ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ : ಸಿದ್ದು ಸವದಿ

ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ : ಸಿದ್ದು ಸವದಿ Workers are the real asset of the party: Sidhu Savadi


ರಬಕವಿ-ಬನಹಟ್ಟಿ 26: ರಾಜ್ಯದಲ್ಲಿ ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಬೇಕಾಗಿದೆ. ಈ ದಿಶೆಯಲ್ಲಿ ಮತಗಟ್ಟೆ ಪರಿಷ್ಕರಣೆ ನಡೆಯುತ್ತಿದ್ದು, ಬೂತ್ ಮಟ್ಟದ ಕಾರ್ಯಕರ್ತರು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಲಿ. ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ ಎಂದು ಶಾಸಕ ಸಿದ್ದು ಕ. ಸವದಿ ಹೇಳಿದರು. ಅವರು ಬನ ಹಟ್ಟಿಯ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಾಗಾರದ ಸಂದರ್ಭದಲ್ಲಿ ಮಾತನಾಡಿದರು. 

ಮತಗಟ್ಟೆ ಪರಿಷ್ಕರಣೆಯಲ್ಲಿ ಪಕ್ಷದ ಬೂತ್ ಮಟ್ಟದ ಏಜೆಂಟರ ಸಹಕಾರ ಕೂಡಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಏಜೆಂಟರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಈ ಸಂದರ್ಭದಲ್ಲಿ ಮತಪಟ್ಟಿಯಲ್ಲಿ ಇದ್ದವರು ನಿಧನರಾಗಿದ್ದರೆ, ವಲಸಿಗರಾಗಿದ್ದರೆ ಅಂಥವರ ಹೆಸರುಗಳನ್ನು ತೆಗೆದು ಹಾಕುವಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಸವದಿ ತಿಳಿಸಿದರು. 

ಮತದಾರ ಪಟ್ಟಿ ಪರಿಷ್ಕರಣೆಯ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ಸಾಕಷ್ಟು ರೀತಿಯಲ್ಲಿ ಇದು ಲಾಭವಾಗಿದ್ದು, ಇದರಿಂದ ವಲಸಿಗರನ್ನು ಗುರುತಿಸಲು ಸಾಧ್ಯವಾಗುತ್ತದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಆದ್ದರಿಂದ ಮತಗಟ್ಟೆ ಪರಿಷ್ಕರಣೆಯ ಸಂದರ್ಭದಲ್ಲಿ ಬೂತ್ ಮಟ್ಟದ ಏಜೆಂಟರು ಪಕ್ಷತಮಗೆ ನೀಡಿದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ, ಶಂಕರ ಹುನ್ನೂರ, ಆನಂದ ಕಂಪು, ಶ್ರೀಶೈಲಗೌಡ ಪಾಟೀಲ ಸೇರಿದಂತೆ ಇನ್ನೂ ಅನೇಕರು ಮಾತನಾಡಿದರು. 

ಗ್ರಾಮೀಣಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಮಹಾಂತೇಶ ಹಿಟ್ಟಿನಮಠ, ಪುಂಡಲಿಕ ಪಾಲಭಾಂವಿ, ಜಿಲ್ಲಾಘಟಕದ ಉಪಾಧ್ಯಕ್ಷೆ ಪವಿತಾ ್ರತುಕ್ಕನ್ನವರ, ಸವಿತಾ ಹೊಸೂರ, ಗೌರಿ ಮಿಳ್ಳಿ, ಪ್ರವೀಣಧ ಬಾಡಿ, ಅಪ್ಪು ರಾವಳ, ಶಿವಾನಂದ ಗಾಯಕವಾಡ, ಪಾಂಡು ಹಿಪ್ಪರಗಿ, ಗುರು ಮರಡಿಮಠ ಸೇರಿದಂತೆ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದಏಜೆಂಟರು ಉಪಸ್ಥಿತರಿದ್ದರು.