ಪತ್ರಿಕೆ ಓದುವ ಮನೋಭಾವ ಬೆಳೆಸಿಕೊಳ್ಳಬೇಕು - ಸತ್ಯನಾರಾಯಣ
We should cultivate the attitude of reading newspapers - Satyanarayana
ಪತ್ರಿಕೆ ಓದುವ ಮನೋಭಾವ ಬೆಳೆಸಿಕೊಳ್ಳಬೇಕು - ಸತ್ಯನಾರಾಯಣ
ಹೂವಿನಹಡಗಲಿ 30: ಸ್ವಾಭಿಮಾನದಿಂದ ಬದುಕುವ ಪತ್ರಕರ್ತರ ಬದುಕು ದುಸ್ಥರವಾಗಿದ್ದು. ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈಚೆಗೆ ಪತ್ರಿಕೆ ಓದುವ ಸಂಖ್ಯೆ ಕಡಿಮೆಯಾಗಿದೆ ಎಂದು ಕಾ.ನಿ.ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷ ಸತ್ಯನಾರಾಯಣ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್‌ಕುಮಾರೇಶ ಸಭಾಂಗಣದಲ್ಲಿ ಬುಧವಾರತಾಲ್ಲೂಕುಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತ್ತೀಚೆಗೆ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಭಿತ್ತರವಾಗತೊಡಗಿದ ನಂತರ ಪ್ರಭಾವ ಕೊಂಚಮಟ್ಟಿಗೆ ತಗ್ಗಿದೆ ಎನಿಸಿದರೂ, ಇಂದಿಗೂ ಹಲವು ಪತ್ರಿಕೆಗಳು ಪ್ರಭಾವಶಾಲಿಯಾಗಿ ಮುಂದುವರಿದಿವೆ ಎಂದರು.
ಪತ್ರಕರ್ತರ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಮಾತನಾಡಿ ಪತ್ರಕರ್ತರು ಬದುಕುದುಸ್ಥರ ಮಧ್ಯಕೂಡಾ ಸಮಾಜ ಮುಖಿ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳು ಪತ್ರಿಕೆಯನ್ನುಕೊಂಡು ಓದಿ ಎಂದರು. ಗವಿಮಠದಡಾ.ಹಿರಿಶಾಂತವೀರ ಸ್ವಾಮೀಜಿ ಸಾನಿದ್ಯ ವಹಿಸಿಆಶೀರ್ವಾಚನ ನೀಡಿದರು.ಪತ್ರಕರ್ತ ಸಂಘದಅದ್ಯಕ್ಷ ಎಂ.ಪಿ.ಎಂ.ಶಿವಪ್ರಕಾಶ್ ಅದ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ಸಂಘದಜಿಲ್ಲಾ ಕಾರ್ಯದರ್ಶಿ ಸಿ.ಕೆ.ನಾಗರಾಜ ಇದ್ದರು.ಇದೇ ವೇಳೆ ನಾನಾ ರಂಗದಲ್ಲಿ ಸೇವೆ ಸಲ್ಲಿಸಿದ ಡಾ.ಎಂ.ಧರ್ಮಣ್ಣ. ಚಾಲಕ ಕೆ.ಪ್ರಭಾಕರ. ಚಾರಣಿಟೆಲಿ ಚಿತ್ರದ ನಾಯಕಎಸ್.ಕ್ರಾಂತಿಅವರನ್ನು ಸನ್ಮಾನಿಸಲಾಯಿತು. ಪಿ.ವೀರಣ್ಣ ಸ್ವಾಗತಿಸಿದರು.ವಿಶ್ವನಾಥ ಹಳ್ಳಿಗುಡಿ ಪ್ರಾಸ್ತಾವಿಕ ಮಾತನಾಡಿದರು.ಮಧುಸೂದನ್ ನಿರೂಪಿಸಿದರೆ ಹೆಚ್.ಚಂದ್ರ್ಪ ವಂದಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 