ಮಹಿಳಾ ದಿನಾಚರಣೆ: ಮಹಿಳೆಯರು ಸಾವಲಂಬಿಗಳಾಗಬೇಕು

Women's Day: Women should become self-reliant

ಮಹಿಳಾ ದಿನಾಚರಣೆ: ಮಹಿಳೆಯರು ಸಾವಲಂಬಿಗಳಾಗಬೇಕು 

ಕೊಪ್ಪಳ 10: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಕ್ಕಮಹಾದೇವಿ ಮಹಿಳಾಮಂಡಲದಿಂದ 8. ರಂದು ಆಚರಿಸಲಾಯಿತು ಉದ್ಘಾಟಕರಾಗಿ ಶ್ವೇತ ಉಳ್ಳಾಗಡ್ಡಿ ಅವರು ಕಲರ್ ತೆರೇಪಿ ಬಗ್ಗೆ ಅಂದರೆ ಏನು ಯಾವತರಹ ಕಾಯಿಲೆಗೆ ಯಾವ ಕಲರ್ ಹಚ್ಚಿದರೆ ವಾಸಿಯಾಗುತ್ತದೆ ಡೆಮೋ ಮಾಡಿ ತೋರಿಸಿದರು ಮತ್ತು ಇಲ್ಲಿಗೆ ಬಂದು ಉದ್ಘಾಟನೆ ಮಾಡಿದ್ದಕ್ಕಾಗಿ ತುಂಬಾ ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದರು. 

 ಯಾರಾದರೂ ಟ್ರೇನಿಂಗ ಗೆ ಹೋಗಲು ಇಚ್ಚಿಸಿದರೆ ತರಬೇತಿ ತೆಗೆದುಕೊಳ್ಳುವವರಿದ್ದರೆ ತಿಳಿಸಿರಿ ಅಂತ ಕೂಡ ಹೇಳಿದರು. ಮಹಿಳೆಯರು ಮುಂದೆ ಬರಲು ಪ್ರಯತ್ನ ಮಾಡಿ ಹಾಗೂ ನಗರರಸಭೆ ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ ಮಾತನಾಡಿ ಸಾಕಷ್ಟು ಅವಕಾಶಗಳು ಸರಕಾರದಲ್ಲಿವೆ ಅವುಗಳನ್ನು ಉಪಯೋಗ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿಕೊಟ್ಟರು ಹಾಗೂ ಅಕ್ಕಮಹಾದೇವಿ ಮಹಿಳಾಮಂಡಲದ ಅಧ್ಯಕ್ಷರಾದಂತ ಕೋಮಲಾ ಕುದುರೆಮೋತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಲಂಬಿ ಜೀವನವನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು.  

ಎಲೆಮರೆ ಕಾಯಂತಿರುವ ಮಹಿಳೆಯರು ತುಂಬಾ ಜನ ಕೊಪ್ಪಳದಲ್ಲಿ ಇದ್ದಾರೆ ಅಂತ ತಿಳಿಸಿಕೊಟ್ಟರು ಗಿರಿಜಕ್ಕ ಬಳ್ಳೊಳ್ಳಿ ಉಪಸ್ಥಿತರಿದ್ದರು ಸುಧಾಚಕ್ಕೆ, ಲತಾ ನಿಧಿ ಜೋ, ಗೀತಾ ಇಟ್ಗಿ ಶಾಂತ ಗರಿಮಠ ಲಲಿತಾ ಗುತ್ತಿ ಲತಾ ನಿಡ ಶೆಶಿ ಮಂಜುಳಾ ಸುಶೀಲ ಗೀತಾ ಶಾವಕ್ಕ ಸಾನ್ವಿ ಪೂರ್ಣಿಮಾ ವಿಜಯಕ್ಕ ಸುವರ್ಣ ಶಾಂತ ಇನ್ನೂ ಮೊದಲಾದವರು ಪ್ರಾರ್ಥನೆ, ವಿಜಯಲಕ್ಷ್ಮಿ ಮುದುಗಲ್ ನಿರೂಪಣೆ ಮಧು ಹಡಗಲಿ ಮಾಡಿದರು ಹಾಗೂ ಮನೋರಂಜನೆ ಕಾರ್ಯಕ್ರಮ ಆಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.