ಸಂಚಾರಿ ಸಮಸ್ಯೆ ನಿವಾರಿಸಲು ಯಲ್ಲಮ್ಮನ ತಾಂಡಾ ಮುಖ್ಯ ರಸ್ತೆಯ ಅಗಲೀಕರಣ

ಸಂಚಾರಿ ಸಮಸ್ಯೆ ನಿವಾರಿಸಲು ಯಲ್ಲಮ್ಮನ ತಾಂಡಾ ಮುಖ್ಯ ರಸ್ತೆಯ ಅಗಲೀಕರಣ Widening of the main road in Yallammana Tanda to alleviate traffic problems

       ಉಗರಗೋಳ 23 : . ಸಂಚಾರಿ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಯಲ್ಲಮ್ಮನ ತಾಂಡಾ ಮುಖ್ಯ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಅಗಲೀಕರಣ ಮಾಡಲಾಗುತ್ತಿದೆ ಎಂದು ಶಾಸಕ ವಿಶ್ವಸ್ ವೈದ್ಯ ಹೇಳಿದರು. ಸವದತ್ತಿ ತಾಲೂಕಿನ ಯಲ್ಲಮ್ಮಾ ತಾಂಡಾದಲ್ಲಿ ಸೋಮವಾರ ಸನ್ 2025-26 ನೇ ಸಾಲಿನ ಮುಖ್ಯ ಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ದಿ ಯೋಜನೆ ಅಡಿ ರೂ 80 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗರ ಭೊಮಿ ಪೂಜಾ ನೇರವೆರಿಸಿ ಮಾತನಾಡಿದ ಅವರು. ಮಲಪ್ರಭೆ ದಡದ ಪಕ್ಕದಲ್ಲೇ ಇರುವ,  ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿವಂದಾದ ಕ್ಷೇತ್ರ ಯಲ್ಲಮ್ಮನಗುಡ್ಡವು, ಜಾತಿ ಬೇಧ ಮರೆತು, ಸರ್ವಧರ್ಮೀಯರು ಯಲ್ಲಮ್ಮನ ಸಾನ್ನಿಧ್ಯಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಭಕ್ತರಿಗೆ ಉಗರಗೋಳ ಮಾರ್ಗ ಹಾಗೂ ಯಲ್ಲಮ್ಮನ ಗುಡ್ಡದಿಂದ ರಟ್ಟರ ಕೋಟೆ ನೋಡಲು ಹೊಗುವ ಭಕ್ತರಿಗೆ ಯಲ್ಲಮ್ಮಾ ತಾಂಡಾ ಮಾರ್ಗವನ್ನು ಅಗಲಿಕರಣ ಹಾಗೂ ತಾಂಡಾ ಗ್ರಾಮದಲ್ಲಿನ ಗಟಾರಗಳನ್ನು ಹಂತ ಹಂತವಾಗಿ ನವೀಕರಿಸಲಾಗುವುದು ಎಂದರು. 

        ಯಲ್ಲಮ್ಮಾ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿದ್ಧನಗೌಡ ಗೂಡರಾಸಿ, ಮಾಜಿ ಜಿಪಂ ಸದಸ್ಯ ಭೀಮಶಿ ಲಮಾಣಿ, ಮಲ್ಲು ಜಕಾತಿ, ಪ್ರಭು ಪ್ರಭುನವರ, ಎಚ್‌ಎ ಕದ್ರಾಪೂರ, ಚಂದ್ರು ಜಂಬ್ರ,  ಶಿವಾನಂದ ಪಟ್ಟಣಶೇಟ್ಟಿ, ಮಂಜು ಪಾಚಂಗಿ, ಬಸವರಾಜ ಅರಮನಿ, ಪ್ರಕಾಶ ಭಿ ಲಮಾಣಿ, ರಾಮಾಚಾರಿ ಲಮಾಣಿ, ಸಂತೋಷ ಲಮಾಣಿ, ಪ್ರಕಾಶ ರಾ ಲಮಾಣಿ, ನಾಗರಾಜ ಬಡೆಪ್ಪನವರ, ವಿಜಯ ಲಮಾಣಿ, ಪುಂಡಲೀಕ ಚವ್ಹಾಣ, ಶಂಕರ ಲಮಾಣಿ, ಚಂದ್ರು ಕಾರಬಾರಿ, ರಮೇಶ ಲಮಾಣಿ, ಗೋಪಾಲ ಲಮಾಣಿ, ಬಸವರಾಜ ಹಂಪಣ್ಣವರ, ವೀರಭದ್ರ ಪಟ್ಟಣಶೇಟ್ಟಿ, ಕ್ರೀಷ್ಣಾ ಲಮಾಣಿ, ನಿಂಗಪ್ಪ ಹಾದಿಮನಿ, ಬಸವರಾಜ ಗುರಲಿಂಗನವರ, ಹಾಗೂ ಯಲ್ಲಮ್ಮನಗುಡ್ಡ ತಾಂಡಾದ ಸಮಸ್ತ ಗುರು-ಹಿರಿಯರು ಇದ್ದರು.