ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ

Women's Kabaddi Tournament concludes

ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ  

ರಾಯಬಾಗ 22: ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆಯಿಲ್ಲ ಎಂದು ತೋರಿಸಲು ಇಂದು ಶಾಸಕ ಐಹೊಳೆಯವರು ರಾಷ್ಟ್ರಮಟ್ಟದ ಅಖಿಲ ಭಾರತ ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  

ಮಂಗಳವಾರ ಸಾಯಂಕಾಲ ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ “ಎ” ಗ್ರೇಡ್ ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿದ್ದಾರೆ ಎಂದರು. ಈ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸುವುದರಲ್ಲಿ ಐಹೊಳೆ ಅವರ ಸುಪುತ್ರರಾದ ಅರುಣ ಮತ್ತು ಶಿವಾನಂದ ಅವರ ಪರಿಶ್ರಮ ಬಹಳಷ್ಟಿದೆ ಎಂದರು.  

ಕಬ್ಬೂರ ಗೌರಿಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಾಸಕ ಐಹೊಳೆಯವರು ಗಾಯನ ಸ್ಪರ್ಧೆ ಮತ್ತು ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿರುವುದರ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ, ಇದರ ಸದುಪಯೋಗವನ್ನು ಈ ಭಾಗದ ಯುವ ಪ್ರತಿಭೆಗಳನ್ನು ಪಡೆದುಕೊಳ್ಳಬೇಕೆಂದರು.  

ಶಾಸಕ ಡಿ.ಎಮ್‌.ಐಹೊಳೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು.  

ಸಿಪಿಐ ಬಿ.ಎಸ್‌.ಮಂಟೂರ, ಬಿಇಒ ಬಸವರಾಜಪ್ಪ ಆರ್‌., ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಆರ್‌.ಕೆ.ಪಾಟೀಲ, ಕಲ್ಲಪ್ಪ ಕಮತೆ, ವಾಸುದೇವ ಕುಲಕರ್ಣಿ, ಸಂದೀಪ ಪಾಟೀಲ, ಸಂಭಾಜಿ ಚವ್ಹಾಣ, ರಾಯಗೌಡ ಕೆಳಗಿನಮನಿ, ಮಹಾದೇವ ಕಾಂಬಳೆ, ಶಿವಗೌಡ ಪಾಟೀಲ, ಬಿ.ಎಸ್‌.ಪಾಟೀಲ, ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ ಸೇರಿ ಅನೇಕರು ಇದ್ದರು.