ಹಾರ್ನಬಿಲ್ ಸಂರಕ್ಷಣೆಗೆ ನಾವೆಲ್ಲರೂ ಹೆಚ್ಚಿನ ಒತ್ತು ನೀಡಬೇಕು : ಶಾಸಕ ಆರ್.ವಿ. ದೇಶಪಾಂಡೆ
We should all give more emphasis to hornbill conservation: MLA R.V. Deshpande
ದಾಂಡೇಲಿ 17 : ಹಾರ್ನಬಿಲ್ ಹಬ್ಬ ಕೇವಲ ಇಲಾಖೆಯ ಹಬ್ಬವಾಗದೆ, ಅದು ಎಲ್ಲ ಸಾರ್ವಜನಿಕರ ಮತ್ತು ವಿಶೇಷವಾಗಿ ಮಕ್ಕಳ ಹಬ್ಬವಾಗಬೇಕು ಎಂದು ಆಡಳಿಯ ಸುಧಾರಣಾ ಆಯೋಗದ ಅಧ್ಯಕ್ಷರು ಸ್ಥಳೀಯ ಶಾಸಕರಾದ ಆರ್.ವಿ. ದೇಶಪಾಂಡೆ ನುಡಿದರು. ಅವರು ಹಳಿಯಾಳ ಅರಣ್ಯ ವಿಭಾಗದಿಂದ ದಾಂಡೇಲಿಯ ಮರಮಟ್ಟು ಕೋಠಿ ಆವರಣದಲ್ಲಿರುವ ಹಾರ್ನಬಿಲ್ ಭವನದಲ್ಲಿ ಎರಡು ದಿನಗಳ ಕಾಲ ಜರುಗಿದ ಹಾರ್ನಬಿಲ್ ಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಹಾರ್ನಬಿಲ್ ಪಕ್ಷಿ ಈ ಭಾಗದಲ್ಲಿ ನಾಲ್ಕು ಪ್ರಭೇದಗಳಿದ್ದು ಅವುಗಳ ಸಂರಕ್ಷಣೆಗೆ ನಾವೆಲ್ಲರೂ ಹೆಚ್ಚಿನ ಒತ್ತು ನೀಡಬೇಕಾಗಿದೆ. ವನ್ಯಜೀವಿಗಳು ಮತ್ತು ಪಕ್ಷಿಗಳಿಂದ ಕೂಡಿದ ಆರೋಗ್ಯಕರವಾದ ಪರಿಸರವನ್ನು ನಾವು ಹೊಂದಿದ್ದೆವೆ.
ಇದು ನಮ್ಮ ಅದೃಷ್ಟ. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಶಾಸಕ ಶಾಂತಾರಾಮ ಸಿದ್ದಿ ಮಾತನಾಡಿ ಹಾರ್ನಬಿಲ್ ಪಕ್ಷಿಯ ಸಂರಕ್ಷಣೆಗೆ ಹೆಚ್ಚು ಒತ್ತ್ತು ನೀಡಿ ಹಬ್ಬ ಆಚರಿಸುತ್ತಿರುವದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಕೆನರಾ ವೃತ್ತದ ಸಿ.ಸಿಎಫ್ ಹೀರಾಲಾಲ ಅವರು ಹಾರ್ನಬಿಲ್ ಸಂರಕ್ಷಣೆ ಕುರಿತಂತೆ ಸಾಂದರ್ಭೀಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಆರ್.ವಿ ದೇಶಪಾಂಡೆ ಮತ್ತು ವಿಧಾನ ಪರಿಷತ್ ಶಾಸಕರಾದ ಶಾಂತಾರಾಮ ಸಿದ್ದಿಯವರನ್ನು ಸನ್ಮಾನಿಸಲಾಯಿತು. ಎರಡು ದಿನಗಳ ಕಾಲ ನಡೆದ ಈ ಹಬ್ಬದಲ್ಲಿ ಪಕ್ಷಿ ವೀಕ್ಷಣೆ, ವಿಚಾರಸಂಕೀರ್ಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸ್ಥಳೀಯ ಪಕ್ಷಿ ತಜ್ಞ ರಾಹುಲ್ ಬಾವಾಜಿ , ಜಿ.ಇ. ಉಮೇಶ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ, ತಹಶೀಲದಾರ ಶೈಲೇಶ್ ಪರಮಾನಂದ, ಇ.ಓ ಟಿ.ಸಿ. ಹಾದಿಮನಿ. ಗ್ಯಾರಂಟಿ ಸಮಿತಿ ಅಧ್ಯಕ್ಷ ರಿಯಾಜ ಸೈಯ್ಯದ್ ಮತ್ತು ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 