ಸಾಯಿನಗರ ಬಡಾವಣೆಯಲ್ಲಿ ವಿಶಿಷ್ಟರೀತಿಯಲ್ಲಿ ಮಹಿಳಾದಿನಾಚರಣೆ : ಮಹಿಳೆಯರು ಸದೃಡರಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ : ರವಿಕೊಟಬಾಗಿ

ಸಾಯಿನಗರ ಬಡಾವಣೆಯಲ್ಲಿ ವಿಶಿಷ್ಟರೀತಿಯಲ್ಲಿ ಮಹಿಳಾದಿನಾಚರಣೆ : ಮಹಿಳೆಯರು ಸದೃಡರಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ : ರವಿಕೊಟಬಾಗಿ  Women's Day celebrated in a unique way in Sainagar Layout: Change in society is possible only when

ಲೋಕದರ್ಶನ ವರದಿ 

                ಬೆಳಗಾವಿ10 : ಈಗಿನ ಸಮಾಜದಲ್ಲಿ ಮಹಿಳೆಯರು ತಮ್ಮಷ್ಟಕ್ಕೆ ತಾವೇ ಬದಲಾವಣೆ ಮಾಡಿಕೊಳ್ಳುವಲ್ಲಿ ಮುಂದಡಿ ಇಟ್ಟು ದೈರ್ಯದಿಂದ ಸದೃಡರಾಗಿ ಎಲ್ಲಾ ಕ್ಷೇತ್ರಗಳಲ್ಲಿ ಧುಮಕಿದಾಗ ಮಾತ್ರ ಸಮಾಜದಲ್ಲಿ ಏನಾದರೂ ಸಾಧನೆ ಮತ್ತುಬದಲಾವಣೆ ಮಾಡುವುದಕ್ಕೆ ಸಾಧ್ಯವೆಂದು ಮುತಗಾ ಗ್ರಾಮಪಂಚಾಯತ್ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕೊಟಬಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಮಹಿಳಾ ದಿನಾಚರಣೆ ಅಂಗವಾಗಿ ಇಂದು ಮುತಗಾ ಪಂಚಾಯತ್ ಬಡಾವಣೆಯಾದ ಸಾಯಿನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   

ಮುಂದುವರೆದು ಮಾತನಾಡಿದ ಅವರು ಮಹಿಳೆ ಸಮಾಜದ  ಶಕ್ತಿಯಾಗಿದ್ದು ಅದರಲ್ಲೂ ಈಗ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕಾರಣ ಇದಲ್ಲಾ ಅವಕಾಶಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಸಮಾಜದ ಮೇಲುಸ್ಥರದಲ್ಲಿ ಬಂದಾಗ ಮಾತ್ರ ಇಂತಹ ಮಹಿಳಾ ದಿನಾಚರನೆಗೆ ವಿಶೇಷವಾದ ಅರ್ಥಬರುವುದು ಎಂದು ಹೇಳಿದರು. ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಿಲು ಯೋಚಿಸಿದ್ದು ಸೇವೆಗೆ ಬದ್ದನಾಗಿದ್ದೆನೆ ಎಂದರು.   

       ಕಾರ್ಯಕ್ರಮದಲ್ಲಿ ಸುಮಾರು 350 ಜನಮಹಿಳೆಯರಿಗೆ ವಿಶೇಷಗೌರವ ನೀಡುವ ನೀಟ್ಟಿನಲಿ ರವಿಕೊಟಬಾಗಿ ಅರಿಶಿನ-ಕುಂಕಮ ನೀಡುವುದರೊಂದಿಗೆ ಉಡಿತುಂಬಿ ಕಾಣಿಕೆ ನೀಡಿ ಮಹಿಳಾ ದಿನಾಚರನೆಯನ್ನು ಅತ್ಯಂತ ವಿಶಿಷ್ಟರೀತಿಯಲ್ಲಿ ಆಚರಿಸಿದರು.   ಈ ಕಾರ್ಯಕ್ರಮದಲ್ಲಿ 70 ವರ್ಷಕ್ಕಿಂತ ಹೆಚ್ಚುವಯಸ್ಸಿನ15 ಹಿರಿಯ ಮಹಿಳೆಯರನ್ನು ಸತ್ಕರಿಸಿದ್ದು ವಿಶೇಷವಾಗಿತ್ತು.   ಮುತಗಾ ಪಿ.ಕೆ.ಪಿ.ಎಸ್ನಿರ್ದೇಶಕಿ ಮತ್ತುಮಾಜಿ ಗ್ರಾ.ಪಂಸದಸ್ಯೆ ಮಾಲಾ ಕಿಚಡಿ ಒಳಗೊಂಡಂತೆ ಸಾಯಿನಗರ ವಾಸಿಗಳ ಸಂಘ, ಮತ್ತು ಗಣೇಶ ಉತ್ಸವಮಂಡಳಿ ಹಾಗೂ ಮಹಿಳಾಮಂಡಳದ ಸದಸ್ಯರುಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.