ಮಹಿಳಾ ದಿನಾಚರಣೆ: ಹೆಣ್ಣು ಮಕ್ಕಳ ಶಾಲೆಯಲ್ಲಿ ತಾಯಂದಿರ ಕ್ರೀಡಾಕೂಟ

Women's Day: Mothers' sports meet at girls' school

ಮಹಿಳಾ ದಿನಾಚರಣೆ: ಹೆಣ್ಣು ಮಕ್ಕಳ ಶಾಲೆಯಲ್ಲಿ ತಾಯಂದಿರ ಕ್ರೀಡಾಕೂಟ 

 ರನ್ನ ಬೆಳಗಲಿ 09: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ರನ್ನ ಬೆಳಗಲಿಯಲ್ಲಿ ಶನಿವಾರ ದಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ತಾಯಂದಿರ ಕ್ರೀಡಾಕೂಟ ದೊಂದಿಗೆ ಮಹಿಳಾ ದಿನಾಚರಣೆ ವಿಶೇಷವಾಗಿ ಜರುಗಿತು. 

ವೇದಿಕೆ ಅಧ್ಯಕ್ಷತೆ ವಹಿಸಿದ ಪ್ರೇಮಾ ಲೋಹಾರ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷರು. ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ಹೆಣ್ಣು ಮಕ್ಕಳ ಶಾಲೆ,ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಮಕ್ಕಳ ಸರ್ವಾಂಗಿನ ಪ್ರಗತಿಯನ್ನು ಇಮ್ಮಡಿಗೊಳಿಸುವುದರ ಜೊತೆಗೆ ವಿಶೇಷವಾಗಿ ಇಂದು ನಮ್ಮ ಶಾಲೆಯ ಎಲ್ಲಾ ತಾಯಂದಿರಿಗೆ ಕ್ರೀಡೆಗಳನ್ನು ಆಯೋಜಿಸಿ, ಅವರಿಗೂ ಕೂಡ ಪ್ರೋತ್ಸಾಹ ನೀಡಿ ಬೆಂಬಲ ನೀಡುತ್ತಿರುವುದು ಶ್ಲಾಘನೀಯವಾಗಿದೆ.ಆದ್ದರಿಂದ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಹೆಣ್ಣು ಶಿಕ್ಷಣ ಕಲಿತು. ಉತ್ತಮ ಸಾಧನೆ ಮಾಡಿ,ಸಮಾಜಕ್ಕೆ ಆದರ್ಶ ಸ್ತ್ರೀಯಾಗಿ ಬದುಕಿ ಬಾಳಬೇಕೆಂದು ತಿಳಿಸಿದರು. 

ಎಸ್ ಎಲ್ ಕಠಾರೆ ಮುಖ್ಯೋಪಾಧ್ಯಾಯನಿ ಕ್ರಿಯಾಶೀಲ ಗುರು ಬಳಗ ಹೊಂದಿದ ನಮ್ಮ ಶಾಲೆಯು ಪ್ರತಿಯೊಂದು ಕಾರ್ಯಕ್ರಮಗಳನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ. ಪ್ರತಿನಿತ್ಯ ಬಿಡುವಿಲ್ಲದೆ ಶ್ರಮಿಸುವ ಮಹಿಳೆ, ಅಂತರಾಷ್ಟ್ರೀಯ ಮಹಿಳಾ ದಿನವಾದರೂ ಸ್ವತಂತ್ರವಾಗಿ ನಕ್ಕು ನಲಿಯಲಿ ಎಂಬ ಉದ್ದೇಶ ದಿಂದ ಕ್ರೀಡಾಕೂಟವನ್ನು ಆಯೋಜಿಸಿ, ಹೆತ್ತ ಮಕ್ಕಳ ಮುಂದೆ ತಾಯಿ ಆಟ ಆಡುವುದು,ಮಕ್ಕಳು ತಾಯಂದಿರ ಆಟವನ್ನು ಕಂಡಾಗ ಮಕ್ಕಳ ಆನಂದಕ್ಕೆ ಪರಿವೆ ಇಲ್ಲ. ಒತ್ತಡ ಜೀವನಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆಮ್ಮದಿ ಮತ್ತು ಶಾಂತಿ ನೀಡುತ್ತಿವೆ ಎಂದು ತಿಳಿಸಿದರು.ರಾಜೇಶ್ವರಿ ಪುರಾಣಿಕ ಸದಸ್ಯರು ಎಸ್‌.ಡಿ.ಎಮ್‌.ಸಿ ನಮ್ಮ ಪಟ್ಟಣದಲ್ಲಿ ಹೆಣ್ಣು ಮಕ್ಕಳಿಗಾಗಿ ಇರುವ ಏಕೈಕ ಶಾಲೆ ನಮ್ಮ ಶಾಲೆಯಾಗಿದೆ. ಶಿಕ್ಷಕರ ಜೊತೆಗೆ ಪಾಲಕ, ಪೋಷಕರು ಸಹಕರಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದರೆ ಉತ್ತಮ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿನಿಯರು ಚೆನ್ನಾಗಿ ಓದಿ, ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. 

ತಾಯಂದಿರಗಾಗಿ ಏರಿ​‍್ಡಸಿದ ಕೊಳವೆ ಮೂಲಕ ಥರ್ಮಾಕೋಲ್ ಬಾಲ್ ಸಂಗ್ರಹಣೆ ಸ್ಫರ್ಧೆ,ನಿಂಬು ಚಮಚ ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಪರ್ಧೆ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಹೆತ್ತ ಮಕ್ಕಳ ಗುರುತಿಸುವ ಸ್ಪರ್ಧೆಗಳು ಜರುಗಿದವು. ಈ ಎಲ್ಲಾ ಸ್ಪರ್ಧೆಯಲ್ಲಿ ವಿಜೇತರಾದ ತಾಯಂದಿರಿಗೆ ಶಿಕ್ಷಕಿಯರಾದ ಎಸ್ ಪಿ ಜೋಶಿ, ಎಸ್ ಹೆಚ್ ಮಾದರ, ಆರ್ ಡಿ ಬಂಡಿ, ಹೆಚ್ ಬಿ ಜಮಾದಾರ, ಆರ್ ಟಿ ದಂಡಿನ ಬಹುಮಾನಗಳನ್ನು ವಿತರಿಸಿದರು. ಎಸ್‌.ಡಿ.ಎಮ್‌.ಸಿ ಸದಸ್ಯರಾದ ಲಕ್ಷ್ಮೀ ನಾವಿ, ಸಂಗೀತಾ ಗುರವ,ಬಂದವ್ವ ಲಾಲಸಿಂಗಿ, ಮಹಾನಂದ ಬಬಲಾದಿ, ರೇಖಾ ಬಡಿಗೇರ ಮತ್ತು ಶಾಲಾ ಸಿಬ್ಬಂದಿಗಳಾದ ಶೋಭಾ ವೀರಘಂಟಿ, ಕಾಳಮ್ಮ ಬಡಿಗೇರ,ಭಾರತಿ. ಮಳ್ಳಿಗೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಗೌರವ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮಕ್ಕೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.