ವಿದ್ಯಾರ್ಥಿಗಳಿಗೆ ಪಠ್ಯಗಳಾಗಿ ರೂಪಗೊಂಡಾಗ ಯುವಜನತೆ ಅದರ ಕಡೆ ಗಮನ ಹರಿಸಲು ಸಾಧ್ಯ:ಎಸ್‌. ಪನ್ನರಾಜ

ವಿದ್ಯಾರ್ಥಿಗಳಿಗೆ ಪಠ್ಯಗಳಾಗಿ ರೂಪಗೊಂಡಾಗ ಯುವಜನತೆ ಅದರ ಕಡೆ ಗಮನ ಹರಿಸಲು ಸಾಧ್ಯ:ಎಸ್‌. ಪನ್ನರಾಜ When it is formulated as a text for students, the youth can pay attention to it: S. Pannaraja

              ಬಳ್ಳಾರಿ 18:   (18)ರಂದು ನಗರದಲ್ಲಿ ಬದುಕಿನ ವಾಸ್ತವದಲ್ಲಿ ಮತ್ತು ಸಮಾಜದ ವ್ಯವಸ್ಥೆಯಲ್ಲಿ ನಮ್ಮೊಳಗೊಬ್ಬ ಗಾಂಧಿ ಇದ್ದಾನೆ  ಎಸ್ ಪನ್ನರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ      ಅಹಿಂಸೆ ಮೂಲಕ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯ ಎಂದು ನಾವೆಲ್ಲರೂ ಕಂಡು ಕೊಳ್ಳಬೇಕಾಗಿದೆ. ರಂಗ ಜಂಗಮ ಸಂಸ್ಥೆ ಡಿ. ಕಗ್ಗಲ್ ಸಂಗೀತ ಅಲಾಪ್ ಸಂಗೀತ ಕಲಾ ಟ್ರಸ್ಟ್‌ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ರಂಗೋತ್ಸವ 2026ರ ಕಾರ್ಯಕ್ರಮವನ್ನು ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.  ಗಾಂಧಿ ಅಹಿಂಸೆಯ ಮೂಲಕ ದೇಶದ ಸ್ವತಂತ್ರಕ್ಕೆ ಮತ್ತು ಪ್ರತಿ ಹಳ್ಳಿಯ ಸಮಾಜದಲ್ಲಿನ ಸಮಾನತೆಯ ಪರವಾಗಿ  ಯೋಚಿಸುವಂತೆ ಮಾಡುವ ವ್ಯಕ್ತಿತ್ವವನ್ನು ಹೊಂದಿದ್ದರು ಅಂತಹ ಗಾಂಧಿ ಪ್ರಸ್ತುತ ವರ್ತಮಾನಕ್ಕೆ ಪುನಃ ಬಂದರು ತಪ್ಪಿಲ್ಲ ಹಾಗೆ ಗಾಂಧಿಯ ತತ್ವ ವಿಚಾರಗಳು ವಿಶ್ವವಿದ್ಯಾಲಯಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿ ರೂಪಗೊಂಡಾಗ ಯುವಜನತೆ ಅದರ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂಬುದಾಗಿ ನುಡಿದರು.

           ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ ಶಿವಲಿಂಗಪ್ಪ ಹಂದ್ಯಾಳ್ ಅವರಿಗೆ ಗೌರವ ಸನ್ಮಾನ ಮಾಡಿದ ನಂತರ ಮಾತನಾಡುತ್ತಾ ದೇಶದ ಸ್ವಾತಂತ್ರ್ಯಕ್ಕೆ ಅಷ್ಟೇ ಅಲ್ಲದೆ ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಕೂಡ ಧ್ವನಿ ಎತ್ತಿದವರು ಎಂಬುದಾಗಿ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕಂಪ್ಲಿ ಈರಣ್ಣ ಅವರನ್ನು ಕೂಡ ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಗೋವರ್ಧನ್ ರೆಡ್ಡಿ ಗೇಣಕಿಹಾಳ್ ಶಿಕ್ಷಕರು ಕಾರ್ಯಕ್ರಮದ ಸ್ವಾಗತವನ್ನು ಅಲಾಪ್ ಸಂಗೀತ ಕಲಾ ಟ್ರಸ್ಟ್‌ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ಹಾಗೂ ಕಾರ್ಯಕ್ರಮದ ನಿರೂಪಣೆ ಯನ್ನು ಆಲಂಭಾಷ ಅವರು ನೆರವೇರಿಸಿದರು.ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ತಾಂಡವ ನೃತ್ಯ ವಿನೋದ್ ಮತ್ತು ತಂಡದವರು ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಿದರು.

          ನಂತರ ಶಿವಮೊಗ್ಗ ರಂಗಾಯಣದಿಂದ ನಮ್ಮೊಳಗೊಬ್ಬ ಗಾಂಧಿ ಡಿಎಸ್ ಚೌಗಲೆ ರಚನೆಯ ನಾಟಕ ನಿರ್ದೇಶನವನ್ನು ಚಿದಂಬರ ರಾವ್ ಜಂಬೆಯವರ ಮಾಡಿದರು ಹಾಗೂ ನಾಟಕ ಅದ್ಬುತವಾಗಿ ಪ್ರದರ್ಶನ ಮೂಡಿಬಂದಿತು. ಈ ಸಂದರ್ಭದಲ್ಲಿ ವಿ ರಾಮಚಂದ್ರ​‍್ಪ ರಂಗಭೂಮಿ ಕಲಾವಿದರು,ಎನ್ ಪ್ರಕಾಶ್ ಗೌರವ ಕಾರ್ಯದರ್ಶಿಗಳು ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ  ಎಸ್ ದೊಡ್ಡನಗೌಡ, ಕಪ್ಪಗಲ್ಲು ಪ್ರಭುದೇವ,ಅಡವಿ ಸ್ವಾಮಿ ,ಮುದ್ದಟನೂರು ತಿಪ್ಪೇಸ್ವಾಮಿ, ಸುಬ್ಬಣ್ಣ, ವನ್ನೂರಸ್ವಾಮಿ, ಅಂಬರೇಶ ಮತ್ತು ಕಲಾಭಿಮಾನಿಗಳು, ಮುಂತಾದವರು ಭಾಗವಹಿಸಿ ಯಶಸ್ವಿಗೊಳಿಸಿದರು.