ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕುರಿತು ಸದನದಲ್ಲಿ ಧ್ವನಿ ಎತ್ತುವೆ: ಶಾಸಕ ಕಾಗೆ
Will raise voice in the House for a separate North Karnataka state: MLA Kage
ಕಾಗವಾಡ: ಅನುದಾನ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಡಿಸೆಂಬರ್ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವೆ. ಸರ್ಕಾರ ಸ್ಪಂದಿಸದೇ ಇದ್ದಲ್ಲಿ, ನಾನೇ ಮುಂದಾಳತ್ವ ವಹಿಸಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವೃಗೊಳಿಸಲಾಗುವುದೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಬುಧವಾರ ದಿ. 12 ರಂದು ಕಾಗವಾಡ ಮತಕ್ಷೇತ್ರದ ಸಿದ್ದೇವಾಡಿ ಮತ್ತು ಮದಭಾವಿ ಗ್ರಾಮಗಳಲ್ಲಿ ಸುಮಾರ 40 ಲಕ್ಷ ರೂ. ಅನುದಾನದ ಎರಡು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಮದಭಾವಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ, ಮಾತನಾಡುತ್ತಿದ್ದರು. ಉತ್ತರ ಕರ್ನಾಟಕ ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಸರ್ಕಾರವಿರಲ್ಲಿ ಅನ್ಯಾಯ ಮಾಡುತ್ತಾ ಬಂದಿವೆ. ಆದ್ದರಿಂದ ನಾನು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ.
ಸ್ವಾತಂತ್ರ ಸಿಕ್ಕಾಗಿನಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೆ ಬಂದಿದೆ. ಈ ವಿಷಯದಲ್ಲಿ ರಾಜಕೀಯವೇನು ಇಲ್ಲ. ಯಾವುದೇ ಸರ್ಕಾರಗಳು ಬಂದರೂ ಉತ್ತರ ಕರ್ನಾಟಕಕ್ಕೆ ಅನುದಾನ, ಅಭಿವೃದ್ಧಿ ಹಾಗೂ ರಾಜಕೀಯ ವಿಚಾರವಾಗಿಯೂ ಅನ್ಯಾಯ ಮಾಡಲಾಗುತ್ತದೆ. ಆದ್ದರಿಂದ ದಿವಂಗತ ಉಮೇಶ ಕತ್ತಿ ಅವರ ಬಳಿಕ ನಾನೂ ಕೂಡ ಈ ಭಾಗದ ಒಬ್ಬ ಹಿರಿಯ ರಾಜಕೀಯ ನಾಯಕನಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ಆಶ್ಚರ್ಯಕರವೇನಲ್ಲ ಎಂದರು.
ಇನ್ನೂ ಸಚಿವ ಸಂಪುಟ ಪುನರ ರಚನೆಯ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುವುದ ಖಚಿತ. ಅಧಿವೇಶನದ ನಂತರ ಇಲ್ಲವೇ ಅದರ ಮುಂಚಿತವಾಗಿ ಆಗುತ್ತದೆ. ವಿಸ್ತರಣೆ ಆದರೆ ನಾನೂ ಕೂಡ ಒಬ್ಬ ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿ. ನಾನು ಹಿರಿಯ ಶಾಸಕ. ನನಗೂ ಕೂಡ ಸಚಿವ ಸ್ಥಾನ ಸಿಗುತ್ತದೆ. ನಾಳೆ ಬೆಂಗಳೂರಿಗೆ ತೆರಳಿ ಸಚಿವ ಸ್ಥಾನದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡಿ, ಸಚಿವ ಸ್ಥಾನ ಪಡೆದು ಕೊಳ್ಳುವೆ ಎಂದರು.
ಈ ವೇಳೆ ಮಾಜಿ ಜಿ.ಪಂ. ಸದಸ್ಯ ವಿನಾಯಕ ಬಾಗಡಿ ಮಾತನಾಡಿ, ಶಾಸಕ ರಾಜು ಕಾಗೆಯವರು ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಯಾವತ್ತು ಯಾವುದೇ ಹುದ್ದೆಯನ್ನು ಕೇಳಿ ಪಡೆದುಕೊಂಡಿಲ್ಲ. ಜನಸೇವೆ ಮಾಡುತ್ತ ಬಂದಿರುವ ಅವರು 5 ಬಾರಿ ಶಾಸಕರಾಗಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾಗಿ, ಈಗ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರಿತನದ ಆಧಾರದ ಮೇಲೆ ಶಾಸಕ ರಾಜು ಕಾಗೆಯವರಿಗೆ ಸಚಿವ ಸ್ಥಾನ ನೀಡಬೇಕೇಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಜಿ.ಪಂ. ಸದಸ್ಯ ವಿನಾಯಕ ಬಾಗಡಿ, ಮಹಾದೇವ ಕೋರೆ, ಮಾಜಿ ತಾ.ಪಂ ಅಧ್ಯಕ್ಷ ನಿಜಗುಣಿ ಮಗದುಮ್ಮ, ಮುಖಂಡರಾದ ಡಾ. ಅರವಿಂದರಾವ ಕಾರ್ಚಿ, ಅಶೋಕ ಪೂಜಾರಿ, ರಾಯಪ್ಪಾ ಮಗದುಮ್ಮ, ಶ್ರೀಕಾಂತ ವಿವೇಕಿ, ಮಲಕು ಮಗದುಮ್ಮ, ಸದಾಶಿವ ಮಗದುಮ್ಮ, ಸಿದಗೌಡಾ ಮಗದುಮ್ಮ, ಗಿರಿಮಲ್ಲಾ ಇಬ್ರಾಹಿಮಪುರ, ಸೋಮನಿಂಗ ಮಗದುಮ್ಮ, ಮಾರುತಿ ಮಗದುಮ್ಮ, ಮಲಕು ಚೌಧರಿ, ಚನ್ನಬಸು ಜಾಲಿಹಾಳ ಮತ್ತು ಗುತ್ತಿಗೆದಾರರಾದ ಜೆ.ಸಿ. ನದಾಫ, ಶಿವಾನಂದ ಇಬ್ರಾಹಿಮಪುರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 