ಮಹಿಳಾ ದಿನಾಚರಣೆ:ಮಹಿಳೆ ಈಗ ಸಬಲೆ-ಸುವರ್ಣಾ ಆಸಂಗಿ.
ಮಹಾಲಿಂಗಪುರ, 11; ಇಂದು ಶೈಕ್ಷಣಿಕ ಧಾರ್ಮಿಕ,ರಾಜಕೀಯ,ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮ ಛಾಪನ್ನು ಮೂಡಿಸಿದ್ದು ಇಂದು ಮಹಿಳೆಗೆ ಅಬಲೆ ಎನ್ನುವಂತಿಲ್ಲ ಅವಳು ಸಬಲಳಾಗಿದ್ದಾಳೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣಾ ಆಸಂಗಿ ಹೇಳಿದರು. ಪಟ್ಟಣದ ಶ್ರೀ ದಾನಮ್ಮದೇವಿ ನಗರದಲ್ಲಿ ಸೋಮವಾರ ಸಂಜೆ ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟದಿಂದ ಆಯೋಜಿಸಿದ್ದ *ವಿಶ್ವ ಮಹಿಳಾ ದಿನಾಚರಣೆ* ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪುರುಷರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಕುರಿತು ಮಾತನಾಡುವಾಗ ಅಬಲೆ ಪದ ಬಳಕೆಯ ಅವಶ್ಯಕತೆ ಈಗ ಉಳಿದಿಲ್ಲ. ಪ್ರತಿಯೊಂದು ಹಂತದಲ್ಲಿ ಮಹಿಳೆ ತನ್ನ ಪಾತ್ರ ಯಶಸ್ವಿಯಾಗಿ ನಿರ್ವಹಿಸುತ್ತಾ ಮುಂದುವರಿಯುತ್ತಿದ್ದಾಳೆ. ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವದು ನಮ್ಮ ಕರ್ತವ್ಯವಾಗಿದೆ. ಮಹಿಳಾ ಒಕ್ಕೂಟ ರಚಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ದಾನಮ್ಮ ನಗರದ ಮಹಿಳೆಯರ ಕಾರ್ಯ ಆದರ್ಶವಾಗಿದೆ ಎಂದರು. ಶ್ರೀ ಸಿದ್ಧಾರೂಢ ಟ್ರಸ್ಟ ಕಮೀಟಿ ಕಾರ್ಯದರ್ಶಿ ಚಂದ್ರಶೇಖರ ಮೋರೆ ಮಾತನಾಡಿ ಪುರಸಭೆ ಪೌರ ಕಾರ್ಮಿಕದಿಂದ ಓಲಂಪಿಕ್, ಬಾಹ್ಯಾಕಾಶ ಕ್ಷೇತ್ರದವರೆಗೆ ಇಂದು ಮಹಿಳೆ ಬೆಳೆದುನಿಂತಿದ್ದಾಳೆ. ಪ್ರಧಾನಿ ಮೋದಿಯವರು ಮಹಿಳೆಯರಿಗೆ ಶೇ.30 ರಷ್ಟು ಮೀಸಲಾತಿ ಘೋಷಣೆ ಮಾಡಿದ್ದಾರೆ.ಮುಂಬರುವ 2028 ವಿಧಾನಸಭೆ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 70 ಜನ ಮಹಿಳೆಯರು ಶಾಸಕಿಯರು ಹಾಗೂ ದೇಶದಲ್ಲಿ ಸುಮಾರು 180 ಜನ ಮಹಿಳೆಯರು ಸಂಸದೆಯರಾಗಲಿದ್ದಾರೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ರೋಣದ ಗುರುಗಳು,ಶಿಕ್ಷಕ ಎಂ.ಆರ್.ಬಿದರಿ, ಡಾ.ಶ್ವೇತಾ ಅರೆನಾಡ, ಉಪನ್ಯಾಸಕ ಎಸ್.ಎಚ್.ಮೆಳವಂಕಿ, ಶಿಕ್ಷಕ ಎಂ.ಆರ್.ಬಿದರಿ,ಉಪ್ಪಾರ ಗುರುಗಳು ಮಹಿಳೆಯ ಮಹತ್ವ ಕುರಿತು ಮಾತನಾಡಿದರು. ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಂಜನಾ ಬೆನವಾಡೆ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಉಪಾಧ್ಯಕ್ಷೆ ಸೃಷ್ಠಿ ಶಿಪ್ರಿ, ಪುರಸಭೆ ಸದಸ್ಯ ಚನಬಸು ಯರಗಟ್ಟಿ, ಕಾನಿಪ ಜಿಲ್ಲಾ ಸದಸ್ಯ ಎಸ್.ಎಸ್.ಈಶ್ವರ್ಪಗೋಳ, ಚಿದಾನಂದ ಹ್ಯಾಗಾಡಿ ಅತಿಥಗಳಾಗಿ ಆಗಮಿಸಿದ್ದರು. ಸಂಪ್ರತಾ ಮರೆಗುದ್ದಿ ಹಾಗೂ ಸ್ಪಂದನಾ ಮರೆಗುದ್ದಿಯವರ ಭರತ ನಾಟ್ಯ ಹಾಗೂ ಗಾಯನ ಗಮನಸೆಳೆಯಿತು. ಪ್ರತೀಕ್ಷಾ ಯಾದವಾಡ ಪ್ರಾರ್ಥಿಸಿದರು. ಶಿಕ್ಷಕಿ ಶೋಭಾ ಮೆಳವಂಕಿ ನಿರೂಪಿಸಿದರು. ವಿಶಾಲಾಕ್ಷಿ ಪೂಜೇರಿ ಸ್ವಾಗತಿಸಿದರು. ಪ್ರಭಾವತಿ ಮರೆಗುದ್ದಿ ವಂದಿಸಿದರು. ಶಿಕ್ಷಕಿಯರಾದ ನರ್ಮದಾ ಹಟ್ಟಿ, ಶಿವಲೀಲಾ ಜಂಬಗಿ,ಶಿವಮಾಲಾ ವಿರಕ್ತಮಠ, ಶಾಂತಾ ಬಡಿಗೇರ, ಮಲ್ಲಮ್ಮ ಜಾಡರ, ರೇಖಾ ಈಶ್ವರ್ಪಗೋಳ, ರೇಖಾ ಹ್ಯಾಗಾಡಿ, ಸುನೀತಾ ಅಂಗಡಿ, ರೇಖಾ ರೋಣದ, ಸುಮಿತ್ರಾ ಪೂಜೇರಿ, ವಿದ್ಯಾ ಕೋಟೆಗಾರ, ರಿಯಾನಾ ಬಿದರಿ, ಚನ್ನಮ್ಮ ಕೊಣ್ಣೂರ ಮುಂತಾದವರು ಇದ್ದರು.