ಮಹಿಳೆಯರು ಕೀಳರಿಮೆ ಬಿಡಬೇಕು: ರೇಣುಕಾದೇವಿ

ಹಾವೇರಿ 08: ಮಹಿಳೆಯರು ಕೀಳರಿಮೆ ಬಿಡಬೇಕು ಹಾಗೂ ವಯಕ್ತಿಕ ಅಭಿವೃದ್ಧಿಹೊಂದಬೇಕು. ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪುರುಷರಿಗೆ ಸಮಾನವಾಗಿ ಕೆಲಸನಿರ್ವಹಿಸುತ್ತಿದ್ದಾಳೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಚ್.ರೇಣುಕಾದೇವಿ ಅವರು ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ನ್ಯಾಯವಾದಿಗಳ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇಡಾರಿ ಸಂಸ್ಥೆ ಸಹಯೋಗದಲ್ಲಿ  ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗಿ ಉಳಿದಿಲ್ಲ. ಮನೆ ಹೊರಗೂ ಹಾಗೂ ಮನೆಯೊಳಗು ದುಡಿಯುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಹಾಗಾಗಿ ಮೊದಲು ಮನೆ, ವಯಕ್ತಿಕ ಸುರಕ್ಷತೆ ಬಗ್ಗೆ ಯೋಚಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುತ್ತಾರೆ. ಹೆಣ್ಣು ಸಹನಾಶೀಲೆ, ಮನಸ್ಸು ಬಿಚ್ಚಿ ಮಾತನಾಡುವ ಮನೋಭಾವ ಹೊಂದಿದ್ದಾಳೆ. ಇದರ ಮಧ್ಯೆ ಏನಾದರೂ ಸಮಸ್ಯೆಗಳಿದ್ದರೆ  ಮನೆ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ. ಸಾಧ್ಯವಿಲ್ಲವೆಂದಾಗ ಮಾತ್ರ ಕೋಟರ್್ ಮೊರೆಹೋಗಿ. ಬದುಕು ಅಸಹನೀಯ ಮಾಡಿಕೊಳ್ಳದೆ ಸಹನೀಯ ಮಾಡಿಕೊಳ್ಳಿ. ಬದುಕು ಎಲ್ಲದ್ದಕ್ಕಿಂತ ದೊಡ್ಡದು. ಸಂಬಂಧಗಳನ್ನು ಪ್ರೀತಿ ಹಾಗೂ ಪ್ರೀತಿ ಹಂಚಿ ಎಂದು ಕರೆ ನೀಡಿದರು.

1910ಕ್ಕಿಂತ ಮೊದಲು ಮಹಿಳೆಯರು ಕಾಖರ್ಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಪುರುಷರಿಗೆ ಸಮಾನ ವೇತನ ನೀಡುತ್ತಿರಲಿಲ್ಲ. ಇಂತಹ ಅನೇಕ ಸಮಸ್ಯೆಗಳ ವಿರುದ್ಧ ಮಹಿಳೆಯರು ಸಂಘಟನೆ ಮೂಲಕ ಹೋರಾಡಿದರು. ಮಹಿಳೆಯರು ದೈಹಿಕವಾಗಿ ಸದೃಢವಾಗಿಲ್ಲದಿದ್ದರೂ ಮಾನಸಿಕವಾಗಿ ಸದೃಢವಾಗಿದ್ದಾಳೆ ಎಂದು ಹೇಳಿದರು. ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ವೈ.ಎಲ್.ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೃಷ್ಟಿಕರ್ತ ಮಹಿಳೆಗೆ ವಿಶೇಷ ಸಾಮಥ್ರ್ಯ ನೀಡಿದ್ದಾನೆ. ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಎಲ್ಲ ರಂಗಗಳಲ್ಲೂ ಗುರುತಿಸಿಕೊಂಡಿದ್ದಾಳೆ. ಮಹಿಳೆಯರು ತಮ್ಮ ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳ ಸದುಪಯೋಗವಾಗಬೇಕೇ ಹೊರತು ದುರುಪಯೋಗವಾಗಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕುಮಾರಿ ಕರುಣಾ ಇಟಗಿ ಹಾಗೂ ವಿಜಯಾ ಕುಂಬಾರಿ ಅವರಿಗೆ  ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದಶರ್ಿ ಪಿ.ಎಂ.ಬೆನ್ನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೆಶಕ ಎಂ.ಎನ್.ಮಾಳಿಗೇರ, ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ  ಅನ್ನಪುರ್ಣ ಮುದಕಮ್ಮನವರ, ಪಿ.ಎಸ್.ಐ.ನಂದಿ, ತಹಶೀಲ್ದಾರೆಚ್.ಸಿ. ಶಿವಕುಮಾರ, ಇಡಾರಿ ಸಂಸ್ಥೆ ಅಧ್ಯಕ್ಷೆ ಪರಿಮಳಾ ಜೈನ್ ಅವರು ಉಪಸ್ಥಿತರಿದ್ದರು. ವಕೀಲರಾದ ಎಸ್.ಎಸ್.ಸಣ್ಣತಮ್ಮನವರ, ಕುಮಾರಿ ರಾಜೇಶ್ವರಿ ಚಕ್ಕಲೇರ, ಗೌಡಪ್ಪಗೌಡ್ರ ಅವರು ಉಪನ್ಯಾಸ ನೀಡಿದರು. ತಾಲೂಕು ಸಂರಕ್ಷಣಾಧಿಕಾರಿ ಕುಮಾರಿ ಉಮಾ ಕೆ.ಎಸ್. ಸ್ವಾಗತಿಸಿದರು. ವಿನಾಯಕ ಗುಡದೂರ ಕಾರ್ಯಕ್ರಮ ನಿರೂಪಿಸಿದರು.