ಲೋಕದರ್ಶನ ವರದಿ
ಬೆಳಗಾವಿ 26: ನಗರದ ಉದ್ಯಮಬಾಗದಲ್ಲಿರುವ ಕೆ.ಎಲ್.ಇ. ಯ ಎಂ.ಎಸ್. ಶೇಷಗಿರಿ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜನಿಯರಿಂಗ್ ವಿಭಾಗದವರು "ರಚನಾ -2019" ಇದೇ ದಿನಾಂಕ 25 ಹಾಗೂ 26 ರಂದು ಮಹಾವಿದ್ಯಾಲಯದ ಸಿಲ್ವರ್ ಜುಬಲಿ ಸಭಾ ಭವನದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಬೇರೆ ಬೇರೆ ಕಾಲೇಜುಗಳಿಂದ ಸುಮಾರು 150 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಟ್ಟಡದ ವಾಸ್ತು ಯೋಜನೆ, ಕಟ್ಟಡ ಸೌಂದರ್ಯಶಾಸ್ತ್ರ, ನೂತನ ಭೂಮಾಪ ಹೊಸ ಹೊಸತ ತಂತ್ರಜ್ಞಾನಗಳ ಕುರಿತು ತಿಳುವಳಿಕೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏರ್ಪೋಟ್ರ್ಸ ಅಥಾರಟಿ ಆಫ್ ಇಂಡಿಯಾದ ನಿದರ್ೇಶಕರಾದ ರಾಜೇಶ ಮೌರ್ಯ ಮಾತನಾಡುತ್ತ, ಸಿವಿಲ್ ಇಂಜನಿಯರಿಂಗ್ ವಿದ್ಯಾಥರ್ಿಗಳಾದ ನೀವು ಕೇವಲ ಪಠ್ಯ ಪುಸ್ತಕದ ಹುಳುಗಳಾದರೆ ಸಾಲದು. ನಿಜವಾಗಿ ಹೊರಜಗತ್ತಿನಲ್ಲಿ ಅವುಗಳನ್ನು ಪ್ರತ್ಯಕ್ಷವಾಗಿ ಪ್ರಯೋಗ ಮಾಡುತ್ತ ಹೋದಾಗ ಮಾತ್ರ ನೀವೊಬ್ಬ ಯಶಸ್ವಿ ಇಂಜನಿಯರಾಗಲು ಸಾಧ್ಯ ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ. ಬಸವರಾಜ ಜಿ. ಕಟಗೇರಿಯವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತ ಹೊಸ ಹೊಸ ಪ್ರಯೋಗಗಳೊಂದಿಗೆ ನಿಮ್ಮ ಬುದ್ದಿಮತ್ತೆಯನ್ನು ಬೆಳೆಯಿಸಿಕೊಳ್ಳಿ ಎಂದು ಹೊಸ ಪಿಳಿಗೆಗೆ ತಿಳಿ ಹೇಳಿದರು.
ಶಿಬಿರದ ಸಂಕ್ಷಿಪ್ತ ಪರಿಚಯವನ್ನು ಪ್ರೊ. ಹನುಮಂತ ಮಾಡಿಕೊಟ್ಟರು. ಶ್ರೀಮತಿ ಚಿನಿವಾಲರ ಅತಿಥಿಗಳನ್ನು ಪರಿಚಯಿಸಿದರು. ಡಾ. ಆರ್.ವಿ. ರಾಯಕರ ಅತಿಥಿಗಳನು, ಶಿಬೀರಾಥರ್ಿಗಳನ್ನು ಸ್ವಾಗತಿಸಿದರು. ಪ್ರೊ. ನಿಖಿಲ ವಂದಿಸಿದರು.