ತಾಳಿಕೋಟೆ, 29: ಪ್ರಧಾನಿ ನರೇಂದ್ರ ಮೋದಿಯವರ ಅಬಿವೃದ್ದಿ ಕಾರ್ಯಗಳನ್ನು ದೇಶದ ಜನ ಒಪ್ಪಿಕೊಂಡಿದ್ದು 300ಕ್ಕು ಅಧಿಕ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಮೋದಿ ಮತ್ತೋಮ್ಮೆ ಪ್ರಧಾನಿ ಆಗುತ್ತಾರೆ ಎಂದು ಕೇಂದ್ರ ಸಚಿವ, ವಿಜಯಪುರ ಲೋಕಸಭಾ ಬಿಜೆಪಿ ಅಭ್ಯಥರ್ಿ ರಮೇಶ ಜಿಗಜಿಣಗಿ ಹೇಳಿದರು.
ಅವರು ಪಟ್ಟಣದ ಬಾಲಾಜಿ ಸಭಾ ಮಂದಿರದಲ್ಲಿ ಲೋಕಸಭಾ ಚನಾವಣೆ ಹಿನ್ನಲೆಯಲ್ಲಿ ನಡೆದ ತಾಳಿಕೋಟೆ, ಕೊಣ್ಣೂರ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು 5 ವರ್ಷದಲ್ಲಿ ಮೋದಿಯವರ ನೇತೃತ್ವದಲ್ಲಿ ದೇಶ ಪ್ರಪಚಂದ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ. 55 ವರ್ಷ ಆಡಳಿತ ನಡೆಸಿದ ಕಾಂಗ್ರೇಸ್ ಸರಕಾರ ಮಾಡದ್ದನ್ನು ಮೋದಿ ಮಾಡಿದ್ದಾರೆ. ದೇಶದ ಸೈನಿಕ ಪಡೆಯನ್ನು ಬಲಪಡಿಸಿ ಶತ್ರು ರಾಷ್ಟ್ರ ನಮ್ಮ ಮುಂದೆ ಮಂಡಿಯೂರುವಂತೆ ಮಾಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರು ಹುತತ್ಮರಾದ 48 ಗಂಟೆಯಲ್ಲಿ ಶತ್ರು ರಾಷ್ಟ್ರದಲ್ಲಿ ಅಡಗಿದ್ದ ಬಯೋತ್ಪಾದಕರನ್ನು ಹೆಡೆಮುರಿ ಕಟ್ಟಿದ್ದಾರೆ. ಕೇಂದ್ರ ಬಿಜೆಪಿ ಸರಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡುವ ಒಂದು ಗುಂಪು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಸೋಲಾಪೂರ-ಗದಗ ರೇಲ್ವೆ ಹಳಿಗಳ ಮೇಲ್ದಜರ್ೆಗೇರಿಸಿರುವದು ನನ್ನ ಕಾರ್ಯವಲ್ಲವೇ ಎಂದು ಪ್ರಶಶ್ನಿಸಿದ ಅವರು, ಜಿಲ್ಲೆಗೆ 5 ವರ್ಷಗಳಲ್ಲಿ 5 ಸಾವಿರ ಕೋಟಿ ಹಣ ತಂದು ಅಬಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ಕಾರ್ಯಕರ್ತರು ಮತದಾರನ ಮನೆ ಮನೆಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ಕಾರ್ಯಗಳು ಹಾಗೂ ಸಾಧನೆಗಳನ್ನು ತಿಳಿಸಿ ಮತ ಯಾಚಿಸಬೇಕು. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದಾರೆ. ಏಪ್ರೀಲ್ 2 ರಂದು ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಿಜಯಪುರ ಲೋಕಸಭಾ ಚುನಾವಣಾ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಕಾರ್ಯಕರ್ತರು ಬೇರೆ ಮತಗಟ್ಟೆಗಳಿಗೆ ಹೋಗದೇ ತಮ್ಮದೇ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಬೇಕು. ಬೇಸಿಗೆಯ ಸಂದರ್ಭ ಇರುವದರಿಂದ ಜನರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಾರೆ. ಅವರನ್ನು ಮತಗಟ್ಟೆಗೆ ಕರೆತಂದು ಮತಗಳನ್ನು ಹಾಕುವಂತೆ ಮಾಡಬೇಕು ಎಂದರು.
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದಶರ್ಿ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಐದುವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ನಮ್ಮ ದೇಶ ತಲೆ ಎತ್ತಿ ನಡೆಯುವಂತೆ ಮೋದಿಜಿ ಅವರು ಆಡಳಿತವನ್ನು ನೀಡಿದ್ದಾರೆ ದೇಶದ ಆಥರ್ಿಕತೆ ಭದ್ರತೆಯ ಹಿತದೃಷ್ಠಿಯಿಂದ ಅನೇಕ ಕಠಿಣ ನಿಧರ್ಾರಗಳನ್ನು ಕೈಗೊಂಡು ಕಳಂಕರಹೀತ ಆಡಳಿತವನ್ನು ನೀಡಿದ್ದಾರೆ ಅವರ ಬಗ್ಗೆ ದೇಶದ ಜನರಲ್ಲಿ ಮೂಡಿರುವ ಅಭಿಮಾನ ರಕ್ತದ ಕಣಣದಿಂದಲೂ ಮೋದಿ ಮತ್ತೋಮ್ಮೆ ಎಂದು ಸಾರಿ ಹೇಳುತ್ತಿವೆ ಕಾರಣ ಕಾರ್ಯಕರ್ತರು ದೇಶದ ಹಿತದೃಷ್ಠಿಯಿಂದ ಕೈಗೊಂಡ ಪ್ರಧಾನಿ ಮೋದಿಜಿ ಅವರ ಜನಪರ ಕಾರ್ಯಗಳ ಕುರಿತು ಜನರಿಗೆ ವಿವರಿಸಿ ಮತಯಾಚನೆ ಮಾಡುವಂತಹ ಕಾರ್ಯ ಮಾಡಬೇಕೆಂದರು.
ಈ ಸಮಯದಲ್ಲಿ ಮುಖಂಡರಾದ ನಿಂಗಪ್ಪಗೌಡ ಬಪ್ಪರಗಿ, ಮಲಕೇಂದ್ರಾಯಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಎಮ್,ಎಸ್.ಪಾಟೀಲ, ಸೋಮನಗೌಡ ಬಿರಾದಾರ, ಸಂಗಮ್ಮ ದೇವರಳ್ಳಿ, ಕಾಸಿಬಾಯಿ ರಾಂಪೂರೆ, ಡಾ.ಬಸವರಾಜ ಅಸ್ಕಿ, ಎಮ್.ಡಿ.ಕುಂಬಾರ, ರಾಘವೇಂದ್ರ ಚವ್ಹಾಣ, ಅಣ್ಣಪ್ಪ ಜಗತಾಪ, ಮಾನಸಿಂಗ ಕೊಕಟನೂರ, ಪ್ರಕಾಶ ಹಜೇರಿ, ಮೊದಲಾದವರು ಉಪಸ್ಥಿತರಿದ್ದರು.