ವಿವಿಪ್ಯಾಟ್ ರಸೀತಿ ಪರಿಶೀಲನೆ ಏಕೆ ಸಾಧ್ಯವಿಲ್ಲ; ಸುಪ್ರೀಂಕೋಟರ್್ ಪ್ರಶ್ನೆ

ನವದೆಹಲಿ, ಮಾ 25 (ಯುಎನ್ಐ) ದೇಶಾದ್ಯಂತ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ದೇಶದ ಎಲ್ಲ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಯಂತ್ರಗಳ ಜೊತೆಗೆ ಅಳವಡಿಸಿರುವ ವಿವಿಪ್ಯಾಟಗಳ ರಸೀತಿಗಳನ್ನು ಲೆಕ್ಕ ಹಾಕಿ ಪರಿಶೀಲಿಸುವ ಸಾಧ್ಯತೆಗಳು ಹಾಗೂ ಸವಾಲುಗಳ ಕುರಿತು ವಿಸ್ತೃತ ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋಟರ್್ ಸೋಮವಾರ ಸೂಚಿಸಿದೆ.  

ಸದ್ಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಂದು ಮತಗಟ್ಟೆಯ ವಿವಿಪ್ಯಾಟ್ ರಸೀತಿಗಳನ್ನು ಮಾತ್ರ ಲೆಕ್ಕ ಹಾಕಿ ಮತದಾನದ ಸಂಖ್ಯೆಯೊಂದಿಗೆ ತಾಳೆ ಹಾಕಲಾಗುತ್ತಿದೆ. ಈ ಕ್ರಮವನ್ನು ಎಲ್ಲ ಮತಗಟ್ಟೆಗಳಿಗೂ ವಿಸ್ತರಿಸಲು ಇರುವ ಸಮಸ್ಯೆಗಳೇನು? ಎಂದು ಮುಖ್ಯ ನ್ಯಾಯಮೂತರ್ಿ ರಂಜನ್ ಗೋಗೊಯಿ ನೇತೃತ್ವದ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.  

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಹಲವು ಎನ್ ಡಿಎಯೇತರ ಪಕ್ಷಗಳು  ಹಾಗೂ ವಿವಿಧ ನಾಯಕರು ಸಲ್ಲಿಸಿರುವ ಅಜರ್ಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತರ್ಿ ರಂಜನ್ ಗೋಗೊಯಿ ನೇತೃತ್ವದ ದ್ವಿಸದಸ್ಯ ಪೀಠ ಈ ನಿದರ್ೆಶನ ನೀಡಿದೆ. ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಲಾಗಿದೆ.  

ವಿಚಾರಣೆ ವೇಳೆ ವಿವಿಪ್ಯಾಟ್ ಅಳವಡಿಕೆ ಕುರಿತು ವಿವರಣೆ ನೀಡಿದ ಕೇಂದ್ರ ಚುನಾವಣಾ ಆಯೋಗ, ಮತದಾನಕ್ಕೆ ಬಳಸುವ ವಿದ್ಯುನ್ಮಾನ ಯಂತ್ರಗಳ ದೃಢೀಕರಣಕ್ಕೆ ಪ್ರತಿ ವಿಧಾನಸಭಾ ಚುನಾವಣೆಯ ಒಂದು ಮತಗಟ್ಟೆಯ ವಿವಿಪ್ಯಾಟ್ ರಸೀತಿಯನ್ನು ಲೆಕ್ಕ ಹಾಕಲಾಗುತ್ತದೆ. ಈ ವಿಧಾನದಿಂದ ಹಿಂದಿನ ಚುನಾವಣೆಯಲ್ಲಿ ತೃಪ್ತಿದಾಯಕ ಫಲಿತಾಂಶ ಲಭಿಸಿದೆ. ಆದರೆ, ಈ ಕುರಿತು ಹೆಚ್ಚಿನ ಸಲಹೆ ಸೂಚನೆಗಳನ್ನು ಸ್ವೀಕರಿಸಲು ತಾವು ಸಿದ್ಧರಿರುವುದಾಗಿ ತಿಳಿಸಿತು. 

ಇದನ್ನೊಪ್ಪದ ನ್ಯಾಯಪೀಠ, ಅದನ್ನು ಎಲ್ಲ ಮತಗಟ್ಟೆಗಳಿಗೆ ವಿಸ್ತರಿಸಬಾರದೇಕೆ? ನ್ಯಾಯಾಂಗ ಸೇರಿ ಯಾವುದೇ ಸಂಸ್ಥೆಗಳು ಸುಧಾರಣೆಯಿಂದ ಹಿಂದೆ ಉಳಿಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.  

ಆಗ ಅಜರ್ಿದಾರರ ಪರ ವಕೀಲರು, ಎಲ್ಲ ಮತಗಟ್ಟೆಗಳ ವಿವಿಪ್ಯಾಟ್ ರಸೀತಿ ಲೆಕ್ಕ ಹಾಕಲು ಮೂರರಿಂದ ನಾಲ್ಕು ಗಂಟೆಗಳ ಹೆಚ್ಚುವರಿ ಸಮಯ ಬೇಕಾಗಬಹುದಷ್ಟೇ. ಅದು ಚುನಾವಣಾ 

ಸಿಬ್ಬಂದಿಗೆ ಕಷ್ಟದ ಕೆಲಸವೇನಲ್ಲ.  ಚುನಾವಣಾ ಆಯೋಗ ಕನಿಷ್ಠ ಶೇ.50ರಷ್ಟು ಮತಗಟ್ಟೆಗಳ ವಿವಿಪ್ಯಾಟ್ ರಸೀತಿಗಳನ್ನು ಪರಿಶೀಲಿಸಬೇಕು ಎಂದು ವಾದಿಸಿದರು.  

ಈ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ರಾಜಕೀಯ ನಾಯಕರಾದ ಶರದ್ ಪವಾರ್, ಕೆ.ಸಿ.ವೇಣುಗೋಪಾಲ್, ಡೇರಿಕ್ ಒಬ್ರಿಯೇನ್, ಶರದ್ ಯಾದವ್, ಅಖಿಲೇಶ್ ಯಾದವ್, ಸತೀಶ್ ಚಂದ್ರ ಮಿಶ್ರಾ, ಎಂ.ಕೆ.ಸ್ಟಾಲಿನ್, ಟಿ.ಕೆ.ರಂಗರಾಜನ್, ಮನೋಜ್ ಕೆ. ಝಾ, ಫಾರುಕ್ ಅಬ್ದುಲ್ಲಾ, ಎಸ್.ಎಸ್.ರೆಡ್ಡಿ, ಡ್ಯಾನಿಶ್ ಅಲಿ, ಅಜಿತ್ ಸಿಂಗ್,  ಮೊಹಮದ್ ಬದ್ರುದ್ದೀನ್ ಅಜ್ಮಲ್, ಜಿತಿನ್ ರಾಮ್ ಮಾಂಜಿ ಮತ್ತಿತರರು ಅಜರ್ಿ ಸಲ್ಲಿಸಿದ್ದಾರೆ.