ಪೇನ್ ಕೊಡುವ ಮೂಲಕ ಡಿಸಿಗೆ ಸ್ವಾಗತ
ಹಾವೇರಿ07: ನೂತನವಾಗಿ ಹಾವೇರಿ ಜಿಲ್ಲೆಗೆ ಆಗಮಿಸಿರುವ ಜಿಲ್ಲಾಧಿಕಾರಿ ಕೃಷ್ಣಾ ಬಾಜಿಪೆಯಿ ಅವರಿಗೆ ಕನರ್ಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಮರ್ೂಲನಾ ಸಮಿತಿ ಪದಾಧಿಕಾರಿಗಳು ಪೇನ್ ಕೊಡುವ ಮೂಲಕ ಹಾವೇರಿ ಜಿಲ್ಲೆಗೆ ಸ್ವಾಗತಿಸಿದ್ದರು.
ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ ಟೀಕೆಹಳ್ಳಿ ಮಾತನಾಡಿ ಹಾವೇರಿ ಜಿಲ್ಲೆಯಾಗಿ 20 ವರ್ಷ ಕಳೆದರೂ ಹಾವೇರಿ ಜಿಲ್ಲೆ ಒಂದು ದೊಡ್ಡ ಹಳ್ಳಿಯಾಗಿ ಉಳಿದಿದೆ ಹಾವೇರಿ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೂ ಹವಲಾರು ಶಾಸಕರು, ಜಿಲ್ಲಾ ಉಸ್ತುವಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬಂದು ಹೋಗಿರುತ್ತಾರೆ ಆದರೆ ಇಲ್ಲಿಯವರೇಗೂ ಹಾವೇರಿ ಜಿಲ್ಲೆ ಯಾವುದೇ ರೀತಿ ಅಭಿವೃದ್ದಿ ಕಂಡಿರುವುದಿಲ್ಲಾ, ನೀವು ಜಿಲ್ಲೆಗೆ ಬಂದಾಗ ಎಲ್ಲರೂ ನಿಮ್ಮಗೆ ಹೂ ಗುಚ್ಚ ಕೊಡವ ಮೂಲಕ ಸ್ವಾಗತ ಕೋರಿರುತ್ತಾರೆ ಆದರೆ ನಾವುಗಳು ನಿಮ್ಮಗೆ ಹೂ ಗುಚ್ಚ ಕೊಡದೆ ನಿಮ್ಮಗೆ ಒಂದು ಪೇನ್ನ್ನು ನೀಡುವ ಮೂಲಕ ಸ್ವಾಗತ ಕೋರುತ್ತಿದ್ದೇವೆ. ಕಾರಣ ತಾವುಗಳು ಈ ಪೇನ್ ನಿಂದ ಹಾವೇರಿ ಜಿಲ್ಲೆಯಲ್ಲಿರುವ ರೈತರ ಸಮಸ್ಯೆ, ಕೂಲಿ ಕಾಮರ್ಿಕ ಸಮಸ್ಯೆ, ವಿದ್ಯಾಥರ್ಿಗಳ ಸಮಸ್ಯೆ ಜಿಲ್ಲೆಯಲ್ಲಿರುವ ರಸ್ತೆ ಚಂರಡಿಗಳ ಸಮಸ್ಯೆ ಈ ರೀತಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸುವುದರ ಜೊತೆಗೆ ಜಿಲ್ಲಾ ಹಾಗೂ ತಾಲೂಕ ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟಬೇಕೆಂದು ನೂತನ ಜಿಲ್ಲಾಧಿಕಾರಿ ಕೃಷ್ಣಾ ಬಾಜಿಪೆಯಿ ಅವರಿಗೆ ಮನವಿ ಮಾಡಿದ್ದರು. ರಾಜ್ಯ ಗೌರಾಧ್ಯಕ್ಷರಾದ ಶಿವಶಂಕರ ಟಿ, ರಾಜ್ಯ ಉಪಾಧ್ಯಕ್ಷ ಹರೀಶ್ ಎಸ್ ಇಂಗಳಗೊಂದಿ, ಲಕ್ಷ್ಮೀ ಜಿಗಾಂಡೆ, ಜಿಲ್ಲಾ ಸಂಚಾಲಕ ಮಾಲತೇಶ ಪಾಟೀಲ್, ವಿಷ್ಣು ಜಿಗಾಂಡೆ ಮತ್ತು ಶಿವರಾಜ ಮಾಳಗಿ ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 