ಸಂಘದ ಅಧ್ಯಕ್ಷ ಎಚ್.ಆರ್.ಶಿವಕುಮಾರ ಇತರರು ಉಪಸ್ಥಿತರಿದ್ದರು.