ಧರ್ಮಸ್ಥಳದ ಧರ್ಮ ರಕ್ಷಣೆಗಾಗಿ ನಾವು: ಎಸ್.ಐ.ಟಿ ತನಿಖೆಗೆ ಬೆಂಬಲಿಸಿ ಮುಖ್ಯಮಂತ್ರಿಗೆ ಮನವಿ
We are for the protection of Dharma in Dharmasthala: Appeal to the Chief Minister in support of the
ಧರ್ಮಸ್ಥಳದ ಧರ್ಮ ರಕ್ಷಣೆಗಾಗಿ ನಾವು: ಎಸ್.ಐ.ಟಿ ತನಿಖೆಗೆ ಬೆಂಬಲಿಸಿ ಮುಖ್ಯಮಂತ್ರಿಗೆ ಮನವಿ
ಕೊಪ್ಪಳ 21: ”ಧರ್ಮಸ್ಥಳದ ಧರ್ಮರಕ್ಷಣೆಗಾಗಿ ನಾವು" ಎಸ್.ಐ.ಟಿ ತನಿಖೆಗೆ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಇವರ ಮೂಲಕ ಗುರುವಾರ ಮನವಿ ಸಲ್ಲಿಸಿದರು. ಮನವಿಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಮಾನುಷ ಘಟನೆಯ ಹಿನ್ನಲೆಯಲ್ಲಿ ಸಾರ್ವಾಜನಿಕರ ಅಭಿಪ್ರಾಯದ ಮೇರೆಗೆ ತಾವು ಎಸ್.ಐ.ಟಿ. ತನಿಖೆಗೆ ಆದೇಶ ನೀಡಿದ್ದು ನಾವೇಲ್ಲರೂ ಖುಷಿ ಪಟ್ಟಿದ್ದೆವು. ತನಿಖೆ ಸರಿದಾರಿಯಲ್ಲಿ ಸಾಗುತ್ತಿರುವಾಗ ರಾಜ್ಯ ಸಚಿವ ಸಂಪುಟದ ಸದಸ್ಯರ ಮತ್ತು ವಿರೋಧ ಪಕ್ಷದ ಸದಸ್ಯರ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಗಳು ಹೊರ ಬಿದ್ದಿದೆ.
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಕಳೆದ ನಾಲ್ಕು ದಶಕಗಳಿಂದ ಅತ್ಯಾಚಾರ, ಕೊಲೆ, ಭೂ ಕಬಳಿಕೆ ಪ್ರಕರಣಗಳು ಬಯಲು ಆಗುತ್ತಲೇ ಇದೆ.ಶಾಲಾ ಕಾಲೇಜುಗಳಿಗೆ ಹೋದ ಹಲವಾರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು, ಆನೆ ಮಾವುತನ ಕುಟುಂಬದವರ ಜಾಗದಲ್ಲಿ ಯಾರು ಹೊಟೇಲ್ ಕಟ್ಟಿದ್ದಾರೆ. ಹಾಗೆ ಶವವಾಗಿ ಸಿಕ್ಕ ಪದ್ಮಲತಾ ಮತ್ತು ಸೌಜನ್ಯಳ ಶವಗಳು, ಮುಂತಾದ ಪ್ರಕರಣಗಳ ತನಿಖೆ ಆಗುವ ಹೊತ್ತಿನಲ್ಲಿ ಎಸ್‌ಐಟಿ ತನಿಖೆರದ್ದಾಗುತ್ತಿದೆ ಎನ್ನುವ ಆಂತಕ ನಮ್ಮಲ್ಲಿ ಮನೆ ಮಾಡಿದೆ.
ಇದರಿಂದ ಪುಣ್ಯ ಕ್ಷೇತ್ರವೆಂದೆ ಕರೆಸಿಕೊಳ್ಳುವ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಇಂಥಾ ಘೋರ ಕೃತ್ಯಗಳನ್ನೆಸಗಿದ ಅಪರಾಧಿಗಳು ಇಂದಿಗೂ ಪತ್ತೆಯಾಗಿಲ್ಲ ಎಂಬುದು ಇನ್ನೂ ಕಳವಳಕಾರಿ ಸಂಗತಿ. ಧರ್ಮಕ್ಷೇತ್ರದಲ್ಲಿ ನಡೆದ ಈ ಪಾತಕಗಳು ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲು.2012 ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದವು. ಈ ಪ್ರಕರಣ ಪ್ರಾಥಮಿಕವಾಗಿ ಬೆಳ್ತಂಗಡಿ ಪೊಲೀಸರು, ಆ ನಂತರ ಸಿಐಡಿ, ಅಂತಿಮವಾಗಿ 2013 ರಲ್ಲಿ ಸಿ.ಬಿ.ಐ.ಗೆ ವರ್ಗಾವಣೆಗೊಂಡು, 2023 ರಲ್ಲಿ ಸಿಬಿಐ ನ್ಯಾಯಾಲಯದಿಂದ ಹೊರಬಿದ್ದ ತೀಪು ಮತ್ತಷ್ಟು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತನಿಖಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಎಸಗಿದ ಗಂಭೀರ ದೋಷಗಳನ್ನು ಬೊಟ್ಟು ಮಾಡಿ ತೋರಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರ್ಟ್ ಆದೇಶಿಸಿದೆ.ಅದೇ ವೇಳೆಗೆ ನಿರಪರಾಧಿಯಾಗಿದ್ದ ಸಂತೋಷ್ ರಾವ್‌ರವರ ಮೇಲೆ ಆರೋಪ ಸಾಬೀತುಪಡಿಸುವ ಯಾವ ಸಾಕ್ಷಿಗಳೂ ಇಲ್ಲವೆಂದು ಹೇಳಿ ಅನಾವಶ್ಯಕವಾಗಿ ಆತನನ್ನು ಜೈಲಿನಲ್ಲಿರಿಸಿದ್ದಕ್ಕೆ ಪರಿಹಾರ ನೀಡಲು ಕೂಡ ಆದೇಶಿಸಿದೆ.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್.ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್.ಜನಪರ ಸಂಘಟನೆಗಳ ಒಕ್ಕೂಟದಅಧ್ಯಕ್ಷಎಸ್.ಎ.ಗಫಾರ್. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಎಮ್.ಹೊಸಮನಿ.
ಬಂದೇ ನವಾಜ್ ಮನಿಯಾರ್.ದಲಿತಯುವ ವೇದಿಕೆ ಸಂಚಾಲಕ ಸಂಕಪ್ಪ ಮೀಸಿ. ಈ ದಿನ.ಕಾಮಿನ ಪ್ರತಿನಿಧಿ ಕೇಶವ್ ಕಟ್ಟಿಮನಿ.ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಮಂಗಳೇಶ್ ರಾಥೋಡ್.ಕೊಳಚೆ ನಿರ್ಮೂಲನಾ ವೇದಿಕೆ ಸಂಚಾಲಕ ಗಾಳೆಪ್ಪ ಮುಂಗೋಲಿ.ರೈಲ್ವೆಜನಪರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು. ಶಿವಪ್ಪ ಹಡಪದ್ ಮುಂತಾದವರು ಆಗ್ರಹಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 