ಸಿ ಸಿ ಕ್ಯಾಮರಾ ಮೂಲಕ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಕಸ ಹಾಕುವ ಪ್ರಜ್ಞಾಹೀನರನ್ನು ಗುರುತಿಸಿ ದಂಡ ವಿಧಿಸುವ ಕಾರ್ಯಕ್ಕೆ ಚಾಲನೆ
Work has been initiated to identify and fine those who litter on the main streets of the block usin
ಗದಗ 14 :- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 20, 23,ಹಾಗೂ 25 ನೇ ಕೂಡು ವಾರ್ಡಗಳ ಮಧ್ಯವರ್ತಿ ಸ್ಥಳವಾದ ಹನಮನ ಗರಡಿ 3 ನೇ ನಂಬರ್ ಶಾಲೆಯ ಹತ್ತಿರದಲ್ಲಿನ ಸಾರ್ವಜನಿಕ ಮೂತ್ರಾಲಯದ ಪಕ್ಕದಲ್ಲಿಯೇ ಬಡಾವಣೆಯ ನಾಗರಿಕರಿಗೆ ತುಂಗಭದ್ರಾ ಕುಡಿಯುವ ನೀರಿನ ಪೂರೈಕೆಯ ವಾಲ್ವ್ ಇರುವ ನಿಗದಿತ ಸ್ಥಳದ ಮೇಲೆಯೇ ಕೆಲವೇ ಕೆಲವು ಪ್ರಜ್ಞಾಹೀನ ನಾಗರಿಕರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಅವೈಜ್ಞಾನಿಕವಾಗಿ ಹಾಕುತ್ತಿರುವರು ಇದರಿಂದ ಬಡಾವಣೆ ನಾಗರಿಕರಿಗೆ ರೋಗ ರೂಜಿನಗಳ ಭಯ, ವಿಪರೀತ ಸೊಳ್ಳೆಗಳ ಕಾಟ ಹಾಗೂ ಬೀಡಾಡಿ ದನಗಳು ಸದರ ಕಸವನ್ನೇ ಸೇವಿಸುತ್ತಿದ್ದವು.
ಆದರೆ ಕಸ ವಿಲೇವಾರಿಗಾಗಿಯೇ ಎಂದು ಗೌರವಾನ್ವಿತ ಗದಗ ಬೆಟಗೇರಿ ನಗರಸಭೆಯ ವತಿಯಿಂದ ಪೌರ ಕಾರ್ಮಿಕರ ಸಹಕಾರದೊಂದಿಗೆ ಕಸ ವಿಲೇವಾರಿ ವಾಹನದಲ್ಲಿ ಬಡಾವಣೆಯ ಪ್ರತಿಯೊಂದು ಮನೆ ಮನೆಯಿಂದಲೂ ಕಸವನ್ನು ಸಂಗ್ರಹಿಸಿಕೊಂಡು ವಿಲೇವಾರಿ ಮಾಡುವ ಕಾರ್ಯ ನಿರಂತರವಾಗಿ ಜರುಗುತ್ತಿದ್ದರೂ ಪ್ರಜ್ಞಾಹೀನ ನಾಗರಿಕರು ಮಾತ್ರ ಕಸವನ್ನು ಕುಡಿಯುವ ನೀರು ಸರಬರಾಜು ಮಾಡುವ ವಾಲ್ವ್ ಮೇಲೆಯೇ ಕಸವನ್ನು ನಿರಾತಂಕವಾಗಿ ಸುರಿಯುತ್ತಿರುವದನ್ನು ಮನಗಂಡ ಬಡಾವಣೆಯ ಪ್ರಮುಖರಾದ ರಾಘವೇಂದ್ರ ಪಾಲನಕರ ರವರ ನಿರಂತರ ಪರಿಶ್ರಮದ ಮೂಲಕ ಅವೈಜ್ಞಾನಿಕ ಕಸ ವಿಲೇವಾರಿಯನ್ನು ತಡೆಯಲು ಪ್ರಯತ್ನ ಮಾಡಿದರೂ ಕೂಡಾ ಫಲಪ್ರದವಾಗದಿರುವುದನ್ನು ಮನಗಂಡು ಗದಗ ಬೆಟಗೇರಿ ನಗರಸಭೆಯ ಸಹಕಾರದೊಂದಿಗೆ ಬ್ಲಾಕ್ ಸ್ಪಾಟ್ ಗಳಲ್ಲಿ ಮೂರನೇ ಕಣ್ಣು ಎಂದೇ ಖ್ಯಾತವಾಗಿರುವ ಸಿ ಸಿ ಕ್ಯಾಮರಾ ಅಳವಡಿಸುವ ಮೂಲಕ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವವರನ್ನು ಗುರುತಿಸಲು ಮುಂದಾಗಿರುವರು.
ಇದರಿಂದಾಗಿ ಗೊತ್ತುಗುರಿಯಿಲ್ಲದೆ ಎಲ್ಲೆಂದರಲ್ಲಿ ಕಸ ಹಾಕುವವರನ್ನು ಗುರುತಿಸಿ ಅವರ ಕಸ ಅವರ ಮನೆಗೆ ಹಾಗೂ ನಗರಸಭೆ ಪರಿಸರ ವಿಭಾಗದಿಂದ ದಂಡ ವಿಧಿಸುವ ಮೂಲಕ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ತಡೆಯಲು ದಿಟ್ಟ ಕ್ರಮಕ್ಕೆ ಮುಂದಾಗಿರುವರು. ಇದಕ್ಕೆ ಸಹಕಾರಪೂರ್ವಕವಾಗಿ ಸಿ ಸಿ ಕ್ಯಾಮರಾದಿಂದ ಗುರುತಿಸಲ್ಪಟ್ಟ ರಸ್ತೆಯಲ್ಲಿ ಕಸ ಹಾಕುವ ದುರುಳರಿಗೆ ಗದಗ ಬೆಟಗೇರಿ ನಗರಸಭೆಯಿಂದ ದಂಡಮ್ ದಶಗುಣಂ ಅಸ್ತ್ರಕ್ಕೆ ಮುಂದಾಗುವದು ಸ್ವಚ್ಛ ನಗರ ಸುಂದರ ಪರಿಸರಕ್ಕೆ ನಾಂದಿಯಾಗಬೇಕಾಗಿದೆ ಎನ್ನುವದು ಬಡಾವಣೆಯ ನಾಗರಿಕರ ಆಶಯವಾಗಿರುತ್ತದೆ. ಈ ಸಂಧರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಮುನಾಫ್ ಮುಲ್ಲಾ, ನಗರಸಭೆಯ ವಾಲ್ ಮನ್ ರಾಜು ಆರಟ್ಟಿ, ನಾಗರಾಜ್ ಬೆನಮಟ್ಟಿ ಮತ್ತು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 