ಜಗತ್ತಿನ ಮಹಾನ್ ಬಹುಭಾಷ ಗಾಯಕ ಮಹಮ್ಮದ್ ರಫೀ 46ನೇ ಪುಣ್ಯ ಸ್ಮರಣೆ
World's Greatest Multilingual Singer Muhammad Rafi 46th Anniversary
ಜಗತ್ತಿನ ಮಹಾನ್ ಬಹುಭಾಷ ಗಾಯಕ ಮಹಮ್ಮದ್ ರಫೀ 46ನೇ ಪುಣ್ಯ ಸ್ಮರಣೆ
ಸಿರುಗುಪ್ಪ 30: ಸಂತೋಷವೇ ಜೀವನದ ನಿಜವಾದ ಐಶ್ವರ್ಯ ಯಶಸ್ಸು ಕೀರ್ತಿ ಪಡೆಯಲು ಸ್ನೇಹಿತರು ಬೇಕು ಎಂದು ಸಾಹಿತಿ ಗಾಯಕ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ಹೇಳಿದರು. ನಗರದ ಸೌದಾಗರ ಮೊಹಲ್ಲಾ ಇಬ್ರಾಹಿಂ ಮಂಜಿಲ್‌ನಲ್ಲಿ ಜಗತ್ತಿನ ಮಹಾನ್ ಗಾಯಕ ಮಹಮ್ಮದ್ ರಫೀ ಅವರ 46ನೇ ಪುಣ್ಯ ಸ್ಮರಣೆ ದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಮಹಾನ್ ಗಾಯಕ ಮಹಮ್ಮದ್ ರಫೀ ನಮ್ಮನ್ನು ಆಗಲಿ 46ನೇ ವರ್ಷ ಮಹಮ್ಮದ್ ರಫೀ ತನ್ನ ಕಂಠಸಿರಿಯಲ್ಲಿ ಉಳಿಸಿ ಹೋದ ಅಸಂಖ್ಯಾ ಅಚ್ಚಳಿಯದ ಹಾಡುಗಳೊಂದಿಗೆ ರಫೀ ಸ್ವರಸ್ಮರಣೆ ಮಹಮ್ಮದ್ ರಫೀ ಹಿಂದಿ ಚಿತ್ರ ಸಂಗೀತಕ್ಕೆ ಅನ್ವರ್ಥವಾಗಿರುವ ಹೆಸರು ಸುಮಾರು 4 ದಶಕಗಳ ಕಾಲ ಹಿಂದಿ ಸಿನಿಮಾರಂಗದ ಗಾನ ಸಾಮ್ರಾಜ್ಯದಲ್ಲಿ ವಿಹರಿಸಿದರು. ಅಸಂಖ್ಯಾ ರಸಿಕರನ್ನು ರಫೀ ಅವರು ತಮ್ಮ ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಿದವರು ಶಾಸ್ತ್ರೀಯ ಸಂಗೀತ ದಿಂದ ಮೊದಲಗೊಂಡು ದೇಶಭಕ್ತಿ ಭಜನೆ ಗಜಲ್ ಖವ್ವಾಲಿ ನಾತೆ ರಸೂಲ್ ಎಲ್ಲಾ ರೀತಿಯ ಹಾಡುಗಳನ್ನು ಹಾಡಿ ರಂಜಿಸಿದರು.
1948 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತರಾದಾಗ ಒಂದೇ ರಾತ್ರಿಯಲ್ಲಿ ಹನ್ಸ್ ಲಾಲ್ ಭಗತ್ ರಾಮ್ ರಾಜೇಂದ್ರ ಕೀಶನ್ ಮಹಮ್ಮದ್ ರಫೀ ಮೂವರು ಕೂಡಿ ಒಂದು ಹಾಡು ರಚಿಸಿದರು ಸುನೋ ಸುನೋ ಎ ದುನಿಯಾ ವಾಲೋ ಬಾಪೂಜಿ ಕಿ ಅಮರ್ ಕಹಾನಿ ಎಂಬ ಈ ಗೀತೆಯನ್ನು ಸ್ವತಃ ಮಹಮ್ಮದ್ ರಫೀ ಅವರು ಹಾಡಿದರು ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಈ ಹಾಡು ಕೇಳಿ ಅದೇ ವರ್ಷ ಸ್ವತಂತ್ರ ದಿನಾಚರಣೆ ಬೆಳ್ಳಿಯ ಪದಕ ನೀಡಿ ಗೌರವಿಸಿದರು ಮಹಮ್ಮದ್ ರಫೀ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ಭಾರತ ಸರ್ಕಾರ ನೀಡಿ ಗೌರವಿಸಿತು ಎಂದು ಅಬ್ದುಲ್ ನಬಿ ಅವರು ವಿವರಿಸಿ ಹೇಳಿದರು ಹಾಜಿ ಹಂಡಿ ಹುಸೇನ್ ಬಾಷಾ, ಡಾ. ಮೊಹಮ್ಮದ್ ಅಲಿ, ಹಾಜಿ ಮೊಹಮ್ಮದ್ ಇಬ್ರಾಹಿಂ ನಿಜಾಮಿ , ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಎ.ಮೊಹಮ್ಮದ್ ನಿಜಾಮುದ್ದೀನ್, ಡಾ. ಮೊಹಮ್ಮದ್ ಹಾಜಿ, ಬಿ. ಮೊಹಮ್ಮದ್ ಗೌಸ್ ಬಂಧು ಮಿತ್ರರು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 