ಯಾರಿಗೇಳೋನ ನಮ್ಮ ಸಮಸ್ಯೆಯನ್ನ? ಪರಿಹರಿಸುವಿರಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೇ?

ಶಶಿಧರ ಶಿರಸಂಗಿ 

ಶಿರಹಟ್ಟಿ 03: ಪಟ್ಟಣದ ಜನಭೀಡಿತ ಪ್ರದೇಶಗಳಲ್ಲಿ ಒಂದಾದ ವಿದ್ಯಾನಗರದ ಎಡ-ಬಲ ತುದಿಗಳಲ್ಲಿ ಗಿಡಗಳು ಬೆಳೆದಿದ್ದೂ ನೋಡಲು ಸುಂದರವಾಗಿ ಕಾಣುತ್ತಿವೆ ಆದರೆ ರಸ್ತೆ ಬದಿಯಲ್ಲಿನ ವಿದ್ಯುತ್ ತಂತಿಗೆ ತಗಲುವಂತೆ ಗಿಡಗಳು ಎತ್ತರವಾಗಿ ಬೆಳೆದಿದ್ದೂ ಎಲ್ಲಿ ಅನಾಹುತ ಸಂಭವಿಸುವದೋ ಎಂಬ ಆತಂಕದಲ್ಲಿ ಅಲ್ಲಿನ ನಿವಾಸಿಗಳು ಕಾಲಕಳೆಯತ್ತಿದ್ದಾರೆ.

ಬೆಳಗಾದರೆ ಮುಂಜಾನೆಯ ವಾಕ್ಗಾಗಿ ತಾಲೂಕ ಕ್ರೀಡಾಂಗಣಕ್ಕೆ ಹೋಗುವ ಮಹಿಳೆಯರು ಮತ್ತು ವಯಸ್ಕರು, ಆಟವಾಡಲು ಹೋಗುವ ಹದಿಹರೆಯದ ಹುಡುಗರು, ಕಾಲೇಜ್ ಹಾಗೂ ಪ್ರೌಢಶಾಲೆಗೆ ಹೋಗುವ ವಿದ್ಯಾಥರ್ಿಗಳು ಹೀಗೆ ಪ್ರತಿನಿತ್ಯ ಪ್ರತಿವೇಳೆ ಜನರು ಓಡಾಡುವ ರಸ್ತೆಮಾರ್ಗ ವಿದ್ಯಾನಗರದ್ದಾಗಿದೆ. ಬಹುತೇಕ ಪ್ರಜ್ಞಾವಂತರ ನಿವಾಸಿಗಳೇ ಇರುವ ಪ್ರದೇಶವಾಗಿದ್ದು ಹಿಂದೊಮ್ಮೆ ಪರಿಸರ ರಕ್ಷಣೆ ಹಾಗೂ ಪರಿಸರ ಕಾಳಜಿಯಿಂದ ನೆಟ್ಟ ಗಿಡಗಳು ಈಗ ಹೆಮ್ಮರವಾಗಿ ಬೆಳೆದು ನಿಂತಿವೆ. ಇದೇ ಈಗ ಅವರ ನೆಮ್ಮದಿಗೆ ಭಂಗತಂದಿರುವದು ವಿಪಯರ್ಾಸದ ಸಂಗತಿ.

ನೋಡಲು ಸುಂದರವಾಗಿ ಕಾಣುವ ಬೆಳೆದುನಿಂತ ಈ ಗಿಡಗಳು ಗಾಳಿ ಬಿಸಿದಾಗ, ಈ ಗಿಡ ಮರಗಳ ಸಮೀಪದಲ್ಲಿಯೇ ಹಾದು ಹೋಗಿರುವ ವಿದ್ಯುತ ತಂತಿಗೆ ತಗುಲಿ ಗಿಡಗಳ ಎಲೆಗಳು ಉದುರಿ ಹೋಗುತ್ತಿವೆ. ಅಷ್ಟೆಯಲ್ಲದೆ ಕೆಲವೊಮ್ಮೆ ಗಿಡಗಳ ಟೊಂಗಿಗಳು ವಿದ್ಯುತ ತಂತಿಗಳಿಗೆ ತಾಕಿದಾಗ ಬೆಂಕಿಯ ಖೀಡಿ ಕೂಡಾ ಸಂಭವಿಸುತ್ತದೆ ಎಂದು ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.