ಜಗತ್ತಿನ ಪ್ರಬಲ ಸಂವಹನ ಮಾಧ್ಯಮ ರೇಡಿಯೋ: ಸಂತೋಷ ಬಂಡೆ

World's Strongest Communication Media Radio: Joyful Rock

ಜಗತ್ತಿನ ಪ್ರಬಲ ಸಂವಹನ ಮಾಧ್ಯಮ ರೇಡಿಯೋ: ಸಂತೋಷ ಬಂಡೆ 

ಇಂಡಿ 13: ಜಗತ್ತಿನಲ್ಲಿ ಅತಿಹೆಚ್ಚು ಬಳಕೆಯಾದ ಸಂವಹನ ಮಾಧ್ಯಮಗಳಲ್ಲಿ ರೇಡಿಯೊ ಒಂದಾಗಿದ್ದು, ಅದು ಸರ್ಕಾರದ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸಲು,ಮನುಕುಲಕ್ಕೆ ಜ್ಞಾನ, ಶಿಕ್ಷಣ, ಮನರಂಜನೆ ನೀಡಲು ವ್ಯಾಪಕವಾಗಿ ಬಳಸಲ್ಪಟ್ಟ ಮಾಧ್ಯಮವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.  

ಅವರು ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ರೇಡಿಯೋ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಕಾಲದಲ್ಲಿ ಹಳ್ಳಿ ಜನರ ದೈನಂದಿನ ಜೀವನದ ಭಾಗವಾಗಿದ್ದ ಈ ರೇಡಿಯೋ ಕೃಷಿ, ವಿಜ್ಞಾನ, ಹವಾಮಾನ, ಕಲಿಕೆಯಂತಹ ಅನೇಕ ವಿಚಾರಗಳನ್ನು ಜನರಿಗೆ ತಲುಪಿಸಿ, ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮತ್ತು ನೈಸರ್ಗಿಕ ವಿಕೋಪದ ಸಮಯದಲ್ಲಿ ತುರ್ತು ಸಂವಹನಕ್ಕಾಗಿ ರೇಡಿಯೋ ಬಹುಮುಖ್ಯವಾಗಿದೆ. ರೇಡಿಯೋ ಅತ್ಯಂತ ಹಳೆಯ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದ್ದು, ಅದು ಮಾಹಿತಿಗಳನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು. ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.